ಕುಕ್ಕರ್‌ನಿಂದ ಗ್ಯಾಸ್ ಲೀಕ್ ಆಗುತ್ತಿದೆಯಾ? ಹೊಸ ರಬ್ಬರ್ ಖರೀದಿಸುವ ಮನ್ನ ಈ ಟ್ರಿಕ್ಸ್ ಟ್ರೈ ಮಾಡಿ.

ಕುಕ್ಕರ್‌ನಿಂದ ಗ್ಯಾಸ್ ಲೀಕ್ ಆಗುತ್ತಿದೆಯಾ?

ಡೆಸ್ಕ್‌ : ನಿಮ್ಮ ಅಡುಗೆ ಮನೆಯಲ್ಲಿರುವ ಪ್ರೆಶರ್ ಕುಕ್ಕರ್‌ನಿಂದ ಗ್ಯಾಸ್ ಲೀಕ್ ಆಗುತ್ತಿದೆಯಾ? ಹಾಗಾದ್ರೆ ಹೊಸ ರಬ್ಬರ್ ಖರೀದಿಸುವ ಮನ್ನ ಈ ಟ್ರಿಕ್ಸ್ ಒಮ್ಮೆ ಟ್ರೈ ಮಾಡಿ ನೋಡಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ಬನ್ನಿ ಆ ಟ್ರಿಕ್ಸ್‌ ಬಗ್ಗೆ ತಿಳಿಯೋಣ.!

ಪ್ರತಿ ಮನೆಯ ಅಡುಗೆಮನೆಯಲ್ಲಿ ಪ್ರೆಶರ್ ಕುಕ್ಕರ್ (Pressure Cooker) ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿ ಊಟದವರೆಗೆ ಅನ್ನ, ಬೇಳೆ, ತರಕಾರಿ ಸೇರಿದಂತೆ ಹಲವು ಪದಾರ್ಥಗಳನ್ನು ಬೇಗ ಬೇಯಿಸಲು ಕುಕ್ಕರ್ ಸಹಾಯ ಮಾಡುತ್ತದೆ.

ಆದರೆ ಹಲವಾರು ಮನೆಗಳಲ್ಲಿ ಸಾಮಾನ್ಯವಾಗಿ ಎದುರಾಗುವ ಒಂದು ಸಮಸ್ಯೆ ಎಂದರೆ ಅದು ಕುಕ್ಕರ್ ಮುಚ್ಚಳದಿಂದ ಗ್ಯಾಸ್ ಲೀಕ್ ಆಗುವುದು ಅಥವಾ ಸೀಟಿ ಸರಿಯಾಗಿ ಆಗದಿರುವುದು. ಬಹುತೇಕ ಸಂದರ್ಭಗಳಲ್ಲಿ ಇದಕ್ಕೆ ಕಾರಣ ಕುಕ್ಕರ್‌ನ ರಬ್ಬರ್ ಗ್ಯಾಸ್ಕೆಟ್ ಸಡಿಲವಾಗಿರುವುದೇ ಕಾರಣವಾಗಿರುತ್ತದೆ.

ಈ ಸುದ್ದಿಯನ್ನು ಓದಿ : ಆದಾಯ ತೆರಿಗೆ ಇಲಾಖೆಯಲ್ಲಿ ಹೊಸ ನೇಮಕಾತಿ; 10ನೇ,12ನೇ ಮತ್ತು ಪದವೀಧರರಿಗೆ ಅವಕಾಶ.

ಆದರೆ ಹಲವರು ಈ ಸಮಸ್ಯೆ ಬಂದ ತಕ್ಷಣ ಹೊಸ ರಬ್ಬರ್ ಖರೀದಿಸಲು ಮುಂದಾಗುತ್ತಾರೆ. ಆದರೆ ಕೆಲವು ಸರಳ ಮನೆಮದ್ದು ವಿಧಾನಗಳನ್ನು ಅನುಸರಿಸಿದರೆ ಹೀಗೆ ಕುಕ್ಕರ್ ಮುಚ್ಚಳದಿಂದ ಗ್ಯಾಸ್ ಲೀಕ್ ಆಗುವುದು ಅಥವಾ ಸೀಟಿ ಸರಿಯಾಗಿ ಆಗದಿರುವ ಸಮಸ್ಯೆಯನ್ನು ಕೆಲವು ಮಟ್ಟಿಗೆ ಸರಿಪಡಿಸಬಹುದು. ಇದರಿಂದ ಸಮಯದ ಜೊತೆಗೆ ಅನಗತ್ಯ ಖರ್ಚೂ ಉಳಿಸಬಹುದು.

ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ :

ತಣ್ಣೀರು ಅಥವಾ ಐಸ್ ವಾಟರ್ ಉಪಾಯ :

ಕುಕ್ಕರ್ ರಬ್ಬರ್ ಹೆಚ್ಚು ದಿನ ಬಳಕೆಯಿಂದ ಬಿಸಿ ಹಬೆಯ ಪರಿಣಾಮ ಹಿಗ್ಗಿ ತನ್ನ ಹಿಡಿತ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ರಬ್ಬರ್ ಅನ್ನು ಮುಚ್ಚಳದಿಂದ ತೆಗೆದು ತಣ್ಣೀರು ಅಥವಾ ಐಸ್ ಹಾಕಿದ ನೀರಿನಲ್ಲಿ ಸುಮಾರು 10ರಿಂದ 15 ನಿಮಿಷ ನೆನೆಸಿಡಬಹುದು. ಕಡಿಮೆ ತಾಪಮಾನದಿಂದ ರಬ್ಬರ್ ಸ್ವಲ್ಪ ಕುಗ್ಗಿ ಮತ್ತೆ ಟೈಟ್ ಆಗುವ ಸಂಭವ ಇರುತ್ತದೆ.

ಈ ಕ್ರೈಂ ಸುದ್ದಿ ಓದಿ : ಲವ್‌ ಬ್ರೇಕಪ್; ಕಚೇರಿಯಲ್ಲೇ‌ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಿಕ ದಾಳಿ.

ಫ್ರೀಜರ್ ವಿಧಾನ :

ಮನೆಯಲ್ಲೇ ಫ್ರಿಜ್ ಇದ್ದರೆ ಇನ್ನೊಂದು ಸುಲಭ ವಿಧಾನ ಅನುಸರಿಸಬಹುದು. ರಬ್ಬರ್ ಅನ್ನು ಸ್ವಚ್ಛವಾಗಿ ತೊಳೆದು ಸುಮಾರು 20ರಿಂದ 30 ನಿಮಿಷ ಫ್ರೀಜರ್‌ನಲ್ಲಿ ಇಡಬಹುದು. ತಂಪಿನ ಪರಿಣಾಮದಿಂದ ಅದರ ಎಲಾಸ್ಟಿಸಿಟಿ ಕಡಿಮೆಯಾಗಿ ಮುಚ್ಚಳಕ್ಕೆ ಮತ್ತೆ ಸರಿಯಾಗಿ ಫಿಟ್ ಆಗಬಹುದು.

ತುರ್ತು ಪರಿಸ್ಥಿತಿಯಲ್ಲಿ ಹಿಟ್ಟಿನ ಉಪಾಯ :

ಅಡುಗೆ ಮಾಡುವ ತುರ್ತು ಸಂದರ್ಭದಲ್ಲಿ ಕುಕ್ಕರ್ ಅಂಚಿನಿಂದ ಹಬೆ ಹೊರಬರುತ್ತಿದ್ದರೆ ಸ್ವಲ್ಪ ಚಪಾತಿ ಹಿಟ್ಟನ್ನು ಗ್ಯಾಸ್ ಲೀಕ್ ಆಗುವ ಹೊರಭಾಗಕ್ಕೆ ಹಚ್ಚಬಹುದು. ಇದು ತಾತ್ಕಾಲಿಕ ಸೀಲ್ ಆಗಿ ಕೆಲಸ ಮಾಡುತ್ತದೆ. ಆದರೆ ಸೀಟಿ ಬರುವ ರಂಧ್ರ ಮುಚ್ಚದಂತೆ ಎಚ್ಚರಿಕೆ ವಹಿಸಬೇಕು.

