ಉದ್ಯೋಗ ಮಾಹಿತಿ : ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್. ಆರ್ಥಿಕ ಇಲಾಖೆಯಿಂದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್:
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಕರ್ನಾಟಕ ಸರ್ಕಾರದಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ (VAO – Village Administrative Officer) ಹುದ್ದೆಗಳ ಭರ್ತಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಒಟ್ಟು 572 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆ ಅಧಿಕೃತ ಅನುಮೋದನೆ ನೀಡಿದೆ.
ಮಾಹಿತಿ ಪ್ರಕಾರ, ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕ ಕೂಡಲೇ ಕಂದಾಯ ಇಲಾಖೆ (Revenue Department Karnataka) ಕೂಡ ತ್ವರಿತ ಕ್ರಮ ಕೈಗೊಂಡಿದೆ. ಸಂಬಂಧಪಟ್ಟ 22 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದೆ.
ಯಾವ ಜಿಲ್ಲೆಗಳಲ್ಲಿ ನೇಮಕಾತಿ :
ಈ ಕ್ರೈಂ ಸುದ್ದಿ ಓದಿ : ಚಿಕ್ಕೋಡಿ : ಮಕ್ಕಳೊಂದಿಗೆ ನೀಚ ಕೃತ್ಯ ತೋರಿದ ಆರೋಪ; ಕನ್ನಡ ಶಿಕ್ಷಕನ ಅಮಾನತಿಗೆ ಡಿಡಿಪಿಐ ಆದೇಶ.
ಬೆಂಗಳೂರು ವಿಭಾಗ :
ರಾಜ್ಯದ ನಾಲ್ಕು ವಿಭಾಗಗಳಡಿ 22 ಜಿಲ್ಲೆಗಳಲ್ಲಿ ಈ ನೇಮಕಾತಿ ನಡೆಯಲಿದೆ. ಬೆಂಗಳೂರು ವಿಭಾಗದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳು ಸೇರಿವೆ.
ಮೈಸೂರು ವಿಭಾಗ :
ಮೈಸೂರು ವಿಭಾಗದಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, Dakshina Kannada ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಒಳಗೊಂಡಿವೆ.
ಬೆಳಗಾವಿ ವಿಭಾಗ :
ಬೆಳಗಾವಿ ವಿಭಾಗದಲ್ಲಿ ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳು ಹಾಗೂ ಕಲಬುರಗಿ ವಿಭಾಗದಲ್ಲಿ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗಲಿವೆ.
ಕಲಬುರಗಿ ವಿಭಾಗ:
ಇನ್ನು ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಯಲಿದೆ.
ಪರಿಷ್ಕೃತ ಮೀಸಲಾತಿ ನಿಯಮ ಅನ್ವಯ :
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಷ್ಕೃತ ರೋಸ್ಟರ್ ಬಿಂದು ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ಜಿಲ್ಲಾಧಿಕಾರಿಗಳು ಹುದ್ದೆಗಳ ಅಂತಿಮ ವಿವರಗಳನ್ನು ಸರ್ಕಾರಕ್ಕೆ ಕಳುಹಿಸಬೇಕಾಗಿದೆ.
ಇದನ್ನು ಓದಿ : ಆದಾಯ ತೆರಿಗೆ ಇಲಾಖೆಯಲ್ಲಿ ಹೊಸ ನೇಮಕಾತಿ; 10ನೇ,12ನೇ ಮತ್ತು ಪದವೀಧರರಿಗೆ ಅವಕಾಶ.
22 ಜಿಲ್ಲೆಗಳಲ್ಲಿ ನಡೆಯಲಿದೆ ನೇಮಕಾತಿ :
ಈ ನೇಮಕಾತಿ ಪ್ರಕ್ರಿಯೆ ರಾಜ್ಯದ ವಿವಿಧ ಭಾಗಗಳ 22 ಜಿಲ್ಲೆಗಳಲ್ಲಿ ನಡೆಯಲಿದೆ. ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಕೂಡ ಹೊರಬಿದ್ದಿದೆ.
