30 ವರ್ಷ ದಾಟಿದವರೇ ಎಚ್ಚರ! ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ; ಅವು ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಬಹುದು.

ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ; ಅವು ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಬಹುದು.

ಆರೋಗ್ಯ ಮಾಹಿತಿ : ನೀವು 30 ವರ್ಷ ದಾಟಿದ್ದೀರಾ? ಹಾಗಾದ್ರೆ ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸುತ್ತಿದ್ದರೆ ನಿರ್ಲಕ್ಷಿಸಬೇಡಿ. ಅವು ಕರುಳಿನ ಕ್ಯಾನ್ಸರ್ ಅಪಾಯದ ಆರಂಭಿಕ ಸೂಚನೆಗಳಾಗಿರಬಹುದು. ಹಾಗಾದ್ರೆ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಿಸುವ ಆ ಲಕ್ಷಣಗಳು ಯಾವುವು? ಬನ್ನಿ, ಇಂದಿನ ಆರೋಗ್ಯ ಮಾಹಿತಿಯಲ್ಲಿ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆ, ಅನಿಯಮಿತ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದ ಯುವಜನರಲ್ಲಿಯೂ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಹಿಂದೆ ಹೆಚ್ಚಾಗಿ ವಯೋವೃದ್ಧರಲ್ಲಿ ಕಂಡುಬರುತ್ತಿದ್ದ ಕೆಲವು ಕಾಯಿಲೆಗಳು ಈಗ 30 ವರ್ಷ ದಾಟಿದವರಲ್ಲಿಯೇ ಕಾಣಿಸಿಕೊಳ್ಳುತ್ತಿರುವುದು ವೈದ್ಯಕೀಯ ವಲಯದ ಆತಂಕಕ್ಕೆ ಕಾರಣವಾಗಿದೆ. ಅವುಗಳಲ್ಲಿ ಕರುಳಿನ ಕ್ಯಾನ್ಸರ್ ಕೂಡ ಪ್ರಮುಖವಾಗಿದೆ.

ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಈ ಕ್ಯಾನ್ಸರ್ ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಸಾಮಾನ್ಯವಾಗಿ ಕಂಡುಬರುವ ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ.

ಆರಂಭಿಕ ಹಂತದಲ್ಲೇ ಲಕ್ಷಣಗಳನ್ನು ಗುರುತಿಸಿದರೆ ಚಿಕಿತ್ಸೆ ಸುಲಭವಾಗಬಹುದು. ಆದರೆ ಹಲವರು ಸಾಮಾನ್ಯ ಹೊಟ್ಟೆ ಸಮಸ್ಯೆ ಎಂದು ನಿರ್ಲಕ್ಷಿಸುವುದೇ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಲಕ್ಷಣಗಳು :

ಈ ಕಾಯಿಲೆಯ ಪ್ರಮುಖ ಲಕ್ಷಣಗಳಲ್ಲಿ “ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಹೊಟ್ಟೆ ಹಸಿವು ಕಡಿಮೆಯಾಗುವುದು, ಪದೇಪದೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ತೀವ್ರ ಹೊಟ್ಟೆ ನೋವು, ಮಲಬದ್ಧತೆ ಅಥವಾ ಅತಿಸಾರದಂತಹ ಬದಲಾವಣೆಗಳು” ಸೇರಿವೆ.

ಈ ಸುದ್ದಿಯನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್? ಮಹತ್ವದ ಸೂಚನೆ ನೀಡಿದ ಸಿಎಂ ಡಿಕೆ ಶಿವಕುಮಾರ್.

ಹಾ, ಕೆಲವೊಮ್ಮೆ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಸಹ ಗಂಭೀರ ಎಚ್ಚರಿಕೆಯ ಸೂಚನೆಯಾಗಿರಬಹುದು.

