ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: 24% ಇಳಿಕೆ ಕಂಡು ಹೂಡಿಕೆದಾರರಿಗೆ ಭಾರಿ ಶಾಕ್!

24% ಇಳಿಕೆ ಕಂಡು ಹೂಡಿಕೆದಾರರಿಗೆ ಭಾರಿ ಶಾಕ್!

ಡೆಸ್ಕ್‌ : ಚಿನ್ನದ ಬೆಲೆಯಲ್ಲಿ ಅಚ್ಚರಿಯ ಮಟ್ಟದ ಭಾರಿ ಕುಸಿತ ಕಂಡಿದ್ದು, ಸದ್ಯ ಹೂಡಿಕೆದಾರರಿಗೆ ಬಿಗ್ ಶಾಕ್ ನೀಡಿದೆ.  ಕೆಲವು ತಿಂಗಳ ಹಿಂದಷ್ಟೇ ಪ್ರತಿ ಔನ್ಸ್‌ಗೆ ಸಾರ್ವಕಾಲಿಕ ಗರಿಷ್ಠ 5,417 ಡಾಲರ್ ಮಟ್ಟ ತಲುಪಿದ್ದ ಚಿನ್ನದ ಬೆಲೆ ಸದ್ಯ 4,100 ಡಾಲರ್‌ಗಿಂತ ಕೆಳಕ್ಕೆ ಇಳಿದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಎಂದು ಪರಿಗಣಿಸಲ್ಪಡುವ ಚಿನ್ನದ ಬೆಲೆಯಲ್ಲಿ ಅಚ್ಚರಿಯ ಮಟ್ಟದ ಕುಸಿತ ಕಂಡುಬಂದಿದ್ದು, ಇದು ಹೂಡಿಕೆದಾರರಿಗೆ ಬಿಗ್ ಶಾಕ್ ನೀಡಿದ್ದು, ಸದ್ಯ ಹೊಸ ಆತಂಕ ಹುಟ್ಟಿಸಿದೆ.

5,417 ಡಾಲರ್‌ನಿಂದ 4,100 ಡಾಲರ್‌ಗೆ :

ಕೆಲವು ತಿಂಗಳ ಹಿಂದಷ್ಟೇ ಪ್ರತಿ ಔನ್ಸ್‌ಗೆ ಸಾರ್ವಕಾಲಿಕ ಗರಿಷ್ಠ 5,417 ಡಾಲರ್ ಮಟ್ಟ ತಲುಪಿದ್ದ ಚಿನ್ನದ ಬೆಲೆ, ಈಗ ಅಲ್ಲಿಂದ ಸುಮಾರು 24 ಶೇಕಡಾ ಕುಸಿತ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ಸ್ಪಾಟ್ ಗೋಲ್ಡ್ ದರ 4,100 ಡಾಲರ್‌ಗಿಂತ ಕೆಳಕ್ಕೆ ಇಳಿದಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಜೂನ್ ತ್ರೈಮಾಸಿಕದಲ್ಲಿ ಮಾತ್ರ ಚಿನ್ನದ ಬೆಲೆ ಸುಮಾರು 12 ಶೇಕಡಾ ನಷ್ಟ ಅನುಭವಿಸಿದ್ದು, ಇದು 2016ರ ಡಿಸೆಂಬರ್ ನಂತರ ಕಂಡುಬಂದ ಅತ್ಯಂತ ದೊಡ್ಡ ತ್ರೈಮಾಸಿಕ ಕುಸಿತ ಎನ್ನಲಾಗಿದೆ. ಇದರ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಮೇಲೆ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದ ಮಧ್ಯಮ ಮತ್ತು ದೊಡ್ಡ ಹೂಡಿಕೆದಾರರಿಗೆ ಈ ಬೆಳವಣಿಗೆ ದೊಡ್ಡ ಹೊಡೆತ ನೀಡಿದೆ.

ಈ ಸುದ್ದಿಯನ್ನು ಓದಿ : ರೈಲುಗಳ ವೇಳಾಪಟ್ಟಿ ಪರಿಷ್ಕರಣೆ 2026: ಬೆಳಗಾವಿ, ಘಟಪ್ರಭಾ ಸೇರಿ ಕೆಲ ನಿಲ್ದಾಣಗಳ ಸಮಯದಲ್ಲಿ ಬದಲಾವಣೆ!

ಚಿನ್ನದ ದರ ಕುಸಿಯಲು ಕಾರಣಗಳೇನು?

  • ಜಾಗತಿಕ ಷೇರು ಮಾರುಕಟ್ಟೆಯ ಅಸ್ಥಿರತೆ ಹಾಗೂ ಆರ್ಥಿಕ ಒತ್ತಡಗಳು.
  • ವಿಶೇಷವಾಗಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ.
  • ವಾಲ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಉಂಟಾದ ನಷ್ಟವನ್ನು ಸರಿಪಡಿಸಲು ಅನೇಕ ಹೂಡಿಕೆದಾರರು ತಮ್ಮಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ನಗದು ಸಂಗ್ರಹಿಸಲು ಮುಂದಾಗಿರುವುದು.

