Advertisement
Advertisement

ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸಹಕಾರಿಗೆ ₹2.81 ಕೋಟಿ ಲಾಭ; ಸದಸ್ಯರಿಗೆ ಶೇ.20ರಷ್ಟು ಲಾಭಾಂಶ.

ಶ್ರೀ ಮಹಾಲಕ್ಷ್ಮೀ ಸಹಕಾರಿಗೆ ₹2.81 ಕೋಟಿ ಲಾಭ

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನ ಆರ್ಥಿಕ ವರ್ಷದ ಕೊನೆಯಲ್ಲಿ ರೂ. 2.81 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ ಹೇಳಿದರು.

ಶನಿವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ 24ನೇ ಸರ್ವ ಸಾಮಾನ್ಯ ಸಭೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

 ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಪ್ರಗತಿಯಲ್ಲಿ :

ಸಹಕಾರಿಯು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಸಂಘದಲ್ಲಿ 17,750 ಸದಸ್ಯರಿದ್ದು, ರೂ 25.58 ಲಕ್ಷ ಶೇರು ಬಂಡವಾಳ ಹಾಗೂ ರೂ 12.71 ಕೋಟಿ ಕಾಯ್ದಿಟ್ಟ ನಿಧಿಯಿದೆ. ಹಣಕಾಸು ವರ್ಷದಲ್ಲಿ ರೂ 107.91 ಕೋಟಿ ಠೇವಣಿ ಸಂಗ್ರಹವಾಗಿದೆ. ಸಹಕಾರಿಯಿಂದ ಇದುವರೆಗೆ ರೂ 99.72 ಕೋಟಿ ಸಾಲ ವಿತರಿಸಲಾಗಿದೆ.

ಇದನ್ನು ಓದಿ : “ಹಾವು ಕಡಿತಕ್ಕೆ ಹೊಸ ಔಷಧಿ” : ನಾಗರಹಾವು, ಕಾಳಿಂಗ ಸರ್ಪದ ವಿಷದ ವಿರುದ್ಧ ಪರಿಣಾಮಕಾರಿ ; ಐಐಎಸ್‌ಸಿ ಮಹತ್ವದ ಸಂಶೋಧನೆ.!

18.69 ಕೋಟಿ ರೂಗಳನ್ನು ಬ್ಯಾಂಕ್ ಮತ್ತು ಇನ್ನಿತರ ಸಂಘಗಳಲ್ಲಿ ಗುಂತಾವಣೆ ಮಾಡಲಾಗಿದ್ದು, ರೂ 120.88 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಹಕಾರಿಯ ಸದಸ್ಯರಿಗೆ ಶೇ.20 ರಷ್ಟು ಲಾಭಾಂಶ ವಿತರಿಸಲಾಗಿದೆ ಎಂದರು.

ಸಹಕಾರಿಯ ಈ ಸಾಧನೆಗೆ ಕಾರಣಿಕರ್ತರಾದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಮೇಲೆ ನಿರಂತರ ವಿಶ್ವಾಸವಿಟ್ಟ ಎಲ್ಲಾ ಶೇರುದಾರರು ಮತ್ತು ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು. ಮುಂಬರುವ ದಿನಗಳಲ್ಲಿ ಸಹಕಾರಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಓದಿ : ಕರ್ನಾಟಕ ಅರಣ್ಯ ಇಲಾಖೆಯಲ್ಲಿ 121 ಹುದ್ದೆಗಳು; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ.!

ಸಹಕಾರಿಯ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ನಿರ್ದೇಶಕರಾದ ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಬಿಡಿಸಿಸಿ ಬ್ಯಾಂಕ ಮಾಜಿ ನಿರ್ದೆಶಕ ಸತೀಶ ಕಡಾಡಿ, ಶಿವಪ್ಪ ಗೊಸಬಾಳ, ಗುರುನಾಥ ವ್ಯಾಪಾರಿ, ಹಣಮಂತ ಸಂಗಟಿ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಸೋಮಲಿಂಗ ಹಡಿಗನಾಳ, ಪುಂಡಲಿಕ ಅರಭಾಂವಿ, ನಿಂಗಪ್ಪ ಮಿಡಕನಟ್ಟಿ, ಸಲಹಾ ಸಮಿತಿ ಅಧ್ಯಕ್ಷರಾದ ಈರಪ್ಪ ದೇಯನ್ನವರ, ಬಸವರಾಜ ಕತ್ತಿ, ಆನಂದ ರೂಗಿ, ವಿಶೇಷ ಆಹ್ವಾನಿತರಾಗಿ ರಾಜು ಜೋಶಿ ಹಾಗೂ ಪ್ರವೀಣ ಜಕಾತಿ ಸೇರಿದಂತೆ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸಹಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಶಾಂತ ಪಟ್ಟಣಶೆಟ್ಟಿ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ (ಪ್ರಭಾರ) ಪರಪ್ಪ ಗಿರೆಣ್ಣವರ ನಿರೂಪಿಸಿದರು, ರಾಜಶೇಖರ ಕುರಬೇಟ ವಾರ್ಷಿಕ ವರದಿ ಓದಿದರು. ಶಿವಾನಂದ ಕುಂಬಾರ ವಂದಿಸಿದರು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top