ಡೆಸ್ಕ್ : ಆರ್ಟಿಒ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯಲ್ಲಿ ಇಟ್ಟಿಗೆ ಸುರಿದು ಡಂಪರ್ ಚಾಲಕನೋಬ್ಬ ಅಟ್ಟಹಾಸ ಮೆರೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಾಲಕನ ಈ ನಿರ್ಲಕ್ಷ್ಯ ಹಾಗೂ ಅಟ್ಟಹಾಸಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಈ ಅಚ್ಚರಿಯ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ :
ಹೆದ್ದಾರಿಯಲ್ಲಿ ಆರ್ಟಿಒ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳಲೆತ್ನಿಸಿದ ಡಂಪರ್ ಟ್ರಕ್ ಚಾಲಕನೊಬ್ಬ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದಲ್ಲದೆ ರಸ್ತೆಮೇಲೆ ಇಟ್ಟಿಗೆಗಳನ್ನು ಸುರಿದು ಸಂಚಾರ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದ್ದಾನೆ. ಇದೀಗ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಹೆದ್ದಾರಿಯಲ್ಲಿ ಇಟ್ಟಿಗೆ ಸುರಿದು ಡಂಪರ್ ಚಾಲಕನ ವಿಡಿಯೋ :
UP: Greater Noida dumper driver drove wrong side on Eastern Peripheral Expressway to dodge RTO check, then dumped entire load of stones on the road to block traffic. Police cleared the mess by hand. pic.twitter.com/zrIGS7otHf
— Ghar Ke Kalesh (@gharkekalesh) June 18, 2026
Courtesy : Photo Credit : Social Media / Twitter
ಮಾಹಿತಿಗಳ ಪ್ರಕಾರ, ಈ ರೀತಿಯ ವಿಚಿತ್ರ ಘಟನೆ “ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಪೂರ್ವ ಪೆರಿಫೆರಲ್ ಎಕ್ಸ್ಪ್ರೆಸ್ವೇ” ಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ ಘಟನೆ ನಡೆದಿದೆ. ಟ್ರಕ್ ತಪಾಸಣೆಗೆ ಒಳಪಡಬೇಕಾಗಿದ್ದ ಸಂದರ್ಭದಲ್ಲಿ ಚಾಲಕ ವಾಹನ ನಿಲ್ಲಿಸುವ ಬದಲು ಅಪಾಯಕಾರಿ ರೀತಿಯಲ್ಲಿ ವಾಹನವನ್ನು ವೇಗವಾಗಿ ಚಲಾಯಿಸಿದ್ದಾನೆ.
ಈ ಸುದ್ದಿಯನ್ನು ಓದಿ : ಗ್ರಾಹಕರಿಗೆ ಶಾಕ್: ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆ, ಇನ್ನಷ್ಟು ದುಬಾರಿ ಸಾಧ್ಯತೆ!
ಇದಷ್ಟೇ ಅಲ್ಲದೆ ಅಧಿಕಾರಿಗಳು ಮತ್ತು ಇತರ ವಾಹನಗಳು ಹಿಂಬಾಲಿಸಿ ತನ್ನನ್ನು ತಡೆಯಲು ಅಡ್ಡಿಪಡಿಸುವ ಉದ್ದೇಶದಿಂದ ಟ್ರಕ್ನಲ್ಲಿದ್ದ ಇಟ್ಟಿಗೆಗಳನ್ನು ರಸ್ತೆಯ ಮೇಲೆಯೇ ಸುರಿಯಲು ಆರಂಭಿಸಿದ್ದಾನೆ. ಇದರ ಪರಿಣಾಮ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತು.