ಅಮೆರಿಕನ್ ಡಾಲರ್ ಬಲಿಷ್ಠ :

ಇನ್ನೊಂದು ಪ್ರಮುಖ ಕಾರಣ ಎಂದರೆ ಅಮೆರಿಕನ್ ಡಾಲರ್ ಬಲಿಷ್ಠವಾಗಿರುವುದು, ಅಮೆರಿಕದ ಕಠಿಣ ಆರ್ಥಿಕ ನೀತಿಗಳ ಪರಿಣಾಮ ಡಾಲರ್ ಮೌಲ್ಯ ಹೆಚ್ಚಾಗಿದ್ದು, ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ದುಬಾರಿಯಾಗಿ ಕಾಣಿಸಿಕೊಂಡು ಬೇಡಿಕೆ ಇಳಿಕೆಯಾಗುತ್ತಿದೆ.

ಬಡ್ಡಿದರ ಏರಿಕೆ :

ಅಮೆರಿಕದ ಕೇಂದ್ರ ಬ್ಯಾಂಕ್ ಮುಂದಿನ ದಿನಗಳಲ್ಲಿ ಹಲವು ಬಾರಿ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಅಂದಾಜು ಸದ್ಯ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ. ಸಾಮಾನ್ಯವಾಗಿ ಬಡ್ಡಿ ದರ ಹೆಚ್ಚಾದಾಗ ಹೂಡಿಕೆದಾರರು ಲಾಭ ನೀಡದ ಚಿನ್ನದಿಂದ ಹಣ ಹಿಂತೆಗೆದು, ಬಡ್ಡಿ ಲಾಭ ಸಿಗುವ ಇತರೆ ಆರ್ಥಿಕ ಸಾಧನಗಳತ್ತ ಮುಖ ಮಾಡುತ್ತಾರೆ. ಇದೇ ಕಾರಣದಿಂದ ಚಿನ್ನದ ಮೇಲೆ ಮಾರಾಟದ ಒತ್ತಡ ಹೆಚ್ಚಾಗಿದೆ.

ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: 24% ಇಳಿಕೆ ಕಂಡು ಹೂಡಿಕೆದಾರರಿಗೆ ಭಾರಿ ಶಾಕ್!

ಬೆಳ್ಳಿಗೂ ಭಾರಿ ಪೆಟ್ಟು :

ಬಂಗಾರದ ಬೆಲೆ ಕುಸಿತದ ಜೊತೆಗೆ ಬೆಳ್ಳಿ ದರದಲ್ಲೂ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಬೆಳ್ಳಿ ಸುಮಾರು 17.6 ಶೇಕಡಾ ಕುಸಿದಿದ್ದು, ಇದು ಕಳೆದ ಕೆಲವು ವರ್ಷಗಳಲ್ಲಿನ ದೊಡ್ಡ ಇಳಿಕೆ ಎಂದು ಹೇಳಲಾಗುತ್ತಿದೆ. ಜನವರಿಯಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಬೆಳ್ಳಿ ಈಗ ಸುಮಾರು 47 ಶೇಕಡಾ ಇಳಿಕೆ ಕಂಡಿದೆ.

ಜಾಗತಿಕ ಉದ್ವಿಗ್ನತೆಗಿಂತ ಆರ್ಥಿಕ ನೀತಿಯೇ ಪ್ರಭಾವ :

ಸಾಮಾನ್ಯವಾಗಿ ಅಂತರಾಷ್ಟ್ರೀಯ ರಾಜಕೀಯ ಉದ್ವಿಗ್ನತೆ ಹೆಚ್ಚಾದಾಗ ಚಿನ್ನದ ಬೇಡಿಕೆ ಏರಿಕೆಯಾಗುತ್ತದೆ. ಆದರೆ ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವಿನ ಪರಿಸ್ಥಿತಿ ಗೊಂದಲದಲ್ಲಿದ್ದರೂ ಸಹ ಚಿನ್ನದ ಬೆಲೆ ಏರಿಲ್ಲ. ಹೂಡಿಕೆದಾರರು ಈಗ ಜಾಗತಿಕ ರಾಜಕೀಯ ಬೆಳವಣಿಗೆಯಿಗಿಂತ ಅಮೆರಿಕದ ಆರ್ಥಿಕ ನೀತಿ ಹಾಗೂ ಹಣದುಬ್ಬರ ಅಂಕಿ-ಅಂಶಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಅಮೆರಿಕ ಬಿಡುಗಡೆ ಮಾಡುವ ಹೊಸ ಆರ್ಥಿಕ ವರದಿಗಳು ಹಾಗೂ ಜಾಗತಿಕ ವಾಣಿಜ್ಯ ನಿರ್ಧಾರಗಳು ಚಿನ್ನ ಮತ್ತು ಬೆಳ್ಳಿಯ ಮುಂದಿನ ದರವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಲಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ 


Disclaimer: ಈ  ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಆರ್ಥಿಕ ಮಾಹಿತಿ ಮತ್ತು ಮಾರುಕಟ್ಟೆ ಬೆಳವಣಿಗೆಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಮಾಹಿತಿ ಲೇಖನವಾಗಿದೆ. ಹೂಡಿಕೆ ನಿರ್ಧಾರ ಕೈಗೊಳ್ಳುವ ಮೊದಲು ತಜ್ಞರ ಸಲಹೆ ಪಡೆಯುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top