ಕುಕ್ಕರ್ ಬಳಸುವವರೇ ಎಚ್ಚರ! ಅಡುಗೆ ಮಾಡುತ್ತಿದ್ದಾಗಲೇ ಸ್ಫೋಟಗೊಂಡ ಕುಕ್ಕರ್; ವೈರಲ್ ಆಯ್ತು ವಿಡಿಯೋ.

ಅಡುಗೆ ಮಾಡುತ್ತಿದ್ದಾಗಲೇ ಸ್ಫೋಟಗೊಂಡ ಕುಕ್ಕರ್

ಡೆಸ್ಕ್ : ಕುಕ್ಕರ್ ಬಳಸುವವರೇ ಎಚ್ಚರ! ಮಹಿಳೆಯೋರ್ವರು ಅಡುಗೆ ಮಾಡುತ್ತಿದ್ದಾಗಲೇ ಏಕಾಏಕಿ ಪ್ರೆಶರ್ ಕುಕ್ಕರ್ ಸ್ಫೋಟಗೊಂಡಿದ್ದು, ಅಡುಗೆಗೆ ಬಳಸುವ ಪಾತ್ರೆಗಳ ಬಗ್ಗೆ ಮತ್ತೋಮ್ಮೆ ಚರ್ಚಿಸುವಂತೆ ಮಾಡಿದೆ. ಸದ್ಯ ಪ್ರೆಶರ್ ಕುಕ್ಕರ್ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮಹಿಳೆಯರಲ್ಲಿ ಆತಂಕ ಮೂಡಿಸಿದೆ.

ಅಡುಗೆಮನೆಯಲ್ಲಿ ಸಣ್ಣ ನಿರ್ಲಕ್ಷ್ಯವೂ ಸಹ ಕೆಲವೊಮ್ಮೆ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಪ್ರೆಶರ್ ಕುಕ್ಕರ್ ಸ್ಪೋಟದ ಘಟನೆಯೇ ಸಾಕ್ಷಿಯಾಗಿದೆ.

ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ಸಮಯದಲ್ಲೇ ಪ್ರೆಶರ್ ಕುಕ್ಕರ್ ಏಕಾಏಕಿ ಭೀಕರವಾಗಿ ಸ್ಫೋಟಗೊಂಡಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್‌ ವಿಡಿಯೋ ನೋಡಿದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Courtesy :Social Media / Twitter  

ಏನಿದೆ ವಿಡಿಯೋದಲ್ಲಿ?

ವೈರಲ್ ಆಗಿರುವ ದೃಶ್ಯದಲ್ಲಿ ಆರಂಭದಲ್ಲಿ ಎಲ್ಲವೂ ಸಾಮಾನ್ಯವಾದ ಅಡುಗೆ ಮನೆ ಕಾಣಿಸುತ್ತದೆ. ಅಲ್ಲಿ ಒಲೆಯ ಮೇಲೆ ಪ್ರೆಶರ್ ಕುಕ್ಕರ್ ಇಟ್ಟು, ಮಹಿಳೆಯೊರ್ವರು ಅಲ್ಲೆ ಯಾವುದೋ ಕೆಲಸ ಮಾಡುತ್ತಿರುವುದು ಕಾಣಿಸುತ್ತದೆ.

ನಂತರ ಮಹಿಳೆ ಕುಕ್ಕರ್‌ ಪಕ್ಕದಲ್ಲಿ ಖಾಲಿ ಇದ್ದ ಮತ್ತೊಂದು ಗ್ಯಾಸ್ ಸ್ಟೌವ್ ಮೇಲೆ ಪಾತ್ರೆ ಇಡಲು ಮುಂದಾಗುತ್ತಾರೆ. ಆದರೆ ಅದೇ ಕ್ಷಣದಲ್ಲಿ ಏಕಾಏಕಿ ಕುಕ್ಕರ್ ಭಾರೀ ಸದ್ದು ಮಾಡುತ್ತಾ ಸ್ಫೋಟಗೊಂಡು ಒಳಗಿದ್ದ ಬಿಸಿ ಪದಾರ್ಥಗಳು ಮಹಿಳೆಯ ಮೇಲೆಯೇ ಬೀಳುವುದು ವಿಡಿಯೋದಲ್ಲಿ ಕಾಣಿಸಿದೆ.

ಕ್ಷಣಾರ್ಧದಲ್ಲಿ ಅಡುಗೆಮನೆಯಲ್ಲಾ ಹೊಗೆ :

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಅಡುಗೆಮನೆ ಕ್ಷಣಾರ್ಧದಲ್ಲಿ ದಟ್ಟವಾದ ಹೊಗೆಯಿಂದ ಆವರಿಸಿಕೊಂಡಿದೆ. ಸ್ಫೋಟದ ತೀವ್ರತೆ ನೋಡಿದರೆ ಮಹಿಳೆಯ ಮುಖ ಮತ್ತು ಇತರ ಭಾಗಗಳಿಗೆ ಗಾಯಗಳಾಗಿರುವ ಸಾಧ್ಯತೆ ಇದೆ. ಆದರೆ ಸದ್ಯ ಮಹಿಳೆಯ ಆರೋಗ್ಯ ಸ್ಥಿತಿಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿಯನ್ನು ಓದಿ : ಸರ್ಕಾರಿ ಬಸ್-ಟಿಪ್ಪರ್ ಮುಖಾಮುಖಿ ಡಿಕ್ಕಿ; ಮೂವರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅನೇಕರು ಅಡುಗೆಮನೆಯ ಸುರಕ್ಷತೆ ಕುರಿತು ಚರ್ಚೆ ಆರಂಭಿಸಿದ್ದಾರೆ.