ಜಿಲ್ಲಾವಾರುVAO ಹುದ್ದೆಗಳ ಸಂಪೂರ್ಣ ವಿವರ :
ಬೆಂಗಳೂರು ನಗರ – 20 ಹುದ್ದೆಗಳು.
ಬೆಂಗಳೂರು ಗ್ರಾಮಾಂತರ – 29 ಹುದ್ದೆಗಳು.
ಚಿತ್ರದುರ್ಗ – 15 ಹುದ್ದೆಗಳು.
ಚಿಕ್ಕಬಳ್ಳಾಪುರ – 21 ಹುದ್ದೆಗಳು.
ತುಮಕೂರು – 50 ಹುದ್ದೆಗಳು.
ಶಿವಮೊಗ್ಗ – 18 ಹುದ್ದೆಗಳು.
ಕೋಲಾರ – 22 ಹುದ್ದೆಗಳು.
ರಾಮನಗರ (ಬೆಂಗಳೂರು ದಕ್ಷಿಣ) – 30 ಹುದ್ದೆಗಳು.
ಮೈಸೂರು – 45 ಹುದ್ದೆಗಳು.
ಮಂಡ್ಯ – 50 ಹುದ್ದೆಗಳು.
ಹಾಸನ – 35 ಹುದ್ದೆಗಳು.
ಉಡುಪಿ – 10 ಹುದ್ದೆಗಳು.
ದಕ್ಷಿಣ ಕನ್ನಡ – 37 ಹುದ್ದೆಗಳು.
ಚಾಮರಾಜನಗರ – 31 ಹುದ್ದೆಗಳು.
ಚಿಕ್ಕಮಗಳೂರು – 10 ಹುದ್ದೆಗಳು.
ಬೆಳಗಾವಿ – 48 ಹುದ್ದೆಗಳು.
ಬಾಗಲಕೋಟೆ – 16 ಹುದ್ದೆಗಳು.
ಗದಗ – 14 ಹುದ್ದೆಗಳು.
ಹಾವೇರಿ – 15 ಹುದ್ದೆಗಳು.
ಕಲಬುರಗಿ – 35 ಹುದ್ದೆಗಳು.
ಬೀದರ್ – 16 ಹುದ್ದೆಗಳು.
ರಾಯಚೂರು – 5 ಹುದ್ದೆಗಳು.
ಈ ಸುದ್ದಿಯನ್ನು ಓದಿ : ಗ್ಯಾಸ್ಟ್ರಿಕ್ ಸಮಸ್ಯೆ ಪದೇಪದೇ ಕಾಡುತ್ತಿದೆಯಾ? ಪ್ರತಿದಿನದ ಈ ಸಣ್ಣ ಅಭ್ಯಾಸದಿಂದ ಮುಕ್ತಿ.
ಒಟ್ಟು ನೇಮಕಾತಿಗೆ ಪರಿಗಣಿಸಿರುವ ಹುದ್ದೆಗಳು – 572
ಶೀಘ್ರದಲ್ಲೇ ಅಧಿಸೂಚನೆ :
ಸದ್ಯ ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ನೇಮಕಾತಿ ಪ್ರಕ್ರಿಯೆಗೆ ಇದ್ದ ಪ್ರಮುಖ ಅಡ್ಡಿ ದೂರವಾಗಿದ್ದು, ಮುಂದಿನ ಹಂತದಲ್ಲಿ ಅರ್ಜಿ ಸಲ್ಲಿಕೆ ದಿನಾಂಕ, ವಿದ್ಯಾರ್ಹತೆ, ವಯೋಮಿತಿ ಹಾಗೂ ಪರೀಕ್ಷಾ ವಿಧಾನ ಕುರಿತ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.
ಉದ್ಯೋಗಾಕಾಂಕ್ಷಿಗಳು ಬಹಳ ದಿನಗಳಿಂದ ಕಾಯುತ್ತಿದ್ದ VAO ನೇಮಕಾತಿ ಇದೀಗ ವಾಸ್ತವಕ್ಕೆ ಬರಲಿದ್ದು, ಇದು ರಾಜ್ಯದ ಯುವಕ – ಯುವತಿಯರಿಗೆ ದೊಡ್ಡ ಅವಕಾಶವಾಗಿ ಪರಿಣಮಿಸಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







