ಡೆಸ್ಕ್ : ಕಳೆದ 8 ವರ್ಷಗಳ ಬಳಿಕ ರನ್ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಡಕ್ ಔಟ್ (ಶೂನ್ಯ ರನ್) ಆಗಿ ಅಭಿಮಾನಿಗಳಿ ಭಾರಿ ಆಘಾತವನ್ನುಂಟು ಮಾಡಿದ ಘಟನೆ ನಿನ್ನೆಯ IPL ಪಂದ್ಯದಲ್ಲಿ ನಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (Royal Challengers Bengaluru – RCB and Lucknow Super Giants – LSG) ನಡುವಿನ ರೋಚಕ ಐಪಿಎಲ್ (IPL) ಪಂದ್ಯದಲ್ಲಿ ಆರ್‌ಸಿಬಿ 9 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾಗಿರುವುದು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.
209 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲೇ ಭಾರೀ ಹಿನ್ನಡೆಯಾಯಿತು. ವಿರಾಟ್ ಕೊಹ್ಲಿ ಹಾಗೂ ಬೆತೆಲ್ ಆರಂಭದಲ್ಲೇ ಪೆವಿಲಿಯನ್ ಸೇರಿದರು. ಕೊಹ್ಲಿ ಡಕ್ ಔಟ್ ಆಗಿದ್ದು ವಿಶೇಷ ಚರ್ಚೆಗೆ ಕಾರಣವಾಗಿದೆ. ಐಪಿಎಲ್ ಇತಿಹಾಸದಲ್ಲಿ 269 ಇನಿಂಗ್ಸ್ ಆಡಿರುವ ಕೊಹ್ಲಿಗೆ ಇದು ಕೇವಲ 11ನೇ ಡಕ್ ಔಟ್ ಆಗಿದೆ.
ಬರೋಬ್ಬರಿ 8 ವರ್ಷಗಳ ಬಳಿಕ ಡಕ್ ಔಟ್ :
ಇನ್ನೂ ವಿಶೇಷವೆಂದರೆ, ರನ್ ಚೇಸಿಂಗ್ ವೇಳೆ ಕೊಹ್ಲಿ ಶೂನ್ಯಕ್ಕೆ ಔಟಾಗಿರುವುದು ಬರೋಬ್ಬರಿ 8 ವರ್ಷಗಳ ಬಳಿಕ. ಕೊನೆಯ ಬಾರಿ 2017ರ ಏಪ್ರಿಲ್ 23ರಂದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders – KKR) ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲೇ ಔಟಾಗಿದ್ದರು. ಆ ಪಂದ್ಯದಲ್ಲಿ ಆರ್‌ಸಿಬಿ ಕೇವಲ 49 ರನ್‌ಗಳಿಗೆ ಆಲೌಟ್ ಆಗಿತ್ತು.
ಈ ಸುದ್ದಿನೂ ಓದಿ : IPL: RCB ಮಾರಕ ದಾಳಿಗೆ ತತ್ತರಿಸಿದ DC 75ಕ್ಕೆ ಆಲ್‌ಔಟ್, ಭರ್ಜರಿ ಗೆಲುವು.
ಪಂದ್ಯದಲ್ಲಿ 24 ವರ್ಷದ ಯುವ ವೇಗಿ ಯಾದವ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಕೇವಲ 33 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದು ಪಂದ್ಯದ ತಿರುವು ತಂದರು. ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ನಡುವೆ ಮೂಡಿದ್ದ 95 ರನ್‌ಗಳ ಜೊತೆಯಾಟ ಮುರಿದ ಅವರು, ಅದೇ ಓವರ್‌ನಲ್ಲಿ ಜಿತೇಶ್ ಶರ್ಮಾ ವಿಕೆಟ್ ಕೂಡ ಕಬಳಿಸಿದರು.
ರಿಷಭ ಪಂತ್ (Rishabh Pant) ನೇತೃತ್ವದ ಲಖನೌ ತಂಡ ಸತತ ಆರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ಹಳಿಗೆ ಮರಳಿದ್ದು, ತಂಡದ ಅಭಿಮಾನಿಗಳಿಗೆ ಸಂತಸ ತಂದಿದೆ.
PRINCE YADAV BOWLED AN ABSOLUTE CRACKER TO GET KOHLI FOR A DUCK. 🥶 pic.twitter.com/N0xS5ZEtmJ
— Mufaddal Vohra (@mufaddal_vohra) May 7, 2026
Courtesy : Social Media / Twitter
ವಿರಾಟ್ ಕೊಹ್ಲಿ ; Indian Premier League ಸಾಧನೆಗಳು :
- 2008 – Royal Challengers Bengaluru ಪರ ಐಪಿಎಲ್‌ಗೆ ಪದಾರ್ಪಣೆ.
- 2011 – ಮೊದಲ ಐಪಿಎಲ್ ಶತಕ (100*).
- 2013 – ಆರ್‌ಸಿಬಿ ತಂಡದ ನಾಯಕತ್ವ ವಹಿಸಿದರು.
- 2016 – ಐಪಿಎಲ್ ಇತಿಹಾಸದ ಅತ್ಯುತ್ತಮ ಸೀಸನ್. (973 ರನ್, 4 ಶತಕ ಮತ್ತು ಆರೆಂಜ್ ಕ್ಯಾಪ್ ವಿಜೇತ).
- 2018 – ಐಪಿಎಲ್‌ನಲ್ಲಿ 5,000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರರಲ್ಲಿ ಒಬ್ಬರು.
- 2021 – ಆರ್‌ಸಿಬಿ ನಾಯಕ ಸ್ಥಾನ ತ್ಯಜಿಸಿದರು.
- 2023 – ಐಪಿಎಲ್‌ನಲ್ಲಿ 7,000+ ರನ್ ಸಾಧನೆ.
- 2024 – ಮತ್ತೊಮ್ಮೆ ಆರೆಂಜ್ ಕ್ಯಾಪ್ ಗೆದ್ದು ಗರಿಷ್ಠ ರನ್ ಸ್ಕೋರರ್ ಆಗಿದರು.
- 2025 – ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು.
- 2026 – ರನ್ ಚೇಸಿಂಗ್ ವೇಳೆ 8 ವರ್ಷಗಳ ಬಳಿಕ ಡಕ್ ಔಟ್ ದಾಖಲೆ ಎದುರಿಸಿದರು.
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಐಪಿಎಲ್ ದಾಖಲೆಗಳು:
- ಅತಿ ಹೆಚ್ಚು ರನ್.
- ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ (973).
- ಆರ್‌ಸಿಬಿ ಪರ ಅತಿ ಹೆಚ್ಚು ಪಂದ್ಯಗಳು.
- ಅನೇಕ ಶತಕ ಹಾಗೂ ಅರ್ಧಶತಕಗಳ ದಾಖಲೆ.
Disclaimer: ಈ ಲೇಖನವು ಕ್ರಿಕೆಟ್ ದಾಖಲೆಗಳು, ಲಭ್ಯವಿರುವ ಅಂಕಿಅಂಶಗಳು ಹಾಗೂ ಸಾರ್ವಜನಿಕ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಪಂದ್ಯಗಳ ಪ್ರಗತಿ ಮತ್ತು ಅಧಿಕೃತ ದಾಖಲೆಗಳ ಆಧಾರದಲ್ಲಿ ಅಂಕಿಅಂಶಗಳು ಕಾಲಾನುಗುಣವಾಗಿ ಬದಲಾಗಬಹುದು.



