ದೇವರ ಹುಂಡಿಯಲ್ಲಿ ಸಿಕ್ಕ 20 ರೂ. ನೋಟು ನೋಡಿ ಸಿಬ್ಬಂದಿ ಶಾಕ್; ಅದರಲ್ಲಿ ಬರೆದಿದ್ದಾದರೂ ಏನು ಗೊತ್ತಾ?

ದೇವರ ಹುಂಡಿಯಲ್ಲಿ ಸಿಕ್ಕ 20 ರೂ. ನೋಟು ನೋಡಿ ಸಿಬ್ಬಂದಿ ಶಾಕ್

ಅನಂತಪುರ : ಇಲ್ಲೋಬ್ಬ ಭಕ್ತೆ 20 ರೂ. ಮುಖ ಬೆಲೆಯ ನೋಟಿನ ಮೇಲೆ ಬರೆದ ವಿಚಿತ್ರ ಕೋರಿಕೆ ಬರೆದು ದೇವಸ್ಥಾನದ ಹುಂಡಿಗೆ ಹಾಕಿದ್ದು, ಅದನ್ನು ನೋಡಿದ ದೇವಸ್ಥಾನ ಸಿಬ್ಬಂದಿಯೇ ಶಾಕ್‌ ಆಗಿದ್ದಾರೆ. ಹಾಗಾದ್ರೆ ಆ ನೋಟಿನ ಮೇಲೆ ಬರೆದ ವಿಚಿತ್ರ ಕೋರಿಕೆಯಾದರೂ ಏನು ಗೊತ್ತಾ? ಬನ್ನಿ ಅದರ ಬಗ್ಗೆ ತಿಳಿಯೋಣ.!

ದೇವಾಲಯಗಳ ಹುಂಡಿಯಲ್ಲಿ ಭಕ್ತರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಸುಖ, ಆರೋಗ್ಯ, ಐಶ್ವರ್ಯ ಮತ್ತು ಕುಟುಂಬದ ಒಳಿತಿಗಾಗಿ ಕಾಣಿಕೆ ಸಲ್ಲಿಸುವುದು ಸಾಮಾನ್ಯ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಪ್ರಸಿದ್ಧ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಕಂಡುಬಂದ ಒಂದು ವಿಚಿತ್ರ ಕಾಣಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ದೇವಾಲಯದ ಸಿಬ್ಬಂದಿ ಹುಂಡಿಯಲ್ಲಿದ್ದ ಕಾಣಿಕೆಗಳನ್ನು ಎಣಿಸುತ್ತಿದ್ದ ವೇಳೆ 20 ರೂಪಾಯಿ ನೋಟಿನ ಮೇಲೆ ಬರೆಯಲಾಗಿದ್ದ ಅಸಾಮಾನ್ಯ ಸಂದೇಶ ಎಲ್ಲರ ಗಮನ ಸೆಳೆಯಿತು. ಸಾಮಾನ್ಯವಾಗಿ ಕೆಲವರು ತಮ್ಮ ಸಮಸ್ಯೆಗಳನ್ನು ಕಾಗದದ ಮೇಲೆ ಬರೆದು ದೇವರಿಗೆ ಅರ್ಪಿಸುವುದು ಕಂಡುಬರುತ್ತದೆ.

ಈ ಸುದ್ದಿಯನ್ನು ಓದಿ : SBIನಲ್ಲಿ 1,500 PO ಹುದ್ದೆಗಳ ನೇಮಕಾತಿ; ಉದ್ಯೋಗಾಕಾಂಕ್ಷಿಗಳು ಇಂದೇ ಅರ್ಜಿ ಸಲ್ಲಿಸಿ.

ಆದರೆ ಈ ಬಾರಿ ಓರ್ವ ಭಕ್ತೆ ನೇರವಾಗಿ ನೋಟಿನ ಮೇಲೆಯೇ ತಮ್ಮ ವೈಯಕ್ತಿಕ ಬೇಡಿಕೆಯನ್ನು ಬರೆದು ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.

