ನೌಕರಿ : ಆಧಾರ್ ಸೇವಾ ಕೇಂದ್ರದಲ್ಲಿ ಖಾಲಿ ಇರುವ 245 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುದ್ದು, 10ನೇ ಮತ್ತು 12ನೇ ತರಗತಿ ಪಾಸಾದ ಪಾಸ್ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ. CSC e-Governance Services India Limited ವತಿಯಿಂದ ಆಧಾರ್ ಸೇವಾ ಕೇಂದ್ರಗಳ (Aadhaar Seva Kendra) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಖಾಲಿ ಇರುವ ಆಧಾರ್ ಮೇಲ್ವಿಚಾರಕ/ಆಪರೇಟರ್ (Aadhaar Supervisor/Operator) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಒಟ್ಟು 245ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಭಾರತದೆಲ್ಲೆಡೆ ಕೆಲಸ ಮಾಡುವ ಅವಕಾಶ ದೊರೆಯಲಿದೆ.
ಹುದ್ದೆಗಳ ವಿವರ :
- ಇಲಾಖೆ ಹೆಸರು: ಆಧಾರ್ ಸೇವಾ ಕೇಂದ್ರ (Aadhaar Seva Kendra).
- ಹುದ್ದೆ ಹೆಸರು: ಆಧಾರ್ ಮೇಲ್ವಿಚಾರಕ/ಆಪರೇಟರ್ (Aadhaar Supervisor/Operator).
- ಹುದ್ದೆಗಳ ಸಂಖ್ಯೆ: 245+
- ಉದ್ಯೋಗ ಸ್ಥಳ: ಅಖಿಲ ಭಾರತ.
- ಅರ್ಜಿ ಸಲ್ಲಿಕೆ ವಿಧಾನ: Online.
ಶೈಕ್ಷಣಿಕ ಅರ್ಹತೆ :
ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ಯಾವುದಾದರೂ ಅರ್ಹತೆ ಹೊಂದಿರಬೇಕು:
- 10ನೇ ತರಗತಿ (SSLC).
- 12ನೇ ತರಗತಿ (PUC).
- ಐಟಿಐ (ITI).
- ಡಿಪ್ಲೊಮಾ (Diploma).
ಕೆಲವು ಹುದ್ದೆಗಳಿಗೆ UIDAI ಪ್ರಮಾಣಪತ್ರ (Aadhaar Operator/Supervisor Certificate) ಕಡ್ಡಾಯವಾಗಿರಬಹುದು ಎಂದು ತಿಳಿಸಲಾಗಿದೆ.
ಇದನ್ನು ಓದಿ : ಕರ್ನಾಟಕ ಹೈಕೋರ್ಟ್ 2026 ನೇಮಕಾತಿ: 101 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ.
ವಯೋಮಿತಿ :
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯೋಮಿತಿ ಕುರಿತು ಅಧಿಕೃತ ಅಧಿಸೂಚನೆ (Notification) ಯಲ್ಲಿ ಮಾಹಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಆಧಾರದ ಮೇಲೆ ನಡೆಯಲಿದೆ:
- ಲಿಖಿತ ಪರೀಕ್ಷೆ (Written Test).
- ಸಂದರ್ಶನ (Interview).
- ದಾಖಲೆ ಪರಿಶೀಲನೆ (Document Verification).
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 13 ಏಪ್ರಿಲ್ 2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಮೇ 2026.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ (Official Wesite) ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ (Download) ಮಾಡಿ.
- ಅರ್ಹತೆ ಹಾಗೂ ನಿಯಮಗಳನ್ನು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಅರ್ಜಿ Form ಭರ್ತಿ ಮಾಡಿ.
- ಅಗತ್ಯ ದಾಖಲೆಗಳು, ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
- ಅರ್ಜಿ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯಕ್ಕಾಗಿ Printout ತೆಗೆದುಕೊಳ್ಳಿ.
ಅಧಿಕೃತ ವೆಬ್‌ಸೈಟ್ :
- [CSC Official Website] : https://csc.gov.in/
ಆಧಾರ್ ಸೇವಾ ಕೇಂದ್ರ :
- ಆಧಾರ್ ಸೇವಾ ಕೇಂದ್ರ (Aadhaar Seva Kendra) ಭಾರತ ಸರ್ಕಾರದ ಪ್ರಮುಖ ಸೇವಾ ಕೇಂದ್ರವಾಗಿದ್ದು, ನಾಗರಿಕರಿಗೆ ಆಧಾರ್ ಸಂಬಂಧಿತ ಎಲ್ಲಾ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡುತ್ತದೆ.
- ಇಲ್ಲಿ ಹೊಸ ಆಧಾರ್ ನೋಂದಣಿ, ವಿವರಗಳ ತಿದ್ದುಪಡಿ (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ) ಹಾಗೂ ಬಯೋಮೆಟ್ರಿಕ್ ಅಪ್‌ಡೇಟ್‌ಗಳನ್ನು ಮಾಡಿಸಬಹುದು.
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
- ಸಾರ್ವಜನಿಕರಿಗೆ ಸುಲಭ ಮತ್ತು ವೇಗವಾಗಿ ಸೇವೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
Disclaimer: ಈ ಉದ್ಯೋಗ ಮಾಹಿತಿಯು ಲಭ್ಯ ಅಧಿಕೃತ ಅಧಿಸೂಚನೆಗಳು ಹಾಗೂ ವಿವಿಧ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮಾಹಿತಿ ಪರಿಶೀಲಿಸಿಕೊಳ್ಳುವುದು ಒಳಿತು.




