ಹೈದರಾಬಾದ್ : ರಾತ್ರಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅರಿತುಕೊಳ್ಳಲು ಸ್ವತಃ ಮಲ್ಕಾಜ್ಗಿರಿ ವಿಭಾಗದ DCP ಸುಮತಿ ಅವರೆ ಹೈದರಾಬಾದ್ (Hyderabad) ನಗರದ ದಿಲ್ಸುಖ್ ನಗರ ಬಸ್ ನಿಲ್ದಾಣದ ಬಳಿ ರಾತ್ರಿ ದಿಟ್ಟ ಕಾರ್ಯಾಚರಣೆಗೆ ಇಳಿದು ಕಾಮುಕರ ಚಳಿ ಬಿಡಿಸಿದ್ದು, ಸದ್ಯ ಅದರ ವಿಡಿಯೋ ವೈರಲ್ ಆಗಿದೆ.
ರಾತ್ರಿ ವೇಳೆ ಮಹಿಳೆಯರ ಸುರಕ್ಷತೆ (Women Safety) ಎಷ್ಟಿದೆ ಎಂಬುದನ್ನು ಪರಿಶೀಲಿಸಲು ಹೈದರಾಬಾದ್ (Hyderabad) ನಲ್ಲಿ ದಿಟ್ಟ ಕಾರ್ಯಾಚರಣೆ ನಡೆದಿದೆ. ಮಲ್ಕಾಜ್ಗಿರಿ ವಿಭಾಗದ DCP ಸುಮತಿ (DCP Sumathi) ಯಾವುದೇ ಮುನ್ಸೂಚನೆ ಇಲ್ಲದೆ ಸಾಮಾನ್ಯ ಮಹಿಳೆಯಂತೆ ವೇಷಧರಿಸಿ (ಮಫ್ತಿಯಲ್ಲಿ) ಮಧ್ಯರಾತ್ರಿ ರಸ್ತೆಗಿಳಿದು ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡಿದ್ದಾರೆ.
3 ಗಂಟೆಯಲ್ಲಿ 40 ಜನರಿಂದ ಕಿರುಕುಳ :
ಮೇ 6ರ ರಾತ್ರಿ 12:30ರಿಂದ ಬೆಳಿಗ್ಗೆ 3:30ರವರೆಗೆ ಕೇವಲ 3 ಗಂಟೆಗಳ ಅವಧಿಯಲ್ಲಿ ಸುಮಾರು 40 ಮಂದಿ ಪುರುಷರು ಅವರನ್ನು ತಡೆದು ಕಿರುಕುಳ ನೀಡಿರುವುದು ಆಘಾತಕಾರಿಯಾಗಿದೆ. ಕೆಲವರು ಮದ್ಯಪಾನ ಮಾಡಿದ್ದರೆ, ಇನ್ನು ಕೆಲವರು ಮಾದಕ ಪದಾರ್ಥಗಳ ಪ್ರಭಾವದಲ್ಲಿದ್ದರು ಎಂದು ತಿಳಿದುಬಂದಿದೆ.
ಅವರಲ್ಲಿ ಕೆವರು “ರೇಟ್ ಎಷ್ಟು?”, “ಬರುತ್ತೀಯಾ?” ಎಂಬ ಪ್ರಶ್ನೆಗಳೊಂದಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆಗಳು ಆಘಾತ ಮೂಡಿಸಿವೆ.
ಈ ಸುದ್ದಿಯನ್ನು ಓದಿ : ಜಲಂಧರ್-ಅಮೃತಸರದಲ್ಲಿ ಸರಣಿ ಸ್ಫೋಟ: BSF ಕಚೇರಿ ಬಳಿ ಸ್ಕೂಟರ್ ಬೆಂಕಿ, ಆರ್ಮಿ ಕ್ಯಾಂಪ್ ಹತ್ತಿರ ದಾಳಿ.
