ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆ ತಗುಲಿದ ಚೆಂಡು; ಇಬ್ಬರು ಅಪ್ರಾಪ್ತರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ.

ಇಬ್ಬರು ಅಪ್ರಾಪ್ತರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ.

ಬಾಗಲಕೋಟೆ : ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಚೆಂಡು ತಗುಲಿದ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಪೊಲೀಸ್‌ ಠಾಣೆಯ ಮೆಟ್ಟಿಲೆರಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನರೆನೂರ ತಾಂಡಾದಲ್ಲಿ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕ್ರಿಕೆಟ್ ಆಡುತ್ತಿದ್ದ ವೇಳೆ ಚೆಂಡು ಮಹಿಳೆಯೊಬ್ಬರಿಗೆ ತಗುಲಿದ ಸಣ್ಣ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಶಾಲೆಯ ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಜಿಲ್ಲೆಯ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ನಿನ್ನೆ ಭಾನುವಾರದ ರಜೆ ದಿನವಾಗಿದ್ದರಿಂದ ಕೆಲ ಬಾಲಕರು ಶಾಲಾ ಮೈದಾನದಲ್ಲಿ ಮುಂಜಾನೆ ಸುಮಾರು 11 ಗಂಟೆಗೆ ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡಿದ್ದರು. ಆಟದ ಮಧ್ಯೆ ಹೊಡೆದ ಚೆಂಡು ಆಕಸ್ಮಿಕವಾಗಿ ಅಲ್ಲಿಯೇ ಇದ್ದ ಮಹಿಳೆ (ವೃದ್ದೆ) ಯೊಬ್ಬರಿಗೆ ತಗುಲಿದೆ.

ಈ ಆರೋಗ್ಯ ಸುದ್ದಿ ಓದಿ : 30 ವರ್ಷ ದಾಟಿದವರೇ ಎಚ್ಚರ! ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ; ಅವು ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಬಹುದು.

ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ :

ಚೆಂಡು ಆಕಸ್ಮಿಕವಾಗಿ ಸ್ಥಳದಲ್ಲಿದ್ದ ಮಹಿಳೆಗೆ ತಾಗಿದ ನಂತರ ಸ್ಥಳದಲ್ಲಿದ್ದ ಕೆಲವರು ಆಟವಾಡುತ್ತಿದ್ದ ಇಬ್ಬರು ಬಾಲಕರನ್ನು ಬಲವಂತವಾಗಿ ಹಿಡಿದು ತಂದಿದ್ದಾರೆ. ಆಮೇಲೆ ಇಬ್ಬರನ್ನೂ ಶಾಲೆಯ ಕಿಟಕಿಯ ಕಬ್ಬಿಣದ ಸರಳುಗಳಿಗೆ ಕಟ್ಟಿ ಹಾಕಿ, ನಿರ್ದಯವಾಗಿ ಥಳಿಸಿರುವ ಆರೋಪ ಕೇಳಿಬಂದಿದೆ.

ಹಲ್ಲೆಗೊಳಗಾದವರಲ್ಲಿ ಓರ್ವ 14 ವರ್ಷದ ಬಾಲಕನಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯ ಈ ವರ್ತನೆ ಈಗ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಸಣ್ಣ ತಪ್ಪಿಗೆ ಮಕ್ಕಳ ಮೇಲೆ ಇಂತಹ ಅಮಾನವೀಯ ಶಿಕ್ಷೆ ನೀಡಿರುವುದು ಸಮಾಜದಲ್ಲಿ ಆತಂಕ ಹುಟ್ಟಿಸಿದೆ.

