KEA Recruitment 2026: ಖಾಲಿ ಇರುವ SDA ಮತ್ತು FDA ಹುದ್ದೆಗಳಿಗೆ ಅರ್ಜಿ ಆಹ್ವಾನ.

KEA Recruitment 2026

ಬೆಂಗಳೂರು : ಯುವಕರಿಗೆ ಒಂದು ಗುಡ್‌ ನ್ಯೂಸ್‌, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority – KEA) ಭರ್ಜರಿ ಅವಕಾಶ ನೀಡಿದೆ. ಆಸಕ್ತರು ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಸರಿಯಾದ ಮಾಹಿತಿ ಪಡೆದು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಿ.

KEA ವತಿಯಿಂದ 2026ನೇ ಸಾಲಿನ Group-C ಹುದ್ದೆಗಳ ನೇಮಕಾತಿ (Recruitment) ಕುರಿತ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 6 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯಡಿಯಲ್ಲಿ First Division Assistant (FDA) ಹಾಗೂ Second Division Assistant (SDA) ಹುದ್ದೆಗಳು ಸೇರಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ KEA ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

ಹುದ್ದೆಗಳ ವಿವರ (Vacancy Details) :

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
First Division Assistant (FDA)2
Second Division Assistant (SDA)4
ಒಟ್ಟು6

ವಿದ್ಯಾರ್ಹತೆ (Educational Qualification) :

 First Division Assistant (FDA) :

  • ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪೂರ್ಣಗೊಳಿಸಿರಬೇಕು.

Second Division Assistant (SDA) :

  • ಅಭ್ಯರ್ಥಿಗಳು PUC / 12ನೇ ತರಗತಿ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ (Age Limit) :

  • ಕನಿಷ್ಠ ವಯಸ್ಸು : 18 ವರ್ಷ.
  • ಸಾಮಾನ್ಯ ವರ್ಗ (General Merit) : ಗರಿಷ್ಠ 40 ವರ್ಷ.
  • 2A, 2B, 3A, 3B ಅಭ್ಯರ್ಥಿಗಳು : 43 ವರ್ಷ.
  • SC / ST / ಪ್ರವರ್ಗ-1 ಅಭ್ಯರ್ಥಿಗಳು : 45 ವರ್ಷ.

Note : ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ (Age Relaxation) ನೀಡಲಾಗುತ್ತದೆ.

ವೇತನ (Salary) :

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

  • FDA ಹುದ್ದೆ : ₹44,425 ರಿಂದ ₹83,700/-
  • DA ಹುದ್ದೆ : ₹34,100 ರಿಂದ ₹67,700/-

ಇದರ ಜೊತೆಗೆ ಸರ್ಕಾರದ ಇತರೆ ಭತ್ಯೆಗಳು (Allowances) ಕೂಡ ಲಭ್ಯವಾಗಲಿದೆ.

ಇದನ್ನು ಓದಿ : KSP Recruitment 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 41 ಹುದ್ದೆಗಳ ನೇಮಕಾತಿ.

ಅರ್ಜಿ ಶುಲ್ಕ (Application Fee) :

ವರ್ಗಶುಲ್ಕ
General / 2A / 2B / 3A / 3B₹750
SC / ST / Cat-1 / ಮಾಜಿ ಸೈನಿಕರು₹500
ಅಂಗವಿಕಲ ಅಭ್ಯರ್ಥಿಗಳು (PwD)₹250

ಪ್ರಮುಖ ದಿನಾಂಕಗಳು (Important Dates) :

  • ಅರ್ಜಿ ಆರಂಭ ದಿನಾಂಕ : 20 ಮೇ 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03 ಜೂನ್ 2026.
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : 04 ಜೂನ್ 2026.

ಆಯ್ಕೆ ಪ್ರಕ್ರಿಯೆ (Selection Process) :

  • ಅಭ್ಯರ್ಥಿಗಳ ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ (Competitive Examination) ಮತ್ತು ದಾಖಲೆ ಪರಿಶೀಲನೆ (Document Verification) ಮೂಲಕ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ :

ಅರ್ಹ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ:

  • Photograph.
  • Signature.
  • Educational Certificates ಮತ್ತು
  • Caste Certificate ಸೇರಿ ಮುಂತಾದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

Note : ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ನಂತರ Submit ಮಾಡುವುದು ಉತ್ತಮ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಅಧಿಕೃತ ವೆಬ್‌ಸೈಟ್ :

ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು:


Disclaimer: ಮೇಲಿನ ಮಾಹಿತಿಯನ್ನು ಅಧಿಕೃತ ಅಧಿಸೂಚನೆ ಹಾಗೂ ಲಭ್ಯ ಮಾಹಿತಿಗಳ ಆಧಾರದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ Notification ಅನ್ನು ಕಡ್ಡಾಯವಾಗಿ ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸುವುದು ಒಳಿತು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top