ನೌಕರಿ : ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆನ್ನುವ ಯುವಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. Railway Recruitment Board (RRB) ವತಿಯಿಂದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ದೊರೆತಿದೆ.
ದೇಶಾದ್ಯಂತ ಖಾಲಿ ಇರುವ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ (CEN 01/2026) ಪ್ರಕಟಿಸಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಸ್ಥಿರ ಸರ್ಕಾರಿ ಉದ್ಯೋಗ (Government Job) ಪಡೆಯಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
- ಹುದ್ದೆಯ ಹೆಸರು: ಸಹಾಯಕ ಲೋಕೋ ಪೈಲಟ್ (ALP).
- ಒಟ್ಟು ಹುದ್ದೆಗಳು: 11,127.
- ಇಲಾಖೆ: ಭಾರತೀಯ ರೈಲ್ವೆ.
ವಯೋಮಿತಿ :
- ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು 01 ಜನವರಿ 2026ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷಗಳೊಳಗಿರಬೇಕು.
- ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ SSLC/10ನೇ ತರಗತಿ ಹಾಗೂ ಸಂಬಂಧಿತ ITI ಅಥವಾ ತಾಂತ್ರಿಕ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.
- ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಪರಿಶೀಲಿಸುವುದು ಸೂಕ್ತ.
ವೇತನ ಶ್ರೇಣಿ :
- ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹19,900/- ಪ್ರಾರಂಭಿಕ ವೇತನ (7th Pay Commission Level-2) ವೇತನ ನೀಡಲಾಗುವುದು.
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ :
ರೈಲ್ವೆ ನೇಮಕಾತಿ ಪ್ರಕ್ರಿಯೆಯಲ್ಲಿ ಆಧಾರ್ (Aadhaar) ಆಧಾರಿತ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕವು 10ನೇ ತರಗತಿ ಅಂಕಪಟ್ಟಿಯ ಮಾಹಿತಿಗೆ ಹೊಂದಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಇದನ್ನು ಓದಿ : UBI ದಲ್ಲಿ ಅಪ್ರೆಂಟಿಸ್ ನೇಮಕಾತಿ: 1865 ಹುದ್ದೆಗಳಿಗೆ ಭರ್ತಿ.
ಯಾವುದೇ ವ್ಯತ್ಯಾಸ ಇದ್ದರೆ ಮುಂಚಿತವಾಗಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು Online ನಲ್ಲಿ ರೈಲ್ವೆಯ ಅಧಿಕೃತ ವೆಬ್‌ಸೈಟ್ (Official website) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಬಯಸುವ ಸಲ್ಲಿಸಬೇಕು.
ಅಧಿಕೃತ ವೆಬ್‌ಸೈಟ್ > RRB Apply Official Website
ದಲ್ಲಾಳಿಗಳ ಬಗ್ಗೆ ಅಭ್ಯರ್ಥಿಗಳಿಗೆ ಎಚ್ಚರಿಕೆ :
ರೈಲ್ವೆ ನೇಮಕಾತಿ (Railway Recruitment) ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆ ಮತ್ತು ಪರೀಕ್ಷೆಯ ಆಧಾರದ ಮೇಲೆ ಮಾತ್ರ ನಡೆಯಲಿದೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುವ mediator ಅಥವಾ ದಲ್ಲಾಳಿಗಳ ಬಗ್ಗೆ ಅಭ್ಯರ್ಥಿಗಳು ಎಚ್ಚರಿಕೆಯಿಂದಿರಬೇಕು.
ದಾಖಲೆಗಳ ಹೊಂದಾಣಿಕೆ ಕಡ್ಡಾಯ :
ಅಭ್ಯರ್ಥಿಗಳ ಹೆಸರು ಮತ್ತು ಜನ್ಮ ದಿನಾಂಕವು 10ನೇ ತರಗತಿಯ ಅಂಕಪಟ್ಟಿ (SSLC Marks Card) ಹಾಗೂ ಆಧಾರ್ ಕಾರ್ಡ್‌ನಲ್ಲಿ ಒಂದೇ ರೀತಿಯಲ್ಲಿ ಇರಬೇಕು ಎಂದು ರೈಲ್ವೆ ನೇಮಕಾತಿ ಮಂಡಳಿ ಸೂಚಿಸಿದೆ.
ಯಾವುದೇ ಮಾಹಿತಿ ವ್ಯತ್ಯಾಸ ಕಂಡುಬಂದರೆ ಅರ್ಜಿ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ಅಭ್ಯರ್ಥಿಗಳು ಮುಂಚಿತವಾಗಿಯೇ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು ಒಳಿತು.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ: 15 ಮೇ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2026 (ರಾತ್ರಿ 11:59ರವರೆಗೆ)
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಾದೇಶಿಕ ರೈಲ್ವೆ ಮಂಡಳಿಗಳ ಮಾಹಿತಿ :
ಬೆಂಗಳೂರು ಸೇರಿದಂತೆ ಅಹಮದಾಬಾದ್, ಚೆನ್ನೈ, ಮುಂಬೈ, ಸಿಕಂದರಾಬಾದ್ ಹಾಗೂ ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ RRB ಕೇಂದ್ರಗಳ Official website ಗಳಲ್ಲಿ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಿದೆ.
ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ [RRB Bengaluru Official Website] ಗೆ ಭೇಟಿ ನೀಡಬಹುದು.
Disclaimer: ನೇಮಕಾತಿ (RRB ALP Recruitment 2026) ಕುರಿತ ಮಾಹಿತಿ ಅಧಿಕೃತ ಅಧಿಸೂಚನೆಯ ಆಧಾರದ ಮೇಲೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಪರಿಶೀಲಿಸುವುದು ಸೂಕ್ತ.





