ನೌಕರಿ ಮಾಹಿತಿ : ಯಾರೆಲ್ಲಾ ಕೇಂದ್ರ ಸರ್ಕಾರಿ ಪಡೆಯಬೇಕು ಅಂತ ದಾರಿ ಕಾಯುತ್ತಿರುವಿರೋ ಅಂತಹ ಯುವಕರಿಗೆ ಇಲ್ಲಿದೆ ಒಂದು ಭರ್ಜರಿ ಸುವರ್ಣಾವಕಾಶ.! ಮಿಸ್ ಮಾಡದೇ Staff Selection Commission – SSC ನಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಕೇಂದ್ರ ಸರ್ಕಾರಿ ಉದ್ಯೋಗ (Central Government Job) ಕನಸು ಕಾಣುತ್ತಿರುವ ಪದವೀಧರ ಯುವಕರಿಗೆ (Degree Holders) ಭರ್ಜರಿ ಅವಕಾಶ ಲಭ್ಯವಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission – SSC) ಇದೀಗ SSC CGL 2026 ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ದೇಶದ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿನ ಒಟ್ಟು 12,256 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವಿಶೇಷವಾಗಿ ಅಂಚೆ ಇಲಾಖೆ (Postal Department) ಹುದ್ದೆಗಳಿಗೆ ಉತ್ತರ ಕರ್ನಾಟಕದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವಂತೆ ಧಾರವಾಡ ವಿಭಾಗದ ಅಂಚೆ ಇಲಾಖೆ ಮನವಿ ಮಾಡಿದೆ.
ಧಾರವಾಡ, ಬೆಳಗಾವಿ, ವಿಜಯಪುರ, ಗದಗ, ಕೊಪ್ಪಳ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆ ಕರೆ ನೀಡಿದೆ.
ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ?
SSC CGL 2026 ಮೂಲಕ ಗ್ರೂಪ್ ‘ಬಿ’ (Group-B) ಹಾಗೂ ಗ್ರೂಪ್ ‘ಸಿ’ (Group-C) ವರ್ಗದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅದರಲ್ಲೂ ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ (Postal Assistant), ಸಾರ್ಟಿಂಗ್ ಅಸಿಸ್ಟೆಂಟ್ (Sorting Assistant) ಹಾಗೂ ಇನ್ಸ್‌ಪೆಕ್ಟರ್ ಪೋಸ್ಟ್ಸ್ (Inspector Posts) ಹುದ್ದೆಗಳು ಹೆಚ್ಚು ಆಕರ್ಷಣೆ ಪಡೆದುಕೊಂಡಿವೆ.
ಮುಖ ಹುದ್ದೆಗಳು & ಸಂಬಳ ವಿವರ :
ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ (PA/SA).
- ಆರಂಭಿಕ ವೇತನ ಸುಮಾರು ₹38,000 ರಿಂದ ₹45,000 ವರೆಗೆ ಲಭ್ಯವಾಗಲಿದೆ.
- ಈ ಹುದ್ದೆಗಳು ಲೆವೆಲ್-4 (Level-4 Pay Matrix) ಅಡಿಯಲ್ಲಿ ಬರುತ್ತವೆ.
ಇನ್ಸ್‌ಪೆಕ್ಟರ್ ಪೋಸ್ಟ್ಸ್ (Inspector Posts) :
- ಈ ಹುದ್ದೆಗಳಿಗೆ ಆರಂಭಿಕ ಸಂಬಳ ₹55,000 ರಿಂದ ₹70,000ಕ್ಕೂ ಹೆಚ್ಚು ಇರಲಿದೆ.
- ಜೊತೆಗೆ ಡಿಎ (DA), ಎಚ್‌ಆರ್‌ಎ (HRA), ಆರೋಗ್ಯ ಸೌಲಭ್ಯಗಳು, ಪೆನ್ಷನ್ (NPS) ಹಾಗೂ ವಸತಿ ಸೌಲಭ್ಯಗಳು ದೊರೆಯಲಿವೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್ ಆಗಿರಬೇಕು.
Note : ಅಂತಿಮ ವರ್ಷದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಆದರೆ 2026ರ ಆಗಸ್ಟ್ 1ರೊಳಗೆ ಪದವಿ ಫಲಿತಾಂಶ ಪ್ರಕಟವಾಗಿರಬೇಕು.
ವಯೋಮಿತಿ :
- ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್: 18 ರಿಂದ 27 ವರ್ಷ
- ಇನ್ಸ್‌ಪೆಕ್ಟರ್ ಹುದ್ದೆ: 18 ರಿಂದ 30 ವರ್ಷ.
Note : OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ (Age Relaxation) ನೀಡಲಾಗಿದೆ.
ಇದನ್ನು ಓದಿ : KEA Recruitment 2026: ಖಾಲಿ ಇರುವ SDA ಮತ್ತು FDA ಹುದ್ದೆಗಳಿಗೆ ಅರ್ಜಿ ಆಹ್ವಾನ.
ಅರ್ಜಿ ಶುಲ್ಕ :
- ಅರ್ಜಿ ಶುಲ್ಕ: ₹100
Note : ಮಹಿಳೆಯರು, SC/ST ಅಭ್ಯರ್ಥಿಗಳು, ವಿಕಲಚೇತನರು (PwD) ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ ಸಂಪೂರ್ಣ ಉಚಿತವಾಗಿದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 22, 2026.
- ಟಯರ್-1 ಪರೀಕ್ಷೆ (Tier-1 Exam): ಆಗಸ್ಟ್-ಸೆಪ್ಟೆಂಬರ್ 2026.
ಅರ್ಜಿ ಸಲ್ಲಿಸುವ ಬಗೆ :
ಅಭ್ಯರ್ಥಿಗಳು SSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಒನ್ ಟೈಮ್ ರಿಜಿಸ್ಟ್ರೇಷನ್ (OTR) ಪೂರ್ಣಗೊಳಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವೇಳೆ Post Preference ನಲ್ಲಿ ‘Postal/Inspector Posts’ ಗೆ ಮೊದಲ ಆದ್ಯತೆ ನೀಡಲು ಅಭ್ಯರ್ಥಿಗಳೇ ಯಾರು ಮರೆಯದಿರಿ.
ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಸದ್ಯ ಯಾರೆಲ್ಲ ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರೋ, ಅಂತಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಉತ್ತಮ ಸಂಬಳ (Best Salary), ಉದ್ಯೋಗ ಭದ್ರತೆ (Job Security) ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು SSC CGL 2026 ಉತ್ತಮ ಅವಕಾಶವೆಂದು ಪರಿಗಣಿಸಲಾಗಿದೆ.
Disclaimer: ಮೇಲಿನ ಮಾಹಿತಿ ಅಧಿಕೃತ ಅಧಿಸೂಚನೆ ಹಾಗೂ ಲಭ್ಯ ಮಾಹಿತಿಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳುಅಧಿಕೃತ ವೆಬ್‌ಸೈಟ್ ( SSC CGL 2026) ನಲ್ಲಿ ಪ್ರಕಟವಾಗಿರುವ ಸಂಪೂರ್ಣ ಅಧಿಸೂಚನೆಯನ್ನು ಓದಿ ದೃಢಪಡಿಸಿಕೊಳ್ಳುವುದು ಸೂಕ್ತ.