ಕುಕ್ಕರ್ ಸ್ಫೋಟಕ್ಕೆ ಕಾರಣವೇನು?

ತಜ್ಞರ ಅಭಿಪ್ರಾಯದಂತೆ,

  • ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ಅಥವಾ ಸುರಕ್ಷತಾ ಪ್ರಮಾಣಪತ್ರವಿಲ್ಲದ ಕುಕ್ಕರ್ ಬಳಸುವುದು ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಬಹುದು.
  • ಕೆಲವರು ಕುಕ್ಕರ್ ಹಳೆಯದಾದ ನಂತರ ಅದರ ಗ್ಯಾಸ್ಕೆಟ್, ಸೇಫ್ಟಿ ವಾಲ್ವ್ ಮತ್ತು ವಿಸಿಲ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಕ್ಷಿಸದೇ ನಿರ್ಲಕ್ಷಿಸುವುದೂ ಕೂಡಾ ಅಪಾಯ ಹೆಚ್ಚಿಸುತ್ತದೆ.
  • ಕುಕ್ಕರ್‌ ಒಳಗಿನ ಒತ್ತಡ ಸರಿಯಾಗಿ ಹೊರಹೋಗದಿದ್ದರೆ ಕುಕ್ಕರ್ ಒಳಗೆ ಪ್ರೆಶರ್ ಹೆಚ್ಚಾಗಿ ಸ್ಫೋಟ ಸಂಭವಿಸುವ ಸಾಧ್ಯತೆ ಹೆಚ್ಚು.

ಈ ಮುನ್ನೆಚ್ಚರಿಕೆ ಕಡ್ಡಾಯವಾಗಲಿ :

  • ಅಡುಗೆ ಮಾಡುವಾಗ ಯಾವಾಗಲೂ ಗುಣಮಟ್ಟದ ಮತ್ತು ಸುರಕ್ಷತಾ ಮಾನದಂಡ ಹೊಂದಿರುವ ಪಾತ್ರೆಗಳನ್ನೇ ಬಳಸಬೇಕು.
  • ಕುಕ್ಕರ್‌ನ ವಿಸಿಲ್, ಗ್ಯಾಸ್ಕೆಟ್ ಹಾಗೂ ಸೇಫ್ಟಿ ವಾಲ್ವ್ ಸರಿಯಾಗಿದೆಯೇ ಎಂದು ನಿಯಮಿತವಾಗಿ ಪರಿಶೀಲಿಸಬೇಕು.
  • ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಸರಿಯಾದ ಸ್ಥಾನದಲ್ಲಿ ಇರಬೇಕು.

ಇದನ್ನು ಓದಿ : ಬ್ಯಾಗ್ ಕದಿಯಲು ಬಂದ ಖದೀಮರಿಗೆ ಶಾಕ್ ಕೊಟ್ಟ ಮಹಿಳೆ; ವಿಡಿಯೋ ವೈರಲ್.

ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

ಏಕಾಏಕಿ ಕುಕ್ಕರ್ ಸ್ಫೋಟಗೊಂಡರೆ ಏನು ಮಾಡಬೇಕು?

  • ಪ್ರೆಶರ್ ಕುಕ್ಕರ್ ಸ್ಫೋಟಗೊಂಡ ತಕ್ಷಣ ಯಾವುದೇ ಗಾಬರಿ ಪಡದೇ ಮೊದಲು ಗ್ಯಾಸ್ ಸ್ಟೌವ್ ಅನ್ನು ತಕ್ಷಣ ಆಫ್ ಮಾಡಬೇಕು.
  • ಬಿಸಿ ಆವಿ ಅಥವಾ ಆಹಾರ ಪದಾರ್ಥಗಳಿಂದ ಸುಟ್ಟ ಗಾಯಗಳಾಗಿದ್ದರೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಬೇಕು.
  • ಗಾಯ ಗಂಭೀರವಾಗಿದ್ದರೆ ಮನೆಮದ್ದುಗಳ ಮೇಲೆ ಅವಲಂಬಿಸದೆ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಗತ್ಯ.

ಅಡುಗೆ ಮಾಡುವ ಮೊದಲು ಕುಕ್ಕರ್‌ನ ವಿಸಿಲ್, ಗ್ಯಾಸ್ಕೆಟ್ ಮತ್ತು ಸೇಫ್ಟಿ ವಾಲ್ವ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸುವುದು ಇಂತಹ ಅಪಾಯಗಳನ್ನು ತಪ್ಪಿಸಲು ಸಹಕಾರಿ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಪ್ರೆಶರ್  ಕುಕ್ಕರ್‌ ಲೇಖನವು ಸಾರ್ವಜನಿಕವಾಗಿ ಹರಿದಾಡುತ್ತಿರುವ ಮಾಹಿತಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಸಿದ್ಧಪಡಿಸಲಾಗಿದೆ. ಸುರಕ್ಷತೆ ಸಂಬಂಧಿತ ವಿಷಯಗಳಲ್ಲಿ ತಜ್ಞರ ಸಲಹೆ ಮತ್ತು ಪ್ರಮಾಣಿತ ಉಪಕರಣಗಳ ಬಳಕೆ ಅತ್ಯಗತ್ಯ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top