ಗಾಯಗೊಂಡವರು ಆಸ್ಪತ್ರೆಗೆ ದಾಖಲು :

ಹಲ್ಲೆಯ ತೀವ್ರತೆಗೆ ಇಬ್ಬರು ಬಾಲಕರು ಗಾಯಗೊಂಡಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ ಮುಂದುವರಿದಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಕರಣ ದಾಖಲು :

ಮಕ್ಕಳ ಮೇಲಿನ ಹಲ್ಲೆ ವಿಚಾರ ತಿಳಿದ ಕೂಡಲೇ ಪೋಷಕರು ಕೆರೂರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಓದಿ : ಚಿಕ್ಕೋಡಿ : ಮಕ್ಕಳೊಂದಿಗೆ ನೀಚ ಕೃತ್ಯ ತೋರಿದ ಆರೋಪ; ಕನ್ನಡ ಶಿಕ್ಷಕನ ಅಮಾನತಿಗೆ ಡಿಡಿಪಿಐ ಆದೇಶ.

ಪ್ರಾಥಮಿಕ ತನಿಖೆಯಲ್ಲಿ ಹಲ್ಲೆ ನಡೆಸಿದ ಆರೋಪಿಗಳನ್ನು ರೇಣುಕಾ, ಬಸವರಾಜ ಹಾಗೂ ಅಭಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡು ಬಂಧಿಸಬೇಕೆಂದು ಪಾಲಕರು ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ :

ಮಕ್ಕಳ ಮಾಡಿದ ತಪ್ಪು ದೊಡ್ಡದಿರದಿದ್ದರು ಅವರನ್ನು ಕಟ್ಟಿ ಹಾಕಿ ಸಾರ್ವಜನಿಕವಾಗಿ ಹೊಡೆದಿರುವ ಘಟನೆಗೆ ಸ್ಥಳೀಯರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಕ್ಕಳೊಂದಿಗೆ ಇಂತಹ ಕ್ರೂರ ವರ್ತನೆ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಉದಾಹರಣೆಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಸ್‌ಪಿ ಹೇಳಿದ್ದೇನು?

ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : ಮಳೆಗಾಲಕ್ಕೆ ನೈಋತ್ಯ ರೈಲ್ವೆ ಹೈಅಲರ್ಟ್: 15 ಸೇತುವೆ ಹಾಗೂ 48 RUB ಮೇಲೆ ಕಟ್ಟೆಚ್ಚರ.

ಪ್ರಾಥಮಿಕ ಮಾಹಿತಿ ಪ್ರಕಾರ, ನರೇನೂರ ತಾಂಡಾ ನಿವಾಸಿಗಳಾದ ಮೂವರ ವಿರುದ್ಧ ಮಕ್ಕಳ ಮೇಲೆ ಹಿಂಸೆ ನಡೆಸಿದ ಹಾಗೂ ಬೆದರಿಕೆ ಹಾಕಿದ ಆರೋಪಗಳು ಕೇಳಿಬಂದಿವೆ. ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು SP ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರಕರಣದಲ್ಲಿ ಸೆಕ್ಷನ್ 115(2), 118(1), 133, 49, 352 ಹಾಗೂ 3(5) ಅಡಿಯಲ್ಲಿ ಆರೋಪ ದಾಖಲಿಸಲಾಗಿದ್ದು, ಮಕ್ಕಳ ಮೇಲೆ ಹಲ್ಲೆ, ಬೆದರಿಕೆ ಹಾಗೂ ಕಾನೂನುಬಾಹಿರ ವರ್ತನೆ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಮುಂದಿನ ತನಿಖೆಯ ಬಳಿಕ ಇನ್ನಷ್ಟು ವಿವರಗಳು ಹೊರಬೀಳುವ ಸಾಧ್ಯತೆ ಇದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ 


Disclaimer: ಈ ಲೇಖನವು ಸಾರ್ವಜನಿಕವಾಗಿ ಲಭ್ಯ ಮಾಹಿತಿಗಳು ಮತ್ತು ಪ್ರಾಥಮಿಕ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿರುವುದರಿಂದ ಮುಂದಿನ ಹಂತದಲ್ಲಿ ಅಧಿಕೃತ ಮಾಹಿತಿಗಳ ಆಧಾರದ ಮೇಲೆ ವಿವರಗಳಲ್ಲಿ ಬದಲಾವಣೆ ಸಂಭವಿಸಬಹುದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top