ಸಿರ್ಕಾಳಿ (ತಮಿಳುನಾಡು) : ರೈಲು ಡಿಕ್ಕಿಯಾಗುವ ಕೊನೆ ಕ್ಷಣದಲ್ಲೇ ತನ್ನ ಪ್ರಾಣದ ಹಂಗನ್ನೂ ಲೆಕ್ಕಿಸದೆ ಓರ್ವನ “ಜೀವ ಉಳಿಸಿದ ಗೇಟ್‌ಕೀಪರ್”ನ ರೋಚಕ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗೇಟ್‌ಕೀಪರ್‌ನ ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಯಪ್ರಜ್ಞೆ ಮತ್ತು ಧೈರ್ಯ ಕೆಲವೊಮ್ಮೆ ಒಂದು ಅಮೂಲ್ಯ ಜೀವವನ್ನು ಉಳಿಸಬಲ್ಲದು ಎಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸಿರ್ಕಾಳಿ (SirKazhi) ಸಮೀಪದ ರೈಲ್ವೆ ಕ್ರಾಸಿಂಗ್‌ನಲ್ಲಿ ಕರ್ತವ್ಯದಲ್ಲಿದ್ದ ಗೇಟ್‌ಕೀಪರ್ ಒಬ್ಬರು ತಮ್ಮ ಪ್ರಾಣದ ಹಂಗನ್ನೂ ಲೆಕ್ಕಿಸದೆ, ವೇಗವಾಗಿ ಬರುತ್ತಿದ್ದ ರೈಲಿನ ಅಡಿಗೆ ಸಿಲುಕಲಿದ್ದ ವ್ಯಕ್ತಿಯನ್ನು ಕೊನೆಯ ಕ್ಷಣದಲ್ಲಿ ರಕ್ಷಿಸಿದ್ದಾರೆ.
ವಿಡಿಯೋದಲ್ಲೇನಿದೆ?
ಲಭ್ಯವಿರುವ ಮಾಹಿತಿಯ ಪ್ರಕಾರ, ಸಿರ್ಕಾಳಿ ಸಮೀಪದ ರೈಲ್ವೆ ಗೇಟ್‌ನಲ್ಲಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗೇಟ್ ಮುಚ್ಚಲಾಗಿತ್ತು. ರೈಲು ಕೆಲವೇ ಕ್ಷಣಗಳಲ್ಲಿ ಹಾದುಹೋಗಲಿದ್ದ ಕಾರಣ ವಾಹನಗಳು ಮತ್ತು ಸಾರ್ವಜನಿಕರು ಗೇಟ್ ಹೊರಭಾಗದಲ್ಲೇ ಕಾಯುತ್ತಿದ್ದರು.
ಆದರೆ ಇದೇ ವೇಳೆ ವ್ಯಕ್ತಿಯೊಬ್ಬ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಅಪಾಯಕಾರಿಯಾಗಿ ರೈಲ್ವೆ ಹಳಿ ದಾಟಲು ಮುಂದಾಗಿದ್ದಾನೆ. ಈತ ಗೇಟ್ ಮುಚ್ಚಿದ್ದರೂ ಹಳಿಯತ್ತ ಹೆಜ್ಜೆ ಹಾಕಿದ್ದು, ಎದುರಿನಿಂದ ಅತಿ ವೇಗದಲ್ಲಿ ರೈಲು ಸಮೀಪಿಸುತ್ತಿರುವುದನ್ನು ಗಮನಿಸದೇ ಹಳಿ ದಾಟಲೇತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿ : ಮಧುಮೇಹ, ಬಿಪಿ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್; 39 ಅಗತ್ಯ ಔಷಧಿಗಳ ಬೆಲೆ ಇಳಿಕೆ.
ಹಳಿಯಿಂದ ಆಚೆಗೆ ಎಳೆದು ಜೀವ ಉಳಿಸಿದ ಗೇಟ್‌ಕೀಪರ್ :
ಈ ಪರಿಸ್ಥಿತಿಯನ್ನು ಗಮನಿಸಿದ ಗೇಟ್‌ಕೀಪರ್ ಕ್ಷಣವೂ ತಡ ಮಾಡದೇ ತಕ್ಷಣ ಹಳಿಯತ್ತ ಓಡಿದ್ದಾರೆ. ವ್ಯಕ್ತಿ ರೈಲಿನ ಅತ್ಯಂತ ಸಮೀಪದಲ್ಲಿದ್ದಾಗಲೇ ಆತನನ್ನು ಬಲವಾಗಿ ಹಿಡಿದು ಹಳಿಯಿಂದ ಆಚೆಗೆ ಎಳೆದಿದ್ದಾರೆ. ಗೇಟ್‌ಕೀಪರ್ ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿದ ಕೇವಲ ಎರಡು ಅಥವಾ ಮೂರು ಸೆಕೆಂಡುಗಳಲ್ಲೇ ಎಕ್ಸ್‌ಪ್ರೆಸ್ ರೈಲು ಅದೇ ಹಳಿಯಲ್ಲಿ ವೇಗವಾಗಿ ಹಾದುಹೋಗಿದೆ.