ರಬ್ಬರ್ ದೀರ್ಘಕಾಲ ಬಾಳಿಕೆ ಬರಲು :

ತಜ್ಞರ ಪ್ರಕಾರ, ಕುಕ್ಕರ್ ರಬ್ಬರ್ ಅನ್ನು ಪದೇಪದೇ ಸ್ವಚ್ಛಗೊಳಿಸುವುದು, ಮುಚ್ಚಳವನ್ನು ನೇರವಾಗಿ ಮುಚ್ಚದೇ ಉಲ್ಟಾ ಇಡುವುದು ಹಾಗೂ ಕೆಲವೊಮ್ಮೆ ತಂಪಾದ ಜಾಗದಲ್ಲಿ ಇಡುವುದು ಅದರ ಬಾಳಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : ಗ್ರಾಹಕರಿಗೆ ಶಾಕ್: ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆ, ಇನ್ನಷ್ಟು ದುಬಾರಿ ಸಾಧ್ಯತೆ!

ಒಂದು ವಿಷಯ ಮುಖ್ಯವಾಗಿ ನೆನಪಿನಲ್ಲಿಡಿ, “ರಬ್ಬರ್ ಕಟ್ ಆಗಿದ್ದರೆ ಅಥವಾ ಸಂಪೂರ್ಣ ಹಾಳಾಗಿದ್ದರೆ ಯಾವುದೇ ಟ್ರಿಕ್ ಪ್ರಯೋಜನಕಾರಿಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹೊಸ ಗ್ಯಾಸ್ಕೆಟ್ ಬಳಕೆ ಮಾಡುವುದು ಅತ್ಯಂತ ಸುರಕ್ಷಿತ ಆಯ್ಕೆ”.

Pressure Cooker :

  • ಪ್ರೆಶರ್ ಕುಕ್ಕರ್ ಇಂದು ಬಹುತೇಕ ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಅವಿಭಾಜ್ಯ ಉಪಕರಣವಾಗಿದೆ.
  • ಕಡಿಮೆ ಸಮಯದಲ್ಲಿ ಆಹಾರ ಬೇಯಿಸುವ ಮೂಲಕ ಸಮಯ ಮತ್ತು ಇಂಧನ ಎರಡನ್ನೂ ಉಳಿಸಲು ಇದು ಸಹಾಯ ಮಾಡುತ್ತದೆ.
  • ಅನ್ನ, ಬೇಳೆ, ತರಕಾರಿ ಸೇರಿದಂತೆ ಹಲವು ಪದಾರ್ಥಗಳನ್ನು ಬೇಗ ಸಿದ್ಧಪಡಿಸಲು ಕುಕ್ಕರ್ ಬಳಕೆ ಉಪಯುಕ್ತ.
  • ಆದರೆ ಅದರ ರಬ್ಬರ್, ಸೀಟಿ ಹಾಗೂ ಸುರಕ್ಷತಾ ಭಾಗಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಬಹಳ ಮುಖ್ಯ.
  • ಸರಿಯಾದ ನಿರ್ವಹಣೆ ಮಾಡಿದರೆ ಕುಕ್ಕರ್ ಹೆಚ್ಚು ವರ್ಷಗಳ ಕಾಲ ಸುರಕ್ಷಿತವಾಗಿ ಬಳಸಬಹುದು.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಸಾಮಾನ್ಯ ಗೃಹ ಬಳಕೆ ಸಲಹೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಸುರಕ್ಷತಾ ಕಾರಣಕ್ಕಾಗಿ ಕುಕ್ಕರ್ ಭಾಗಗಳು ಹೆಚ್ಚು ಹಾಳಾಗಿದ್ದರೆ ತಕ್ಷಣವೇ ಹೊಸ ಭಾಗಗಳನ್ನು ಬಳಸುವುದು ಉತ್ತಮ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top