IPS ಅಧಿಕಾರಿಗೆ ರೇಟ್ ಕೇಳಿದ ಕಾಮುಕರು
ಈ ಘಟನೆ ಮಹಿಳೆಯರ ಸುರಕ್ಷತೆ ಕುರಿತ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಕೇವಲ ದೂರುಗಳ ಮೇಲೆ ಅವಲಂಬಿಸದೆ ಸ್ಥಳದಲ್ಲೇ ಪರಿಶೀಲನೆ ನಡೆಸುವುದು ಅಗತ್ಯ ಎಂದು ಡಿಸಿಪಿ ಸುಮತಿ ತಿಳಿಸಿದ್ದಾರೆ. ಕಿರುಕುಳ ನೀಡಿದವರನ್ನು ಗುರುತಿಸಿ ಕೌನ್ಸೆಲಿಂಗ್ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಒಬ್ಬ IPS ಅಧಿಕಾರಿ ಎಂಬುದನ್ನೇ ಅರಿಯದ ಆರೋಪಿಗಳು ಮಹಿಳೆಯನ್ನು ಗುರಿಯಾಗಿಸಿಕೊಂಡು ಹೇಗೆ ವರ್ತಿಸುತ್ತಾರೆ ಎಂಬುದು ಈ ಕಾರ್ಯಾಚರಣೆಯಿಂದ ಸ್ಪಷ್ಟವಾಗಿದೆ.
ಸುತ್ತಮುತ್ತಲೇ ಸಿವಿಲ್ ಉಡುಪಿನಲ್ಲಿ ನಿಯೋಜಿಸಿದ್ದ ಪೊಲೀಸ್ ತಂಡಕ್ಕೆ ಸುಮತಿ ಅವರು ಸಂಕೇತ ನೀಡುತ್ತಿದ್ದಂತೆ, ಪೊಲೀಸರು ತಕ್ಷಣ ದಾಳಿ ನಡೆಸಿ ಆರೋಪಿಗಳನ್ನು ರೆಡ್ಹ್ಯಾಂಡ್ (Red-Handed) ಆಗಿ ಬಂಧಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು / ಖಾಸಗಿ ಕಂಪನಿಗಳ ಉದ್ಯೋಗಿಗಳು :
ಬಂಧಿತರಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ಸೇರಿರುವುದು ಮತ್ತಷ್ಟು ಚಿಂತಾಜನಕ ಸಂಗತಿಯಾಗಿದೆ. ಕೆಲವರು ಮದ್ಯಪಾನ (Alcohol) ಮತ್ತು ಗಾಂಜಾ (Drugs) ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಚಿಕ್ಕಮಗಳೂರಿನಲ್ಲಿ ಕೆರೆಯಲ್ಲಿ ಮುಳುಗಿ 4 ಮಕ್ಕಳ ಸಾವು, ಓರ್ವನ ಸ್ಥಿತಿ ಗಂಭೀರ.
ಈ ಕಾರ್ಯಾಚರಣೆ ಮೂಲಕ ರಾತ್ರಿ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಸಮಸ್ಯೆ ಬಹಿರಂಗವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ಮಹಿಳೆಯರ ಸುರಕ್ಷತೆ ಪರೀಕ್ಷೆ ವಿಡಿಯೋ :
IPS officer Sumati, Malkajgiri CP, was harassed by men during a plainclothes midnight operation in Hyderabad’s Dilsukhnagar. The men, unaware she was a senior cop, passed lewd remarks. 40 were detained — mostly students & employees, several under the influence of ganja. pic.twitter.com/Q8JndgKiro
— The Siasat Daily (@TheSiasatDaily) May 6, 2026
Courtesy : Social Media / Twitter
ಪೊಲೀಸ್ ಅಧಿಕಾರಿಯ ಈ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ನಗರದ ಕಾಮುಕರಿಗೆ ಇದು ಕಠಿಣ ಎಚ್ಚರಿಕೆಯಾಗಿ ಪರಿಣಮಿಸಿದೆ.
IPS ಬಿ. ಸುಮತಿ (B Sumathi) :
Disclaimer: ಈ ಸುದ್ದಿ (ರಾತ್ರಿ ಮಹಿಳೆಯರ ಸುರಕ್ಷತೆ ಪರೀಕ್ಷೆ) ಲಭ್ಯ ಮಾಹಿತಿಯ ಆಧಾರದ ಮೇಲೆ ರಚಿಸಲಾಗಿದೆ. ತನಿಖೆ ಮತ್ತು ಅಧಿಕೃತ ಮಾಹಿತಿ ಪ್ರಕಾರ ವಿವರಗಳಲ್ಲಿ ಬದಲಾವಣೆ ಸಾಧ್ಯ.