ವೈದ್ಯರ ಪ್ರಕಾರ, ದೇಹದಲ್ಲಿ ನಿರಂತರ ಆಯಾಸ, ಹೆಚ್ಚಿದ ನಿದ್ರೆ, ರಾತ್ರಿ ವೇಳೆ ಅತಿಯಾಗಿ ಬೆವರುವುದು ಹಾಗೂ ಕಾರಣವಿಲ್ಲದ ದೌರ್ಬಲ್ಯ ಕೂಡ ಕೆಲ ಸಂದರ್ಭಗಳಲ್ಲಿ ಆರಂಭಿಕ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಿಕೊಳ್ಳಲು ಹೀಗೆ ಮಾಡಿ :

ಇಂತಹ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯ. “ಹಣ್ಣುಗಳು, ತರಕಾರಿಗಳು, ಧಾನ್ಯಗಳು ಹಾಗೂ ಫೈಬರ್ ಅಧಿಕ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು, ದೇಹದ ತೂಕ ನಿಯಂತ್ರಣದಲ್ಲಿ ಇಡುವುದು” ಉತ್ತಮ ಅಭ್ಯಾಸಗಳಾಗಿವೆ.

ತಂಬಾಕು, ಮದ್ಯಪಾನ ಹಾಗೂ ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ಸೇವಿಸದೇ ಇರುವುದು ಸಹ ಆರೋಗ್ಯ ರಕ್ಷಣೆಗೆ ಸಹಕಾರಿ.

ಇದನ್ನು ಓದಿ : ರಾತ್ರಿ ಊಟ ಮಾಡದೇ ಮಲಗುತ್ತೀರಾ? ಇದೆಷ್ಟು ದೊಡ್ಡ ಹಾನಿ ಮಾಡುತ್ತೆ ಗೊತ್ತಾ?

ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಸಣ್ಣ ಲಕ್ಷಣಗಳನ್ನೂ ನಿರ್ಲಕ್ಷಿಸದೆ ಆರಂಭದಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ನೆರವಾಗಬಹುದು. ಆರೋಗ್ಯಕರ ಆಹಾರ ಮತ್ತು ಶಿಸ್ತಿನ ಜೀವನಶೈಲಿ ಅನೇಕ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಕರುಳಿನ ಕ್ಯಾನ್ಸರ್ ಏಂದರೇನು?

ಕರುಳಿನ ಕ್ಯಾನ್ಸರ್ ಎಂದರೆ ದೊಡ್ಡ ಕರುಳು ಅಥವಾ ಗುದನಾಳದಲ್ಲಿ ಉಂಟಾಗುವ ಗಂಭೀರ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಆರಂಭಿಕ ಹಂತದಲ್ಲಿ ಇದರ ಲಕ್ಷಣಗಳು ಸಾಮಾನ್ಯ ಹೊಟ್ಟೆ ಸಮಸ್ಯೆಗಳಂತೆ ಕಾಣಿಸಿಕೊಳ್ಳುವುದರಿಂದ ಹಲವರು ಅದನ್ನು ನಿರ್ಲಕ್ಷಿಸುತ್ತಾರೆ.

ಪದೇಪದೇ ಹೊಟ್ಟೆ ನೋವು, ಮಲದಲ್ಲಿ ರಕ್ತ, ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಹಾಗೂ ಅತಿಯಾದ ಆಯಾಸ ಇದರ ಪ್ರಮುಖ ಎಚ್ಚರಿಕೆ ಸೂಚನೆಗಳಾಗಿರಬಹುದು.

ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯದಿದ್ದರೆ ಇದು ಜೀವಕ್ಕೆ ಅಪಾಯಕಾರಿಯಾಗಬಹುದು. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಈ ಅಪಾಯವನ್ನು ಕೆಲ ಮಟ್ಟಿಗೆ ಕಡಿಮೆ ಮಾಡಬಹುದು.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಕರುಳಿನ ಕ್ಯಾನ್ಸರ್ ಲೇಖನವು ಆರೋಗ್ಯ ತಜ್ಞರ ಸಾಮಾನ್ಯ ಅಭಿಪ್ರಾಯಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಅನುಮಾನಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top