ಕೆಲಕಾಲ ಭಾರೀ ಆತಂಕದ ವಾತಾವರಣ :
ಹೆದ್ದಾರಿಯಲ್ಲಿ ಇಟ್ಟಿಗೆ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವೇಗವಾಗಿ ಸಾಗುತ್ತಿದ್ದ ವಾಹನಗಳ ಮುಂದೆ ಅಕಸ್ಮಿಕವಾಗಿ ಇಟ್ಟಿಗೆಗಳು ಬೀಳುತ್ತಿದ್ದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾದ ಬಗ್ಗೆ ಇಲ್ಲಿಯವರೆಗೆ ವರದಿಯಾಗಿಲ್ಲ.
ಚಾಲಕನ ಈ ಅಟ್ಟಹಾಸದ ಸೂಚನೆ ಸಿಗುತ್ತಿದ್ದಂತೆಯೇ ಪೊಲೀಸರು ಮತ್ತು ಸಂಚಾರ ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ರಸ್ತೆಯ ತುಂಬೆಲ್ಲಾ ಹರಡಿದ್ದ ಇಟ್ಟಿಗೆಗಳನ್ನು ತೆರವುಗೊಳಿಸಲು “ಜೆಸಿಬಿ ಯಂತ್ರ” ಬಳಸಲಾಯಿತು. ಕೆಲ ಗಂಟೆಗಳ ತೆರವುಗೊಳಿಸುವ ಕಾರ್ಯಾಚರಣೆ ನಡೆದ ನಂತರ ಸಂಚಾರ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಿತು.
ಕಠಿಣ ಕ್ರಮಕ್ಕೆ ಆಗ್ರಹ :
ಹೆದ್ದಾರಿಗಳಲ್ಲಿ ಇಟ್ಟಿಗೆ ಸುರಿದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿಯಂತಹ ಬ್ಯುಸಿ ಮಾರ್ಗದಲ್ಲಿ ಈ ರೀತಿಯ ನಿರ್ಲಕ್ಷ್ಯ ಹಾಗೂ ಅಪಾಯಕಾರಿ ಚಾಲನೆ ಮಾಡಿರುವ ಟ್ರಕ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನು ಓದಿ : ದೇವರ ಹುಂಡಿಯಲ್ಲಿ ಸಿಕ್ಕ 20 ರೂ. ನೋಟು ನೋಡಿ ಸಿಬ್ಬಂದಿ ಶಾಕ್; ಅದರಲ್ಲಿ ಬರೆದಿದ್ದಾದರೂ ಏನು ಗೊತ್ತಾ?
ಪ್ರಸ್ತುತ ಪೊಲೀಸರು ಪರಾರಿಯಾಗಿರುವ ಚಾಲಕನ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆ ರಸ್ತೆ ಸುರಕ್ಷತೆ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ಸಂಪಾದಕೀಯ :
ಹೆದ್ದಾರಿಯಲ್ಲಿ ಇಟ್ಟಿಗೆ ಸುರಿದು ಈ ರೀತಿಯ ನಿರ್ಲಕ್ಷ್ಯ ಮತ್ತು ಕಾನೂನು ಉಲ್ಲಂಘನೆ ಮಾಡುವ ಘಟನೆಗಳು ಸಾರ್ವಜನಿಕ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಚಾಲಕರು ಅಪಾಯಕಾರಿ ಕ್ರಮಗಳಿಗೆ ಮುಂದಾಗುವುದು ಆತಂಕಕಾರಿ ಬೆಳವಣಿಗೆ.
ಕೆಲವರ ಸ್ವಾರ್ಥದ ನಿರ್ಧಾರದಿಂದ ನೂರಾರು ನಿರಪರಾಧ ಪ್ರಯಾಣಿಕರ ಜೀವ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜೊತೆಗೆ ಇಂತಹ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ನೀಡುವುದು ಅಗತ್ಯವಾಗಿದೆ. ಸಾರ್ವಜನಿಕರ ಜೀವಕ್ಕೆ ಬೆಲೆ ಕೊಡುವ ಜವಾಬ್ದಾರಿ ಪ್ರತಿಯೊಬ್ಬ ವಾಹನ ಚಾಲಕರಿಗೂ ಇರಬೇಕು.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







