ಹುಬ್ಬಳ್ಳಿ : ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಜುಲೈ ಅಂತ್ಯದಿಂದ ಹಲವು ರೈಲುಗಳ ವೇಳಾಪಟ್ಟಿ ಪರಿಷ್ಕರಣೆಯಾದೆ. ಇದರ ಪರಿಣಾಮ ಬೆಳಗಾವಿ, ಘಟಪ್ರಭಾ ಮತ್ತು ಲೋಂಡಾ ನಿಲ್ದಾಣಗಳ ಸಮಯದಲ್ಲಿ ಬದಲಾವಣೆಯಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ನೈಋತ್ಯ ರೈಲ್ವೆ (South Western Railway) ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಜುಲೈ 2026ರ ಕೊನೆಯ ವಾರದಿಂದ ಹೊಸ ಸಮಯ ಜಾರಿಗೆ ಬರಲಿದೆ.
ಈ ಪರಿಷ್ಕರಣೆ ಹಿನ್ನೆಲೆಯಲ್ಲಿ ಬೆಳಗಾವಿ, ಘಟಪ್ರಭಾ ಹಾಗೂ ಲೋಂಡಾ ನಿಲ್ದಾಣಗಳಲ್ಲಿ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನ ಸಮಯ ಬದಲಾಗಲಿದ್ದು, ಪ್ರಯಾಣಿಕರು ಮುಂಚಿತವಾಗಿ ಹೊಸ ವೇಳಾಪಟ್ಟಿಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
ರೈಲ್ವೆ ಇಲಾಖೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಒಟ್ಟು ಆರು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ರೈಲುಗಳ ವೇಳಾಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿ :
ಈ ಆರೋಗ್ಯ ಸುದ್ದಿ ಓದಿ : ಗ್ಯಾಸ್ಟ್ರಿಕ್ ಸಮಸ್ಯೆ ಪದೇಪದೇ ಕಾಡುತ್ತಿದೆಯಾ? ಪ್ರತಿದಿನದ ಈ ಸಣ್ಣ ಅಭ್ಯಾಸದಿಂದ ಮುಕ್ತಿ.
ಜೋಧ್ಪುರ – ಕೆಎಸ್ಆರ್ ಬೆಂಗಳೂರು ಸೂಪರ್‌ಫಾಸ್ಟ್ :
ಜುಲೈ 25, 2026ರಿಂದ ಆರಂಭವಾಗುವ ರೈಲು ಸಂಖ್ಯೆ 20693 ಜೋಧ್ಪುರ – ಕೆಎಸ್ಆರ್ ಬೆಂಗಳೂರು ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಘಟಪ್ರಭಾ ನಿಲ್ದಾಣಕ್ಕೆ ಈವರೆಗೆ ಇದ್ದ 08:43/08:45 ಗಂಟೆಗಳ ಬದಲು 08:28/08:30 ಗಂಟೆಗೆ ಆಗಮಿಸಿ ಹೊರಡಲಿದೆ.
ಅದೇ ರೀತಿ ಬೆಳಗಾವಿ ನಿಲ್ದಾಣಕ್ಕೆ 09:50/09:55 ಗಂಟೆಗಳ ಬದಲು 09:35/09:40 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.
ಈ ಸುದ್ದಿಯನ್ನು ಓದಿ : ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆ ತಗುಲಿದ ಚೆಂಡು; ಇಬ್ಬರು ಅಪ್ರಾಪ್ತರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ.
ಗಾಂಧಿಧಾಮ್ ಎಕ್ಸ್‌ಪ್ರೆಸ್ :
ಜುಲೈ 25, 2026ರಿಂದ ರೈಲು ಸಂಖ್ಯೆ 20686 ಕೆಎಸ್ಆರ್ ಬೆಂಗಳೂರು – ಗಾಂಧಿಧಾಮ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬೆಳಗಾವಿ ನಿಲ್ದಾಣಕ್ಕೆ ಈ ಹಿಂದೆ ಇದ್ದ 10:05/10:10 ಗಂಟೆಗಳ ಬದಲು 09:35/09:40 ಗಂಟೆಗೆ ಆಗಮಿಸಿ ಹೊರಡಲಿದೆ.
ಅಜ್ಮೀರ್ – ಮೈಸೂರು ಎಕ್ಸ್‌ಪ್ರೆಸ್ :
ಜುಲೈ 26, 2026ರಿಂದ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಬೆಳಗಾವಿ ನಿಲ್ದಾಣಕ್ಕೆ 09:45/09:50 ಗಂಟೆಗಳ ಬದಲು 09:35/09:40 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.
ಅಜ್ಮೀರ್ – ಬೆಂಗಳೂರು :
ಜುಲೈ 27, 2026ರಿಂದ ರೈಲು ಸಂಖ್ಯೆ 16531 ಅಜ್ಮೀರ್ – ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಬೆಳಗಾವಿ ನಿಲ್ದಾಣಕ್ಕೆ ಈಗಿನ 09:45/09:50 ಗಂಟೆಗಳ ಬದಲು 09:35/09:40 ಗಂಟೆಗೆ ತಲುಪಲಿದೆ.
ಇದನ್ನು ಓದಿ : ಮಳೆಗಾಲಕ್ಕೆ ನೈಋತ್ಯ ರೈಲ್ವೆ ಹೈಅಲರ್ಟ್: 15 ಸೇತುವೆ ಹಾಗೂ 48 RUB ಮೇಲೆ ಕಟ್ಟೆಚ್ಚರ.
ಜೋಧ್ಪುರ – ಬೆಂಗಳೂರು ವಾರಾಂತ್ಯ ರೈಲು :
ಜುಲೈ 29, 2026ರಿಂದ ರೈಲು ಸಂಖ್ಯೆ 16533 ಜೋಧ್ಪುರ – ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಕೂಡ ಬೆಳಗಾವಿ ನಿಲ್ದಾಣಕ್ಕೆ 09:35/09:40 ಗಂಟೆಗೆ ಆಗಮಿಸಿ ಹೊರಡಲಿದ್ದು, ಹಿಂದಿನ ವೇಳಾಪಟ್ಟಿಯಲ್ಲಿ ಇದು 09:45/09:50 ಗಂಟೆ ಆಗಿತ್ತು.
ಪುಣೆ – ಎರ್ನಾಕುಲಂ ಎಕ್ಸ್‌ಪ್ರೆಸ್ :
ಇನ್ನು ಜುಲೈ 25, 2026ರಿಂದ ರೈಲು ಸಂಖ್ಯೆ 11097 ಪುಣೆ – ಎರ್ನಾಕುಲಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ಲೋಂಡಾ ನಿಲ್ದಾಣಕ್ಕೆ ಈ ಹಿಂದೆ ಇದ್ದ 07:58/08:00 ಗಂಟೆಗಳ ಬದಲು 08:20/08:30 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.
ರೈಲ್ವೆ ಇಲಾಖೆ ಪ್ರಕಟಿಸಿರುವ ಈ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಸಂಬಂಧಿತ ಮಾರ್ಗಗಳಲ್ಲಿ ಪ್ರಯಾಣಿಸುವವರು ಹೊಸ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವುದು ಸೂಕ್ತ ಎಂದು ಸೂಚಿಸಲಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







