ಇಂದಿನ ರಾಶಿ ಭವಿಷ್ಯ : ಇಂದಿನ ದಿನವು (ಮೇ 01, 2026 ) ದ್ವಾದಶ ರಾಶಿಗಳಿಗೂ ವಿಭಿನ್ನ ಅನುಭವಗಳನ್ನು ನೀಡುವ ಸಾಧ್ಯತೆ ಇದೆ. ಕುಟುಂಬ, ಉದ್ಯೋಗ, ವ್ಯವಹಾರ ಹಾಗೂ ಆರ್ಥಿಕ ಸ್ಥಿತಿಗಳಲ್ಲಿ ಏರುಪೇರುಗಳು ಕಾಣಿಸಬಹುದು.
ಹಾಗಾದರೆ ಯಾವ ರಾಶಿಗೆ ಏನು ಫಲ ಎಂಬುದನ್ನು ವಿವರವಾಗಿ ಇಂದಿನ ರಾಶಿ ಭವಿಷ್ಯದಲ್ಲಿ ತಿಳಿಯೋಣ.
ಇಂದಿನ ರಾಶಿ ಭವಿಷ್ಯ (Today Horoscope) :
ಮೇಷ ರಾಶಿ (Aries):
ಸಿರಿಧಾನ್ಯ ವ್ಯಾಪಾರಿಗಳಿಗೆ ಉತ್ತಮ ಲಾಭದ ಸೂಚನೆ ಇದೆ. ಪತ್ನಿಯ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಪ್ರಗತಿ ಕಂಡು ಆರ್ಥಿಕ ಚೇತರಿಕೆ ಉಂಟಾಗುತ್ತದೆ. ಹಳೆಯ ಸಾಲಗಳನ್ನು ತೀರಿಸುವ ಹಂತಕ್ಕೆ ಬರುತ್ತೀರಿ. ಹುಟ್ಟೂರಿನಲ್ಲಿ ಮನೆ ನಿರ್ಮಾಣದ ಬಗ್ಗೆ ಯೋಚನೆ ಮಾಡುತ್ತೀರಿ.
ವೃಷಭ ರಾಶಿ (Taurus) :
ವಾಟರ್ ಸಪ್ಲೈ ಮತ್ತು ಹಾಲು ಉತ್ಪಾದಕರಿಗೆ ಲಾಭದಾಯಕ ದಿನ. ಆದರೆ ಟ್ರಾನ್ಸ್ಪೋರ್ಟ್ ಕ್ಷೇತ್ರದವರಿಗೆ ನಷ್ಟ ಸಂಭವಿಸಬಹುದು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೊಸ ಯೋಜನೆಗಳಿಗೆ ಚಾಲನೆ ಸಿಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಅಭಿವೃದ್ಧಿ ಕಾಣಬಹುದು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ನಿವಾರಣೆಯಾಗುತ್ತವೆ. ಶತ್ರುಗಳು ಶಾಂತವಾಗುವ ಕಾಲ.
ಮಿಥುನ ರಾಶಿ (Gemini) :
ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ವಸ್ತ್ರ ವಿನ್ಯಾಸಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಕಾನೂನು ಸಂಬಂಧಿತ ವಿಚಾರಗಳಲ್ಲಿ ಜಯ ಸಿಗುತ್ತದೆ. ಆದರೆ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಕೆಲವು ಅಡಚಣೆಗಳು ಎದುರಾಗಬಹುದು. ಸಾಲದ ವಿಷಯದಲ್ಲಿ ಬಂಧುಗಳು ಸಹಕಾರ ನೀಡುತ್ತಾರೆ.
