ಬಿರು ಬಿಸಿಲಲ್ಲಿ ಕಾರಿನೊಳಗೆ ಸಿಲುಕಿ ನರಳುತ್ತಿದ್ದ ನಾಯಿ; ಮಾನವೀಯತೆಯ ವಿಡಿಯೋ ವೈರಲ್.

ಬಿರು ಬಿಸಿಲಲ್ಲಿ ಕಾರಿನೊಳಗೆ ಸಿಲುಕಿ ನರಳುತ್ತಿದ್ದ ನಾಯಿ

ಗುವಾಹಟಿ : ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿರು ಬಿಸಿಲಲ್ಲಿ ಕಾರಿನೊಳಗೆ ಸಿಲುಕಿ ನರಳುತ್ತಿದ್ದ ನಾಯಿ (ಶ್ವಾನ) ಯನ್ನು ಸಾರ್ವಜನಿಕರೆಲ್ಲ ಸೇರಿ ರಕ್ಷಿಸಿ ಮಾನವೀಯತೆ ಮೆರೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅಸ್ಸಾಂನ ಗುವಾಹಟಿ ನಗರದಲ್ಲಿ ಸಾಕು ಶ್ವಾನಯೊಂದು 4 ಗಂಟೆಗಳ ಕಾಲಕ್ಕಿಂತ ಹೆಚ್ಚು ಲಾಕ್ ಮಾಡಿದ್ದ ಕಾರಿನೊಳಗೆ ಸಿಲುಕಿ ಸಂಕಷ್ಟ ಅನುಭವಿಸಿದ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಸ್ಥಳೀಯರ ಸಮಯೋಚಿತದ ಪರಿಣಾಮ ಮೂಖ ರೋಧನೆಯಲ್ಲಿದ್ದ ಶ್ವಾನದ ಜೀವ ಉಳಿದಿದೆ.

ಮಾಹಿತಿಯ ಪ್ರಕಾರ, ಸಾಕು ಶ್ವಾನವನ್ನು ಕಾರಿನೊಳಗೆ ಬಿಟ್ಟು ಮಾಲೀಕರು ಹೊರಗಡೆ ತೆರಳಿದ್ದರು ಎನ್ನಲಾಗಿದೆ. ಬೆಳಗ್ಗೆಯಿಂದಲೇ ಕಾರಿನೊಳಗಿದ್ದ ಶ್ವಾನ ಮಧ್ಯಾಹ್ನದ ವೇಳೆಗೆ ಹೆಚ್ಚಿದ ಬಿಸಿಲಿನ ತಾಪ ಮತ್ತು ಪೂರ್ತಿ ಮುಚ್ಚಿದ್ದ ಕಾರಿನ ಕಿಟಕಿಗಳಿಂದಾಗಿ ಗಾಳಿಯ ಹರಿವೂ ಇಲ್ಲದರಿಂದ ತೀವ್ರ ಅಸ್ವಸ್ಥತೆಗೊಂಡಿದೆ.

ಸ್ಥಳೀಯರಿಂದ ನಾಯಿ ರಕ್ಷಣೆ ವಿಡಿಯೋ :

 

View this post on Instagram

 

A post shared by Northeast Live (@nelivetv)

Courtesy : Social Media / Instagram   

ಸ್ಥಳೀಯ ನಿವಾಸಿಗಳು ಹಾಗೂ ದಾರಿಹೋಕರು ಕಾರಿನೊಳಗಿನ  ಶ್ವಾನದ ಸ್ಥಿತಿಯನ್ನು ಗಮನಿಸಿ ತಕ್ಷಣವೇ ನಾಯಿಯ ರಕ್ಷಣೆಗೆ ಮುಂದಾಗಿದ್ದಾರೆ. ಮಧ್ಯಾಹ್ನ ಬಿಸಿಲಿನ ತಾಪಮಾನದ ಏರಿಕೆಯಿಂದ ಕಾರಿನ ಒಳಭಾಗವು ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಹೀಗಾಗಿ ನಾಯಿಗೆ ಉಸಿರಾಡಲು ತೊಂದರೆ ಉಂಟಾಗಿರುವುದು ಕಂಡುಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ :

