ಹೋಟೆಲ್ ರೂಮ್‌ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಪತಿ; ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತ್ನಿ, ವಿಡಿಯೋ ವೈರಲ್.

ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತ್ನಿ

ರೇವಾ ನಗರ (ಮಧ್ಯಪ್ರದೇಶ) : ಪತಿಯೋರ್ವ ಮತ್ತೋಬ್ಬ ಯುವತಿಯೊಂದಿಗೆ ಹೋಟೆಲ್ ಕೊಠಡಿಯಲ್ಲಿ ಇದ್ದ ವೇಳೆ ರೆಡ್‌ಹ್ಯಾಂಡ್‌ ಆಗಿ ಪತ್ನಿಯೇ ಹಿಡಿದ ಘಟನೆಯಿಂದ ಹೋಟೆಲ್‌ನಲ್ಲಿಯೇ ನಡೆದ ಹೈಡ್ರಾಮಾ ನಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂವರ (ಪತಿ, ಪತ್ನಿ ಮತ್ತು ಯುವತಿ) ವಾಗ್ವಾದ ಮತ್ತು ಪೊಲೀಸ್ ತನಿಖೆಯ ಸಂಪೂರ್ಣ ವಿವರ ಇಲ್ಲಿದೆ.

ವಿವಾಹಿತ ವ್ಯಕ್ತಿಯೊಬ್ಬ ಮತ್ತೋಬ್ಬ ಯುವತಿಯೊಂದಿಗೆ ಹೋಟೆಲ್ ಕೊಠಡಿಯಲ್ಲಿ ಇದ್ದ ವೇಳೆ, ಆತನ ಪತ್ನಿಯೇ ಸ್ಥಳಕ್ಕೆ ದಿಢೀರ್ ಆಗಿ ಆಗಮಿಸಿ ರೆಡ್‌ಹ್ಯಾಂಡ್‌ ಆಗಿ ಹಿಡಿದ ಘಟನೆ ಮಧ್ಯಪ್ರದೇಶದ ರೇವಾ ನಗರದ ಹೊಸ ಬಸ್ ನಿಲ್ದಾಣದ ಸಮೀಪದ ಹೋಟೆಲ್‌ ಒಂದರಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ದಾಂಪತ್ಯ ನಂಬಿಕೆ, ಸಂಬಂಧಗಳ ಪ್ರಾಮಾಣಿಕತೆ ಮತ್ತು ಕಾನೂನು ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಮಹಿಳೆಯ ಹೆಸರು ರಾನು, ಪತಿಯ ಹೆಸರು ಪ್ರಕಾಶ್ ಸಿಂಗ್. ಇಬ್ಬರೂ ಮಧ್ಯಪ್ರದೇಶದ ಸಿಧಿ ಜಿಲ್ಲೆಗೆ ಸೇರಿದವರಾಗಿದ್ದು, 2025ರ ಜುಲೈ 3ರಂದು ನ್ಯಾಯಾಲಯದಲ್ಲಿ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿ : ಲೊಂಡಾ ಯಾರ್ಡ್ ಕಾಮಗಾರಿ: 4 ರೈಲುಗಳು ಭಾಗಶಃ ರದ್ದು, 2 ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವಿಳಂಬ.

ಸ್ನೇಹಿತನ ಫೋನ್;‌ ಪತ್ನಿ ಹೋಟೆಲ್‌ಗೆ ದೌಡು :