ಹುಂಡಿಯಲ್ಲಿ ಸಿಕ್ಕ ನೋಟು ಕಂಡು ಸಿಬ್ಬಂದಿಗೂ ಶಾಕ್ :

ದೇವಾಲಯ ಸಿಬ್ಬಂದಿ ಹುಂಡಿಯಲ್ಲಿದ್ದ ಕಾಣಿಕೆಗಳನ್ನು ಎಣಿಸುತ್ತಿದ್ದ ವೇಳೆ ಸಿಕ್ಕ 20 ರೂಪಾಯಿ ನೋಟಿನ ಮೇಲೆ ತೆಲುಗು ಭಾಷೆಯಲ್ಲಿ ಕುಟುಂಬಕ್ಕೆ ಸಂಬಂಧಿಸಿದ ವಿಚಿತ್ರ ಮನವಿ ಬರೆಯಲಾಗಿತ್ತು. ಈ ರೀತಿಯ ಬೇಡಿಕೆಯನ್ನು ನೋಟಿನ ಮೇಲೆಯೇ ದಾಖಲಿಸಿ ಹುಂಡಿಗೆ ಹಾಕಿರುವುದು ಅಲ್ಲಿದ್ದವರಲ್ಲಿ ಆಶ್ಚರ್ಯ ಮೂಡಿಸಿದೆ.

“ದೇವರೇ… ನನ್ನ ಅತ್ತೆ ಬೇಗ ಸಾಯಬೇಕು” :

ಹಾಗಾದ್ರೆ ಆ ದೇವಾಲಯದ ಹುಂಡಿ ಎಣಿಕೆ ವೇಳೆ ಸಿಬ್ಬಂದಿಗೆ ಸಿಕ್ಕ 20 ರೂಪಾಯಿ ನೋಟಿನ ಮೇಲೆ ಬರೆದಿದ್ದಾದರೂ ಏನು ಗೊತ್ತಾ? ಆ 20 ರೂ. ಮುಖಬೇಲೆಯ ನೋಟಿನ ಮೇಲೆ ತೆಲುಗು ಭಾಷೆಯಲ್ಲಿ “ದೇವರೇ… ನನ್ನ ಅತ್ತೆ ಬೇಗ ಸಾಯಬೇಕು” ಎಂದು ಬರೆದಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಇದನ್ನು ಓದಿ : ಜಿಂಕೆಯನ್ನು ಬೇಟೆಯಾಡಲು ಬಂದ 2 ಬೃಹತ್ ಹೆಬ್ಬಾವು; ಒಂದು ಸೆರೆ, ಇನ್ನೊಂದು ಪರಾರಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಘಟನೆ :

ಸದ್ಯ ಈ ಘಟನೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಇದನ್ನು ಹಾಸ್ಯಾತ್ಮಕವಾಗಿ ತೆಗೆದುಕೊಂಡು ವಿವಿಧ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಇದರ ಹಿಂದೆ ಕುಟುಂಬದೊಳಗಿನ ಮಾನಸಿಕ ಒತ್ತಡ ಅಥವಾ ಗಂಭೀರ ಕೌಟುಂಬಿಕ ಸಮಸ್ಯೆಗಳಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕುಟುಂಬಗಳಲ್ಲಿ ಹೊಸ ಚಿಂತನೆ :

ಈ ಘಟನೆ ಕೇವಲ ವೈರಲ್ ವಿಚಾರವಾಗಿಯೇ ಉಳಿಯದೆ, ಇತ್ತೀಚಿನ ದಿನಗಳಲ್ಲಿ ಕುಟುಂಬ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ, ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಕಲಹಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸಮಾಜದಲ್ಲಿ ಕುಟುಂಬ ಸಂಬಂಧಗಳ ಮಹತ್ವದ ಬಗ್ಗೆ ಈ ಘಟನೆ ಹೊಸ ಚಿಂತನೆ ಮೂಡಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗತೊಡಗಿದೆ.

ಒಟ್ಟಾರೆ ದೇವಾಲಯ ಹುಂಡಿಯಲ್ಲಿ ಸಿಕ್ಕ ಈ ವಿಚಿತ್ರ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ 


Disclaimer: ಈ ಲೇಖನವು ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ವರದಿಗಳ ಆಧಾರದ ಮೇಲೆ ಮಾಹಿತಿ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಲೇಖನದಲ್ಲಿರುವ ಘಟನೆ, ವ್ಯಕ್ತಿಗಳ ಅಭಿಪ್ರಾಯಗಳು ಅಥವಾ ಪ್ರತಿಕ್ರಿಯೆಗಳು ಸಂಬಂಧಿತ ಮೂಲಗಳ ಆಧಾರಿತವಾಗಿದ್ದು, ನಮ್ಮ ವೆಬ್‌ಸೈಟ್ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಸಮುದಾಯದ ಬಗ್ಗೆ ಅವಹೇಳನಕಾರಿ ಉದ್ದೇಶ ಹೊಂದಿರುವುದಿಲ್ಲ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top