ಕಟಕ ರಾಶಿ (Cancer) :
ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಕಾಣದಿರಬಹುದು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಚೇತರಿಕೆ ಸಿಗುತ್ತದೆ. ಪರಿಶ್ರಮದ ನಂತರ ಅದೃಷ್ಟ ಒಲಿಯುತ್ತದೆ. ಹಣಕಾಸಿನ ಒತ್ತಡದಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನಿಮ್ಮನ್ನು ಪ್ರೀತಿಸುವವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ಸಿಂಹ ರಾಶಿ (Leo) :
ಕಣ್ಣು ಸಂಬಂಧಿತ ಸಮಸ್ಯೆಗಳು ಕಾಡಬಹುದು. ವಿದೇಶ ಪ್ರವಾಸ ಯಶಸ್ವಿಯಾಗುತ್ತದೆ. ಉದ್ಯೋಗದಲ್ಲಿ ಒತ್ತಡದಿಂದ ಬದಲಾವಣೆಯ ಆಲೋಚನೆ ಬರಬಹುದು. ವ್ಯವಹಾರದಲ್ಲಿ ಏರುಪೇರು ಸಾಧ್ಯತೆ ಇದೆ. ಅಕಸ್ಮಿಕ ಸುದ್ದಿಯಿಂದ ಪ್ರಯಾಣ ಮಾಡಬೇಕಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ. ದಾಂಪತ್ಯದಲ್ಲಿ ತೃಪ್ತಿ ಇದ್ದರೂ ಸಣ್ಣ ಅಸಮಾಧಾನ ಇರಬಹುದು.
ಕನ್ಯಾ ರಾಶಿ (Virgo) :
ದಿನಸಿ ವ್ಯಾಪಾರಿಗಳಿಗೆ ಲಾಭ. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲೂ ಆರ್ಥಿಕ ಲಾಭ ಸಿಗುತ್ತದೆ. ಆಸ್ತಿ ದಾಖಲೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಬೇನಾಮಿ ಆಸ್ತಿಗಳಲ್ಲಿ ತೊಂದರೆ ಸಂಭವಿಸಬಹುದು. ಮಾತಿನಲ್ಲಿ ನಿಯಂತ್ರಣ ಇರಲಿ. ಆರೋಗ್ಯದಲ್ಲಿ ವಿಶೇಷವಾಗಿ ಹೊಟ್ಟೆ ಸಮಸ್ಯೆಗಳು ಕಾಡಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಅಡಚಣೆಗಳು ಎದುರಾಗಬಹುದು.
ತುಲಾ ರಾಶಿ (Libra) :
ಸ್ಥಿರಾಸ್ತಿ ಮಾರಾಟದ ಅವಕಾಶಗಳು ಲಭಿಸಬಹುದು. ಸಂಗಾತಿಯಿಂದ ಉತ್ತಮ ಸಲಹೆ ಸಿಗುತ್ತದೆ. ಕುಟುಂಬದಲ್ಲಿ ಶಾಂತಿ ವಾತಾವರಣ ಇರುತ್ತದೆ. ಸಮಾಜ ಸೇವೆಯಲ್ಲಿ ಭಾಗವಹಿಸುವಿರಿ. ರಾಜಕೀಯ ಕ್ಷೇತ್ರದವರಿಗೆ ಕೆಲವು ಚರ್ಚೆಗಳು ನಡೆಯಬಹುದು. ಸಂಘಟನೆಗಳಲ್ಲಿ ನಾಯಕತ್ವದ ಅವಕಾಶ ಸಿಗುತ್ತದೆ.
ವೃಶ್ಚಿಕ ರಾಶಿ (Scorpio) :
ವ್ಯಾಪಾರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಹೆಚ್ಚಾಗುತ್ತದೆ. ಕಲಾವಿದರಿಗೆ ಪ್ರಶಸ್ತಿ ಯೋಗ ಇದೆ. ಶಿಕ್ಷಕರು ಅಧಿಕಾರಿಗಳೊಂದಿಗೆ ವಿವಾದ ತಪ್ಪಿಸುವುದು ಉತ್ತಮ. ಹೊಸ ಯೋಜನೆಗಳಿಂದ ಲಾಭದ ಅವಕಾಶಗಳಿವೆ. ಕುಟುಂಬ ಮತ್ತು ಉದ್ಯೋಗದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು.
ಈ ಸುದ್ದಿನೂ ಓದಿ : ಇಂದಿನ ರಾಶಿ ಭವಿಷ್ಯ: ಏಪ್ರಿಲ್ 30, 2026 ಗುರುವಾರದ ದ್ವಾದಶ ರಾಶಿಗಳ ಫಲಗಳು.!
ಧನುಸ್ಸು ರಾಶಿ (Sagittarius) :
ಒಂದೇ ಉದ್ಯೋಗದಲ್ಲಿ ಸ್ಥಿರತೆ ಹೊಂದುವುದು ಒಳಿತು. ಬಟ್ಟೆ ಮತ್ತು ಆಟಿಕೆ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಬರಹಗಾರರಿಗೆ ಸವಾಲುಗಳು ಎದುರಾಗಬಹುದು. ಸಮಸ್ಯೆಗಳನ್ನು ನಾಜೂಕಾಗಿ ಪರಿಹರಿಸುವ ಅಗತ್ಯ ಇದೆ. ರಾಜಕೀಯ ವ್ಯಕ್ತಿಗಳು ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ಉತ್ತಮ. ಮಕ್ಕಳ ಆರೋಗ್ಯದ ಕಡೆ ಗಮನಕೊಡಿ.