ಪ್ರಕಾಶ್ ಸಿಂಗ್ ಮತ್ತೊಬ್ಬ ಯುವತಿಯೊಂದಿಗೆ ರೇವಾದ ಹೋಟೆಲ್‌ನಲ್ಲಿ ತಂಗಿದ್ದಾನೆ ಎಂಬ ಮಾಹಿತಿ ರಾನು ಪಾಂಡೆ ಅವರಿಗೆ ಅವರ ಸ್ನೇಹಿತನ ಮೂಲಕ ದೊರೆತಿದೆ ಎನ್ನಲಾಗಿದೆ. ಈ ಮಾಹಿತಿ ಸಿಕ್ಕ ತಕ್ಷಣವೇ ಅವರು ಹೋಟೆಲ್‌ಗೆ ತೆರಳಿ ಪತಿಯನ್ನು ಹುಡುಕಲು ಆರಂಭಿಸಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಹೋಟೆಲ್‌ನಲ್ಲಿ ಹುಡುಕಾಟ ನಡೆಸಿದ ಬಳಿಕ, 108ನೇ ಕೊಠಡಿ ಮೇಲೆ ಅನುಮಾನ ವ್ಯಕ್ತಪಡಿಸಿ ಬಾಗಿಲು ತಟ್ಟಿದ್ದಾರೆ. ಬಹಳ ಹೊತ್ತಿನ ನಂತರ ಬಾಗಿಲು ತೆರೆದಾಗ ಪತಿಯೊಂದಿಗೆ ಯುವತಿಯೊಬ್ಬಳು ಇರುವುದನ್ನು ಕಂಡು ರಾನು ಆಕ್ರೋಶಗೊಂಡಿದ್ದಾರೆ.

ಸಾರ್ವಜನಿಕವಾಗಿಯೇ ಪತಿಗೆ ತರಾಟೆ :

ಘಟನೆಯ ವಿಡಿಯೋದಲ್ಲಿ ಪತ್ನಿ ತನ್ನ ಪತಿಯನ್ನು ಸಾರ್ವಜನಿಕವಾಗಿಯೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತವೆ. ಆಕ್ರೋಶಗೊಂಡ ಅವರು ಪತಿಗೆ ಕಪಾಳಮೋಕ್ಷ ಮಾಡಿರುವುದೂ ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಈ ನಡುವೆ, ತನಿಖೆಯಲ್ಲಿ ಹೋಟೆಲ್ ಕೊಠಡಿಯನ್ನು ‘ಆಕಾಶ್ ಸಿಂಗ್ ಚೌಹಾನ್’ ಎಂಬ ಹೆಸರಿನಲ್ಲಿ ಬುಕ್ ಮಾಡಲಾಗಿತ್ತು ಎಂಬ ಮಾಹಿತಿ ಹೊರಬಂದಿದೆ. ಜೊತೆಗೆ ಯುವತಿಯ ಪ್ರವೇಶಕ್ಕಾಗಿ ನಕಲಿ ಆಧಾರ್ ಕಾರ್ಡ್ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ವಿಚಾರವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನು ಓದಿ : ರಸ್ತೆಯಲ್ಲಿ 6 ವರ್ಷದ ಮೊಮ್ಮಗಳಿಂದ ಕಾರು ಚಾಲನೆ; ಪಿಎಸ್‌ಐ ಅಮಾನತು, ಪ್ರಕರಣ ದಾಖಲು.

ಮೂವರ ನಡುವೆ ತೀವ್ರ ವಾಗ್ವಾದ :

ಘಟನೆಯ ವೇಳೆ ಪತ್ನಿ ರಾನು, “ನನಗೆ ವಿಚ್ಛೇದನ ನೀಡಿದ್ದೀಯಾ? ವಿಚ್ಛೇದನ ಕೊಡಬೇಕಿದ್ದರೆ ನನ್ನನ್ನು ಮದುವೆಯಾಗಿದ್ದು ಏಕೆ? ನನ್ನೊಂದಿಗೆ ದ್ರೋಹ ಮಾಡಿ ಮತ್ತೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯ. ನಾನು ವಿಚ್ಛೇದನ ನೀಡುವುದಿಲ್ಲ” ಎಂದು ಪತಿಯನ್ನು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ, ಹೋಟೆಲ್ ಕೊಠಡಿಯಲ್ಲಿ ಇದ್ದ ಯುವತಿ ಕೂಡ ಪ್ರಕಾಶ್ ಸಿಂಗ್ ಅವರನ್ನು ಪ್ರಶ್ನಿಸಿದ್ದು, “ನೀನು ಮದುವೆಯಾಗಿಲ್ಲ ಎಂದು ಹೇಳಿದ್ದೆ. ಹಾಗಾದರೆ ಇವರು ಯಾರು? ನನ್ನ ಮುಂದಿನ ಜೀವನದ ಬಗ್ಗೆ ಯೋಚಿಸಬೇಕಲ್ಲವೇ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತಿ ಏನು ಹೇಳಿದ್ದಾನೆ?

