ಡೆಸ್ಕ್ : ಪುಟ್ಟ ನಾಯಿ ಮರಿಯನ್ನು ತನ್ನ ಮಗುವಿನಂತೆ ಹಿಡಿದಿಟ್ಟುಕೊಂಡು ಮರದ ಮೇಲೆ ಕೋತಿಯೊಂದು ಕುಳಿತಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋತಿಯ ಈ ಭಾವನಾತ್ಮಕ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಪ್ರಕೃತಿಯಲ್ಲಿ ಕೆಲವೊಮ್ಮೆ ನಡೆಯುವ ಕೆಲ ಘಟನೆಗಳು ಮನುಷ್ಯರನ್ನೇ ಅಚ್ಚರಿಗೊಳಿಸುತ್ತವೆ. ಪ್ರೀತಿ, ಕಾಳಜಿ ಮತ್ತು ಮಮತೆ ಎಂಬ ಭಾವನೆಗಳು ಕೇವಲ “ಮನುಷ್ಯರಿಗೆ ಮಾತ್ರ ಸೀಮಿತವಲ್ಲ” ಎಂಬುದನ್ನು ಆಗಾಗ ಪ್ರಾಣಿ ಜಗತ್ತು ಸಾಬೀತುಪಡಿಸುತ್ತಿರುತ್ತದೆ.
ಇಂತಹದ್ದೇ ಒಂದು ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೆವಾಲ್ಸರ್ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಪುಟ್ಟ ನಾಯಿ ಮರಿಯನ್ನು ತನ್ನ ಮರಿಯಂತೆ ಎತ್ತಿಕೊಂಡು ಮರದ ಮೇಲೆ ಕುಳಿತಿರುವ ದೃಶ್ಯ ಕಂಡುಬರುತ್ತದೆ. ಆರಂಭದಲ್ಲಿ ಈ ದೃಶ್ಯ ಕಂಡ ಸ್ಥಳೀಯರು ಆತಂಕಗೊಂಡಿದ್ದರು.
ಆತಂಕಕ್ಕೆ ಕಾರಣವೇನೆಂದರೆ, ಎಲ್ಲಿ ಆ ಕೋತಿ ನಾಯಿಮರಿಯನ್ನು ಹಾನಿಗೊಳಿಸಬಹುದು ಅಥವಾ ಎತ್ತರದಿಂದ ಕೆಳಗೆ ಬೀಳಿಸಬಹುದು ಎಂಬ ಭಯದಿಂದ ಹಲವರು ಮರದ ಕೆಳಗೆ ಜಮಾಯಿಸಿದ್ದರು. ಆದರೆ ಜನರು ಊಹಿಸಿದಂತೆ ಯಾವುದೇ ಅಪಾಯ ಸಂಭವಿಸಲಿಲ್ಲ.
ಸ್ಥಳೀಯರ ಮಾಹಿತಿ ಪ್ರಕಾರ, ರಸ್ತೆ ಬದಿಯಲ್ಲಿದ್ದ ನಾಯಿ ಮರಿಯನ್ನು ಕೋತಿ ತನ್ನೊಂದಿಗೆ ತೆಗೆದುಕೊಂಡು ಸುಮಾರು 20 ಅಡಿ ಎತ್ತರದ ಮರದ ಮೇಲೆ ಹತ್ತಿತ್ತು. ಜೊತೆಗೆ ಕೋತಿ ಆ ಪುಟ್ಟ ನಾಯಿ ಮರಿಯನ್ನು ತನ್ನ ಮಡಿಲಲ್ಲಿ ಸುರಕ್ಷಿತವಾಗಿ ಹಿಡಿದುಕೊಂಡು ಸುಮಾರು 10 ರಿಂದ 15 ನಿಮಿಷಗಳ ಕಾಲ ಮರದ ಮೇಲೆಯೇ ಕುಳಿತಿತ್ತು.
ಆದರೆ ಈ ಅವಧಿಯಲ್ಲಿ ಕೋತಿಯ ವರ್ತನೆ ನೆರೆದಿದ್ದು ಜನರಲ್ಲಿ ಅಚ್ಚರಿ ಮೂಡಿಸುವಂತಿತ್ತು. ಅದು ನಾಯಿಮರಿಯನ್ನು ಕೆಳಗೆ ಬೀಳದ ರೀತಿಯಲ್ಲಿ ಹಿಡಿದುಕೊಂಡಿದ್ದು, ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಂಡಿತ್ತು.
