CESCOM: ಸೆಸ್ಕಾಂನಲ್ಲಿ 200 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

CESCOM ನಲ್ಲಿ 200 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ನೌಕರಿ : ಸೆಸ್ಕಾಂ (Chamundeshwari Electricity Supply Company Limited – CESCOM) ನಲ್ಲಿ ಖಾಲಿ ಇರುವ 200 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಒಂದು Golden opportunity ಸಿಕ್ಕಿದೆ. ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.

ಸೆಸ್ಕಾಂ (CESCOM Recruitment 2026) ವತಿಯಿಂದ ವಿವಿಧ ವಿಭಾಗಗಳಲ್ಲಿ ಒಟ್ಟು 200 ಅಪ್ರೆಂಟಿಸ್‌ (Apprentice) ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮೈಸೂರು (Mysuru) ಉದ್ಯೋಗ ಸ್ಥಳವಾಗಿದ್ದು, ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆಗಳ ವಿವರ :

ಸೆಸ್ಕಾಂ ಅಧಿಸೂಚನೆಯ ಪ್ರಕಾರ ಕೆಳಕಂಡ ಹುದ್ದೆಗಳು ಭರ್ತಿಯಾಗಲಿವೆ:

  • ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ (Engineering Graduate Apprentice) – 80 ಹುದ್ದೆಗಳು.
  • ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್‌ (Technician Diploma Apprentice) – 55 ಹುದ್ದೆಗಳು.
  • ಎಂಜಿನಿಯರಿಂಗ್ ಅಲ್ಲದ ಪದವೀಧರ ಅಪ್ರೆಂಟಿಸ್‌ (Non-Engineering Graduate Apprentice) – 65 ಹುದ್ದೆಗಳು.

ಒಟ್ಟು 200 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ ಏನು?

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕೆಳಗಿನ ಯಾವುದೇ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು:

  • ಬಿಎ (BA),
  • ಬಿ.ಎಸ್‌ಸಿ (B.Sc),
  • ಬಿ.ಕಾಂ (B.Com),
  • ಬಿಬಿಎ (BBA),
  • ಬಿಸಿಎ (BCA),
  • ಬಿಬಿಎಂ (BBM),
  • ಬಿಇ / ಬಿ.ಟೆಕ್ (BE/B.Tech),
  • ಡಿಪ್ಲೊಮಾ (Diploma) ಹಾಗೂ ಸಂಬಂಧಿತ ವಿಭಾಗದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

ವಯೋಮಿತಿ ಮತ್ತು ಸಂಬಳ :

  • ಸೆಸ್ಕಾಂ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.10,900 ರಿಂದ ರೂ.12,300ರವರೆಗೆ ಸ್ಟೈಫಂಡ್‌ (Stipend) ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಆಯ್ಕೆ ವಿಧಾನ ಹೇಗೆ?

  • ಅಭ್ಯರ್ಥಿಗಳ ಆಯ್ಕೆ ಅರ್ಹತಾ ಪಟ್ಟಿ (Merit List) ಆಧಾರದ ಮೇಲೆ ನಡೆಯಲಿದೆ.
  • ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಸುವ ವಿಧಾನ :

ಅಭ್ಯರ್ಥಿಗಳು ಸೆಸ್ಕಾಂ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಒಳಿತು.

ಇದನ್ನು ಓದಿ : UBI ದಲ್ಲಿ ಅಪ್ರೆಂಟಿಸ್ ನೇಮಕಾತಿ: 1865 ಹುದ್ದೆಗಳಿಗೆ ಭರ್ತಿ.

ಅರ್ಜಿ ಸಲ್ಲಿಸುವ ಹಂತಗಳು:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ನೇಮಕಾತಿ ಅಧಿಸೂಚನೆ (Notification) ಡೌನ್‌ಲೋಡ್ ಮಾಡಿ.
  3. ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ.
  4. ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
  5. ಫೋಟೋ ಮತ್ತು ಸಹಿ ಅಪ್‌ಲೋಡ್ (Upload) ಮಾಡಿ.
  6. ಅರ್ಜಿ ಪರಿಶೀಲಿಸಿ ಸಲ್ಲಿಸಿ.
  7. ಭವಿಷ್ಯ ಬಳಕೆಗೆ ಅರ್ಜಿಯ ಪ್ರಿಂಟ್‌ಔಟ್ (Printout) ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು :

  • ಅರ್ಜಿ ಆರಂಭ ದಿನಾಂಕ: 08 ಮೇ 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಮೇ 2026.

CESCOM ಪ್ರಮುಖ ಲಿಂಕ್‌ಗಳು :

  • * ಅಧಿಕೃತ ವೆಬ್‌ಸೈಟ್: cescmysore.karnataka.gov.in
  • * ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆ ಲಿಂಕ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೆಸ್ಕಾಂ ನೇಮಕಾತಿ ಪ್ರಕ್ರಿಯೆ ಮೂಲಕ ಕರ್ನಾಟಕದ ಯುವಕರಿಗೆ ಉತ್ತಮ ವೃತ್ತಿ ಅವಕಾಶ ಸಿಗಲಿದ್ದು, ಸರ್ಕಾರಿ ಕ್ಷೇತ್ರದಲ್ಲಿ ಅನುಭವ ಪಡೆಯಲು ಇದು ಸಹಾಯಕವಾಗಲಿದೆ.


Disclaimer: ಈ ಸುದ್ದಿಯಲ್ಲಿ ನೀಡಿರುವ ನೇಮಕಾತಿ ಮಾಹಿತಿ ಅಧಿಕೃತ ಅಧಿಸೂಚನೆಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು CESCOM ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನವೀಕೃತ ಮಾಹಿತಿ ಹಾಗೂ ಅಧಿಸೂಚನೆಯನ್ನು ಪರಿಶೀಲಿಸುವುದು ಕಡ್ಡಾಯ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top