ಆರಂಭದಲ್ಲಿ ಯುವತಿಯೇ ತನ್ನನ್ನು ಬಲವಂತವಾಗಿ ಹೋಟೆಲ್‌ಗೆ ಕರೆತಂದಿದ್ದಾಳೆ ಎಂದು ಪ್ರಕಾಶ್ ಸಿಂಗ್ ಹೇಳಿದ್ದಾನೆ ಎನ್ನಲಾಗಿದೆ.

ಆದರೆ ಬಳಿಕ ತನ್ನ ಹೇಳಿಕೆಯನ್ನು ಬದಲಿಸಿ, “ನಾನು ನನ್ನ ಹೊಸ ಪ್ರಿಯತಮೆಯೊಂದಿಗೆ ಬದುಕಲು ಬಯಸುತ್ತೇನೆ. ರಾನು ಅವರನ್ನು ಮದುವೆಯಾಗಿದ್ದು ನನ್ನ ಜೀವನದ ದೊಡ್ಡ ತಪ್ಪು, ಅವರಿಗೆ ವಿಚ್ಛೇದನ ನೀಡಿ ಹೊಸ ಸಂಗಾತಿಯೊಂದಿಗೆ ಜೀವನ ಆರಂಭಿಸುತ್ತೇನೆ” ಎಂದು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಓದಿ : ರೈಲು ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಯುವಕ – ಯುವತಿಯ ಹೈಡ್ರಾಮಾ; ವಿಡಿಯೋ ವೈರಲ್.!

ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತ್ನಿ; ವೈರಲ್‌ ವಿಡಿಯೋ :

Courtesy : Social Media / Twitter

ಪೊಲೀಸ್ ಠಾಣೆಗೆ ಕರೆದೊಯ್ದ ಪತ್ನಿ :

ಘಟನೆಯ ಬಳಿಕ ರಾನು ತಮ್ಮ ಪತಿಯನ್ನು ಆಟೋದಲ್ಲಿ ಕೂರಿಸಿಕೊಂಡು ನೇರವಾಗಿ ಸಿವಿಲ್ ಲೈನ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹೋಟೆಲ್‌ನಲ್ಲಿ ದಂಪತಿಯ ನಡುವೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ದೂರು ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ಠಾಣಾಧಿಕಾರಿ ವಿಜಯ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಈ ನಡುವೆ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ದಾಂಪತ್ಯ ಸಂಬಂಧದಲ್ಲಿ ವಿಶ್ವಾಸ, ಪಾರದರ್ಶಕತೆ ಮತ್ತು ಕಾನೂನುಬದ್ಧ ಜವಾಬ್ದಾರಿಗಳ ಕುರಿತು ನೆಟ್ಟಿಗರು ಪರ-ವಿರೋಧದ ಚರ್ಚೆ ನಡೆಸುತ್ತಿದ್ದಾರೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ವರದಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಆರೋಪಗಳು ಅಥವಾ ಹೇಳಿಕೆಗಳ ಅಂತಿಮ ಸತ್ಯಾಸತ್ಯತೆಯನ್ನು ಸಂಬಂಧಿತ ಅಧಿಕಾರಿಗಳ ತನಿಖೆಯ ನಂತರವೇ ನಿರ್ಧರಿಸಲಾಗುತ್ತದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top