ಕುಂಭ ರಾಶಿ (Aquarius) :
ಕೃಷಿಕರಿಗೆ ಉತ್ತಮ ಬೇಡಿಕೆ ಉಂಟಾಗುತ್ತದೆ. ವಿದೇಶದಲ್ಲಿರುವ ಬಂಧುಗಳಿಂದ ಶುಭ ಸುದ್ದಿ ಸಿಗುತ್ತದೆ. ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಮನರಂಜನೆಗಾಗಿ ಮಾಡಿದ ಖರ್ಚುಗಳಿಂದ ನಷ್ಟ ಸಂಭವಿಸಬಹುದು. ಹಳೆಯ ಸಂಗ್ರಹಿತ ಹಣ ಸಂಕಷ್ಟದಲ್ಲಿ ಸಹಾಯವಾಗುತ್ತದೆ. ದಾಖಲೆಗಳಿಗೆ ಸಹಿ ಮಾಡುವಾಗ ಜಾಗ್ರತೆ ಅಗತ್ಯ.
ಮಕರ ರಾಶಿ (Capricorn) :
ಎಣ್ಣೆ ಉತ್ಪಾದನೆ ಅಥವಾ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ಸಿಗುತ್ತದೆ. ದಾನ ಧರ್ಮಗಳಲ್ಲಿ ಭಾಗವಹಿಸುವಿರಿ. ಇತರರ ಸಮಸ್ಯೆಗಳಲ್ಲಿ ತೊಡಗಿ ನಿಮ್ಮದೇ ಸಮಸ್ಯೆಗಳನ್ನು ಹೆಚ್ಚಿಸಿಕೊಳ್ಳಬೇಡಿ. ಸಂಗಾತಿಯ ಪ್ರೀತಿ ಮತ್ತು ಬೆಂಬಲವನ್ನು ಮರೆಯಬೇಡಿ. ಕುಟುಂಬದ ಕೆಲಸಗಳನ್ನು ನೀವು ಯಶಸ್ವಿಯಾಗಿ ನಿರ್ವಹಿಸುತ್ತೀರಿ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೀನ ರಾಶಿ (Pisces) :
ಸ್ಥಿರ ಉದ್ಯೋಗದಲ್ಲಿ ಉಳಿಯಲು ಕಷ್ಟವಾಗಬಹುದು. ಅಡುಗೆ ಎಣ್ಣೆ ಉತ್ಪಾದನೆ ಅಥವಾ ಸಂಬಂಧಿತ ಉದ್ಯಮ ಪ್ರಾರಂಭಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಸಿಮೆಂಟ್ ಮತ್ತು ಮರಳು ವ್ಯಾಪಾರಿಗಳಿಗೆ ಲಾಭ. ಧಾನ್ಯ ವ್ಯಾಪಾರಿಗಳಿಗೆ ಚೇತರಿಕೆ. ಪತ್ನಿಯ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ಮಕ್ಕಳ ಬಗ್ಗೆ ಹೆಚ್ಚಿನ ಗಮನಕೊಡಿ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಷ್ಟ ಸಂಭವಿಸಬಹುದು.
Disclaimer: ಇಂದಿನ ರಾಶಿ ಭವಿಷ್ಯ (Horoscope) ಸಾಮಾನ್ಯ ಜ್ಯೋತಿಷ್ಯ ಲೆಕ್ಕಾಚಾರಗಳ ಆಧಾರದ ಮೇಲೆ ನೀಡಲಾಗಿದೆ. ವೈಯಕ್ತಿಕ ಫಲಿತಾಂಶಗಳು ಬದಲಾಗುವ ಸಾಧ್ಯತೆ ಇದೆ. ಇಲ್ಲಿರುವ ಇಂದಿನ ರಾಶಿ ಭವಿಷ್ಯ ಅಂತಿಮ ನಿರ್ಧಾರಕ್ಕೆ ಆಧಾರವಾಗಿ ಪರಿಗಣಿಸಬಾರದು.


