ರೈಲು ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಯುವಕ – ಯುವತಿಯ ಹೈಡ್ರಾಮಾ; ವಿಡಿಯೋ ವೈರಲ್.!

ರೈಲು ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಯುವಕ - ಯುವತಿಯ ಹೈಡ್ರಾಮಾ

ಡೆಸ್ಕ್ : ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಯುವಕ – ಯುವತಿಯ ಹೈಡ್ರಾಮಾ ನಡೆದಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ನೆಟ್ಟಿಗರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಕೆಲವೊಂದು ದೃಶ್ಯಗಳು ಮಾತ್ರ ನೆಟ್ಟಿಗರ ಗಮನವನ್ನು ವಿಶೇಷವಾಗಿ ಸೆಳೆಯುತ್ತವೆ. ಸದ್ಯ ಅಂತಹದ್ದೇ ಒಂದು ವಿಶೇಷವಾದ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರೇಯಸಿ ತನ್ನನ್ನು ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಯುವಕನೊಬ್ಬ ರೈಲು ನಿಲ್ದಾಣದಲ್ಲೇ ಎಲ್ಲರ ಎದುರು ಮಾಡಿದ ಹೈಡ್ರಾಮಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಈ ಘಟನೆ ಮಹಾರಾಷ್ಟ್ರದ ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿನ ವಿವರಗಳ ಪ್ರಕಾರ, ಪ್ರೇಯಸಿ ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟು ರೈಲಿನಲ್ಲಿ ತೆರಳಲು ನಿಲ್ದಾಣಕ್ಕೆ ಬಂದಿದ್ದಾಳೆ.

ಇದನ್ನು ಓದಿ : ರೈಲು ಡಿಕ್ಕಿಯಾಗುವ ಕ್ಷಣದಲ್ಲೇ ಜೀವ ಉಳಿಸಿದ ಗೇಟ್‌ಕೀಪರ್‌; ರೋಚಕ ವಿಡಿಯೋ ವೈರಲ್!

ಆದರೆ ಆಕೆಯ ಬಾಯ್‌ಫ್ರೆಂಡ್ ಅವಳ ಮನವೊಲಿಸಲು ಯುವಕ ಕೂಡ ರೈಲು ನಿಲ್ದಾಣದವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾನೆ. ಆದರೆ ಯುವತಿಯು ತನ್ನ ನಿರ್ಧಾರವನ್ನು ಬದಲಾಯಿಸದೆ ಮುಂದೆ ಸಾಗಲು ಯತ್ನಿಸಿದಾಗ, ಯುವಕ ಎಲ್ಲರ ಎದುರೇ ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಲು ಆರಂಭಿಸಿದ್ದಾನೆ.

ಯುವಕ – ಯುವತಿಯ ಹೈಡ್ರಾಮಾದ ವಿಡಿಯೋ :

Courtesy : Social Media / Twitter

ಅಷ್ಟೇ ಅಲ್ಲದೆ, ಆಕೆ ತೆರಳದಂತೆ ತಡೆಯುವ ಉದ್ದೇಶದಿಂದ ಪ್ಲಾಟ್‌ಫಾರ್ಮ್ ಮೇಲೆಯೇ ನೆಲಕ್ಕೆ ಮಲಗಿ ಆಕೆಯ ಕಾಲುಗಳನ್ನು ಹಿಡಿದುಕೊಂಡಿರುವ ದೃಶ್ಯ ಕೂಡ ವಿಡಿಯೋದಲ್ಲಿ ಕಂಡುಬರುತ್ತದೆ. ಈ ಅನಿರೀಕ್ಷಿತ ಘಟನೆಯನ್ನು ಕಂಡು ಅಲ್ಲಿದ್ದ ಪ್ರಯಾಣಿಕರು ಕ್ಷಣಕಾಲ ನಿಂತು ನೋಡಿದರೇ, ಇನ್ನು ಕೆಲವರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಲ್ಲಿದ್ದ ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಹೈಡ್ರಾಮಾ ನೋಡುತ್ತಿದ್ದ ಜನಸಂದಣಿಯನ್ನು ಚದುರಿಸಿ, ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರೆಂದು ವರದಿಯಾಗಿದೆ. ಆದರೆ ಘಟನೆಯ ಅಂತಿಮ ಫಲಿತಾಂಶದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿಯನ್ನು ಓದಿ : ರಸ್ತೆಯಲ್ಲಿ 6 ವರ್ಷದ ಮೊಮ್ಮಗಳಿಂದ ಕಾರು ಚಾಲನೆ; ಪಿಎಸ್‌ಐ ಅಮಾನತು, ಪ್ರಕರಣ ದಾಖಲು.

ನೆಟ್ಟಿಗರ ಅಭಿಪ್ರಾಯ :

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

  • “ಇಂತಹ ನಿಜವಾದ ಪ್ರೀತಿ ಈಗ ಅಪರೂಪ”, “ಪ್ರೀತಿಗಾಗಿ ಇಷ್ಟು ಮಟ್ಟಿಗೆ ಹೋಗುವುದು ಭಾವನಾತ್ಮಕ ಸಂಗತಿ” ಎಂದು ಕೆಲವರು ಯುವಕನ ಪ್ರೀತಿಯನ್ನು ಮೆಚ್ಚಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • “ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕು, ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಹೈಡ್ರಾಮಾ ನಡೆಸುವುದು ಸರಿಯಲ್ಲ” ಎಂದು ಇನ್ನೊಂದೆಡೆ ಹಲವರು ಈ ರೀತಿಯ ವರ್ತನೆಯನ್ನು ಸಮರ್ಥಿಸದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • “ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸಂಬಂಧ ಮತ್ತು ಕುಟುಂಬದ ಗೌರವಕ್ಕೂ ಧಕ್ಕೆ ಉಂಟುಮಾಡುತ್ತದೆ” ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಈ ಮಧ್ಯ ಮತ್ತಷ್ಟು ಮಂದಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲಿ ಎಂಬ ಕಾರಣದಿಂದಲೇ ಇಂತಹ ಯುವಕ – ಯುವತಿಯ ಹೈಡ್ರಾಮಾ ಘಟನೆಗಳು ಉದ್ದೇಶಪೂರ್ವಕವಾಗಿಯೂ ನಡೆದಿರುವ ಸಾಧ್ಯತೆಯನ್ನು ಕೂಡಾ ಉಲ್ಲೇಖಿಸಿದ್ದಾರೆ.

ಪ್ರೀತಿ ಮತ್ತು ಸಂಬಂಧಗಳಲ್ಲಿ ಪರಸ್ಪರ ಗೌರವ, ಸಂವಹನ ಹಾಗೂ ಪ್ರಬುದ್ಧತೆ ಮುಖ್ಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ನಡೆಗಳು ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.‌

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಘಟನೆಯ ಎಲ್ಲಾ ವಿವರಗಳು ಅಥವಾ ಸಂದರ್ಭಗಳು ಅಧಿಕೃತವಾಗಿ ದೃಢಪಟ್ಟಿಲ್ಲ. 

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top