ಈ ದೃಶ್ಯವನ್ನು ನೋಡಿದ ಸ್ಥಳದಲ್ಲಿದ್ದ ಜನರು ಕೆಲ ಕ್ಷಣ ಬೆಚ್ಚಿಬಿದ್ದಿದ್ದು, ಬಳಿಕ ಗೇಟ್‌ಕೀಪರ್ ತೋರಿದ ಸಮಯಪ್ರಜ್ಞೆ ಹಾಗೂ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆ ಅಲ್ಲಿನ ಸಿಸಿಟಿವಿ ಅಥವಾ ಸ್ಥಳದಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರೇಟ್ ಎಂದ ನೆಟ್ಟಿಗರು :
ವಿಡಿಯೋ ವೀಕ್ಷಿಸಿರುವ ಸಾವಿರಾರು ನೆಟ್ಟಿಗರು ಗೇಟ್‌ಕೀಪರ್ ಸಾಹಸವನ್ನು ಕೊಂಡಾಡಿದ್ದಾರೆ.
- “ಇಂತಹ ಸಿಬ್ಬಂದಿಯೇ ನಿಜವಾದ ಹೀರೋಗಳು”,
- “ಕರ್ತವ್ಯಕ್ಕಿಂತ ಜೀವದ ಮೌಲ್ಯವನ್ನು ಮೊದಲಿಗಿಟ್ಟಿದ್ದಾರೆ”,
- “ಕೆಲವೇ ಕ್ಷಣ ತಡವಾಗಿದ್ದರೆ ದೊಡ್ಡ ದುರಂತ ಸಂಭವಿಸುತಿತ್ತು” ಎಂಬಂತಹ ಅನೇಕ ಕಾಮೆಂಟ್‌ಗಳು ಹರಿದುಬರುತ್ತಿವೆ.
ಈ ಸುದ್ದಿಯನ್ನು ಓದಿ : ಆಗಷ್ಟೇ ಜನಿಸಿದ ಮರಿಯಾನೆಗೆ ಸೊಂಡಿಲಿನಿಂದ ಆಸರೆಯಾದ ತಾಯಾನೆ; ಹೃದಯ ಗೆದ್ದ ವೈರಲ್ ವಿಡಿಯೋ!
ಮುನ್ನೇಚ್ಚರಿಕೆ :
- ರೈಲ್ವೆ ಕ್ರಾಸಿಂಗ್‌ಗಳಲ್ಲಿ ಮುನ್ನೆಚ್ಚರಿಕೆ ಸೂಚನೆಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
- ಗೇಟ್ ಮುಚ್ಚಿರುವಾಗ ಅಥವಾ ರೈಲು ಸಮೀಪಿಸುತ್ತಿರುವ ವೇಳೆ ಹಳಿ ದಾಟಲು ಪ್ರಯತ್ನಿಸುವುದು ಜೀವಕ್ಕೆ ಅಪಾಯಕಾರಿಯಾಗಬಹುದು.
- ಸಿರ್ಕಾಳಿ ಸಮೀಪ ನಡೆದ ಈ ಘಟನೆ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದು, ಕ್ಷಣದ ನಿರ್ಲಕ್ಷ್ಯ ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.
ರೈಲು ಡಿಕ್ಕಿಯಾಗುವ ಕ್ಷಣದಲ್ಲೇ ಜೀವ ಉಳಿಸಿದ ಗೇಟ್‌ಕೀಪರ್ :
INCREDIBLE Presence of Mind 🫡 A railway gatekeeper risked his Life to save a man crossing the Railway Line JUST SECONDS before a speeding train passed near SirKazhi in Tamil Nadu 😱🫡 pic.twitter.com/Z4f9DrvnCO
— Rosy (@rose_k01) July 9, 2026
Courtesy : Social Media / Twitter
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ಈ ರೈಲು ಡಿಕ್ಕಿಯಾಗುವ ಕ್ಷಣದಲ್ಲೇ ಜೀವ ಉಳಿಸಿದ ಗೇಟ್‌ಕೀಪರ್ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಹಾಗೂ ವೈರಲ್ ವಿಡಿಯೋ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳ ಅಧಿಕೃತ ಮಾಹಿತಿ ಅಥವಾ ತನಿಖೆ ಹೊರಬಂದಲ್ಲಿ ವಿವರಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಓದುಗರು ರೈಲ್ವೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಗೇಟ್ ಮುಚ್ಚಿರುವ ವೇಳೆ ಅಥವಾ ರೈಲು ಸಮೀಪಿಸುತ್ತಿರುವಾಗ ಹಳಿ ದಾಟಲು ಎಂದಿಗೂ ಪ್ರಯತ್ನಿಸಬಾರದು.