ಶ್ವಾನದ ಸುರಕ್ಷತೆಯ ಬಗ್ಗೆ ಆತಂಕಗೊಂಡ ಸ್ಥಳೀಯರು ಮತ್ತು ಪ್ರಾಣಿ ಪ್ರೇಮಿಗಳು ಒಟ್ಟಾಗಿ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.‌ ಮೊದಲು ಕಾರಿನ ಬಾಗಿಲಿನ ಲಾಕ್‌ ಓಪನ್‌ ಆಗುವವರೆಗೆ ಕಿಟಕಿ ಗ್ಲಾಸ್ ಸ್ವಲ್ಪ ಇಳಿಸಿ ಶ್ವಾನಕ್ಕೆ ನೀರು ಕುಡಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಕಾರಿನ ಲಾಕ್ ತೆರೆಯುವ ಮೂಲಕ ಶ್ವಾನವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ರಕ್ಷಣೆ ಮಾಡಿದ ತಕ್ಷಣ ನಾಯಿಗೆ ಕುಡಿಯಲು ನೀರು ಹಾಗೂ ಅಗತ್ಯ ಪ್ರಾಥಮಿಕ ಆರೈಕೆ (First Aid) ಮಾಡಲಾಯಿತು. ಬಳಿಕ ಅದನ್ನು ಸ್ಥಳೀಯ ಪ್ರಾಣಿ ಕಲ್ಯಾಣ ಸಂಸ್ಥೆಯ (Animal Welfare Organization) ವಶಕ್ಕೆ ನೀಡಲಾಗಿದೆ.

ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಾಯಿ :

ಪ್ರಾಣಿ ಕಲ್ಯಾಣ ಸಂಸ್ಥೆಯ ಸ್ವಯಂಸೇವಕರು ಶ್ವಾನದ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಆರೈಕೆಯನ್ನು ನೀಡುತ್ತಿದ್ದಾರೆ. ಪ್ರಸ್ತುತ ಶ್ವಾನ ಸುರಕ್ಷಿತವಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಇದನ್ನು ಓದಿ : ಬ್ಯಾಗ್ ಕದಿಯಲು ಬಂದ ಖದೀಮರಿಗೆ ಶಾಕ್ ಕೊಟ್ಟ ಮಹಿಳೆ; ವಿಡಿಯೋ ವೈರಲ್.

ಇನ್ನು ವೈರಲ್ ಆಗಿರುವ ಈ ವಿಡಿಯೋ ಹಾಗೂ ಲಭ್ಯ ಮಾಹಿತಿಯ ಪ್ರಕಾರ, ಪ್ರಾಣಾಪಾಯಕ್ಕೆ ಒಳಗಾಗುವಂತೆ ನಾಯಿಯನ್ನು ಕಾರಿನೊಳಗೆ ಬಿಟ್ಟು ಹೋಗಿದ್ದ ಮಾಲೀಕನ ಗುರುತಾಗಲ್ಲಿ ಅಥವಾ ಆತ ಯಾವಾಗ ವಾಪಸ್ ಬಂದ ಎಂಬ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಬೇಕಿದೆ.

ಮನವಿ :

ತಜ್ಞರ ಪ್ರಕಾರ, ಬಿಸಿಲಿನ ಸಮಯದಲ್ಲಿ ನಿಲ್ಲಿಸಿದ ವಾಹನದೊಳಗಿನ ತಾಪಮಾನ ಕೆಲವೇ ನಿಮಿಷಗಳಲ್ಲಿ ವೇಗವಾಗಿ ಏರಿಕೆಯಾಗುತ್ತದೆ. ಇದರಿಂದ ಸಾಕುಪ್ರಾಣಿಗಳಿಗೆ ಉಸಿರುಗಟ್ಟುವಿಕೆ, ನಿರ್ಜಲೀಕರಣಹಾಗೂ ಶಾಖದ ಹೊಡೆತ  ಉಂಟಾಗುವ ಅಪಾಯ ಹೆಚ್ಚಾಗುತ್ತದೆ ಎಂದಿದ್ದಾರೆ.

ಹಾಗೆಯೇ ಯಾವುದೇ ಸಂದರ್ಭದಲ್ಲೂ ಸಾಕುಪ್ರಾಣಿಗಳನ್ನು ಮುಚ್ಚಿದ ಕಾರಿನೊಳಗೆ ಒಂಟಿಯಾಗಿ ಬಿಡಬಾರದು ಎಂದು ಪ್ರಾಣಿ ಕಲ್ಯಾಣ ತಜ್ಞರು ಸಲಹೆ ನೀಡಿದ್ದಾರೆ. ಗುವಾಹಟಿಯ ಈ ಘಟನೆ ಪ್ರಾಣಿಗಳ ಮೇಲಿನ ಕಾಳಜಿ ಮತ್ತು ಮಾನವೀಯತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ


Disclaimer: ಈ ಲೇಖನವು ವಿವಿಧ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಮತ್ತು ಅಧಿಕೃತ ಮಾಹಿತಿ ಲಭ್ಯವಾದಂತೆ ನವೀಕರಿಸಬಹುದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top