ಈ ಸುದ್ದಿಯನ್ನು ಓದಿ : ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 4,000 ಹುದ್ದೆಗಳ ಭರ್ತಿ; ಸಚಿವ ಈಶ್ವರ್ ಖಂಡ್ರೆ ಮಹತ್ವದ ಘೋಷಣೆ.
ಸುಮಾರು ಸಮಯದ ನಂತರ ಕೋತಿ ನಿಧಾನವಾಗಿ ಮರದಿಂದ ಕೆಳಗಿಳಿದು ತನ್ನ ಬಳಿ ಇದ್ದ ಪುಟ್ಟ ನಾಯಿಮರಿಯನ್ನು ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟು ತನ್ನಷ್ಟಕ್ಕೆ ತಾನು ತನ್ನ ದಾರಿಯಲ್ಲಿ ತೆರಳಿತು. ಈ ಘಟನೆಗೆ ಸಾಕ್ಷಿಯಾದ ಸ್ಥಳೀಯರು ಹಾಗೂ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಕೋತಿಯ ವರ್ತನೆಯನ್ನು ಮೆಚ್ಚಿಕೊಂಡಿದ್ದಾರೆ.
ನಾಯಿ ಮರಿಯನ್ನು ಹಿಡಿದಿಟ್ಟುಕೊಂಡ ಕೋತಿಯ ವಿಡಿಯೋ :
बंदरों का आतंक इससे ज़्यादा क्या हो हो सकता है कि वो एक कुत्ते के पिल्ले को लेकर पेड़ पर जा चढ़े। यह घटना हिमाचल के रिवालसर की है। सहमा सा पिल्ला बंदर की गोद में दुबका है कि कहीं पेड़ से नीचे फेंक दे। pic.twitter.com/CptEiUwp9O
— thehillnews.in (@thehill_news) June 8, 2026
Courtesy : Social Media / Twitter
thehillnews.in (@thehill_news) ಎಂಬ Twitter ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇಲ್ಲಿಯವರಗೆ ಸುಮಾರು 7.5K Views ಪಡೆದುಕೊಂಡಿದೆ.
ಇದನ್ನು ಓದಿ : ರೈಲಿನಲ್ಲಿ ಟಿಕೆಟ್ ಕೇಳಿದ ಟಿಟಿಇಗೆ ಯುವತಿ ಮಾಡಿದ್ದೇನು ಗೊತ್ತೇ? ಈ ವಿಡಿಯೋ ನೋಡಿ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅನೇಕರು “ಮನುಷ್ಯರು ಕಲಿಯಬೇಕಾದ ಮಮತೆಯನ್ನು ಈ ಕೋತಿ ತೋರಿಸಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, “ಕೆಲವರು ಕೋತಿಗಳು ಸಾಮಾನ್ಯವಾಗಿ ಕುತೂಹಲದಿಂದ ಇಂತಹ ವರ್ತನೆ ತೋರಬಹುದು ಎಂದು ಹೇಳುತ್ತಿದ್ದು, ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ” ಎಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ.
ಪ್ರಕೃತಿಯ ಈ ಸಣ್ಣ ಘಟನೆಯು ಒಂದು ದೊಡ್ಡ ಸಂದೇಶವನ್ನು ನೀಡುತ್ತದೆ. ಜಾತಿ, ಭಾಷೆ ಅಥವಾ ಪ್ರಭೇದಗಳ ಗಡಿ ಮೀರಿ ಪ್ರೀತಿ ಮತ್ತು ಕರುಣೆ ಎಂಬುದು ಎಲ್ಲ ಜೀವಿಗಳಲ್ಲೂ ಅಡಗಿದೆ. ಕೋತಿ ಮತ್ತು ನಾಯಿ ಮರಿಯ ನಡುವಿನ ಈ ಅಪರೂಪದ ಕ್ಷಣವು, ಪ್ರೀತಿಯ ಭಾಷೆಯನ್ನು ಅರ್ಥಮಾಡಿಕೊಳ್ಳಲು ಮಾತುಗಳ ಅಗತ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





