ಮನೆ ಅಡುಗೆಗೆ ಈ 5 ಎಣ್ಣೆಗಳನ್ನು ಬಳಸುತ್ತಿದ್ದೀರಾ? ಇವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು?

ಮನೆ ಅಡುಗೆಗೆ ಈ 5 ಎಣ್ಣೆಗಳನ್ನು ಬಳಸುತ್ತಿದ್ದೀರಾ?

ಆರೋಗ್ಯ ಮಾಹಿತಿ : ನೀವೂ ದಿನನಿತ್ಯ ನಿಮ್ಮ ಮನೆ ಅಡುಗೆಗೆ ಈ 5 ಎಣ್ಣೆಗಳನ್ನು ಬಳಸುತ್ತಿದ್ದೀರಾ? ಹಾಗಾದ್ರೆ ಇವು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು? ಬನ್ನಿ ಇಂದು ಆ 5 ಎಣ್ಣೆಗಳು ಯಾವವು ಅಂತ ತಿಳಿಯೋಣ ಮತ್ತು ಇಂದಿನಿಂದಲೇ ಅವುಗಳ ಬಳಕೆಯನ್ನು ತಡಿಯೋಣ.!

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅನೇಕರ ಗಮನಕ್ಕೆ ಬಾರದ ಒಂದು ಪ್ರಮುಖ ವಿಷಯವೆಂದರೆ ಅಡುಗೆಗೆ ಬಳಸುವ ಎಣ್ಣೆ.

ತಜ್ಞರ ಪ್ರಕಾರ, ಕೆಲವು ರೀತಿಯ ಎಣ್ಣೆ / ಆಯಿಲ್‌ಗಳನ್ನು ಅತಿಯಾಗಿ ಅಥವಾ ನಿರಂತರವಾಗಿ ಬಳಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಬೊಜ್ಜು ಹಾಗೂ ಇತರ ಆರೋಗ್ಯ ತೊಂದರೆಗಳ ಅಪಾಯವೂ ಹೆಚ್ಚಬಹುದು. ಹಾಗಾದರೆ, ಆರೋಗ್ಯದ ದೃಷ್ಟಿಯಿಂದ ಯಾವ ಎಣ್ಣೆಗಳನ್ನು ಮಿತವಾಗಿ ಬಳಸುವುದು ಉತ್ತಮ ಎಂಬುದನ್ನು ತಿಳಿಯೋಣ.

ಮನೆ ಅಡುಗೆಗೆ ಈ 5 ಎಣ್ಣೆಗಳನ್ನು ಬಳಸುತ್ತಿದ್ದೀರಾ?

ಈ ಸುದ್ದಿಯನ್ನು ಓದಿ : ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನೇಮಕಾತಿ.

ಪಾಮ್ ಆಯಿಲ್ :

ಪಾಮ್ ಆಯಿಲ್ ಅನ್ನು ಹಲವಾರು ಸಿಹಿ ಪದಾರ್ಥಗಳಲ್ಲಿ, ಬೇಕರಿ ಉತ್ಪನ್ನಗಳಲ್ಲಿ ಹಾಗೂ ಪ್ಯಾಕೇಜ್ಡ್ ಆಹಾರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಇದರಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣ ಹೆಚ್ಚಿರುವ ಕಾರಣ ಅತಿಯಾದ ಸೇವನೆಯು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪಾಮ್ ಆಯಿಲ್ ಹೊಂದಿರುವ ಆಹಾರಗಳನ್ನು ಮಿತವಾಗಿ ಸೇವಿಸುವುದು ಉತ್ತಮ.

ಸೂರ್ಯಕಾಂತಿ ಎಣ್ಣೆ :

ಸೂರ್ಯಕಾಂತಿ ಎಣ್ಣೆ ಅನೇಕ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಆಯಿಲ್‌ ಆಗಿದೆ. ಆದರೆ ಕೆಲವು ರಿಫೈನ್ಡ್ ರೂಪಗಳಲ್ಲಿ ಒಮೆಗಾ-6 ಕೊಬ್ಬಿನಾಮ್ಲಗಳ ಪ್ರಮಾಣ ಹೆಚ್ಚಿರಬಹುದು. ತಜ್ಞರ ಅಭಿಪ್ರಾಯದಂತೆ, ಒಮೆಗಾ-6 ಮತ್ತು ಒಮೆಗಾ-3 ನಡುವಿನ ಸಮತೋಲನ ಕಾಪಾಡಿಕೊಳ್ಳುವುದು ಆರೋಗ್ಯಕ್ಕೆ ಮುಖ್ಯವಾಗಿದೆ.

ರೈಸ್ ಬ್ರಾನ್ ಆಯಿಲ್ :

ರೈಸ್ ಬ್ರಾನ್ ಆಯಿಲ್‌ನ್ನು ತಯಾರಿಸುವ ವಿಧಾನ ಮತ್ತು ಸಂಸ್ಕರಣಾ ಪ್ರಕ್ರಿಯೆಯ ಬಗ್ಗೆ ವಿವಿಧ ಅಭಿಪ್ರಾಯಗಳಿವೆ. ಸಂಸ್ಕರಣೆಯ ಮಟ್ಟ ಹಾಗೂ ಉತ್ಪಾದನಾ ಗುಣಮಟ್ಟದ ಆಧಾರದ ಮೇಲೆ ಇದರ ಬಳಕೆಯಿಂದ ಆರೋಗ್ಯದ ಪರಿಣಾಮ ಬದಲಾಗಬಹುದು. ಆದ್ದರಿಂದ ವಿಶ್ವಾಸಾರ್ಹ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯ.

ವೆಜಿಟೇಬಲ್ ಆಯಿಲ್ :

ವೆಜಿಟೇಬಲ್ ಆಯಿಲ್ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ವಿವಿಧ ಆಯಿಲ್‌ಗಳ ಮಿಶ್ರಣಗಳು ದೊರೆಯುತ್ತವೆ. ಇವುಗಳಲ್ಲಿ ಯಾವ ಆಯಿಲ್‌ಗಳವೆ ಎಂಬುದನ್ನು ಲೇಬಲ್ ಪರಿಶೀಲಿಸಿ ತಿಳಿದುಕೊಳ್ಳುವುದು ಅಗತ್ಯ. ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಲಾದ ಆಯಿಲ್‌ಗಳನ್ನು ಅತಿಯಾಗಿ ಬಳಸುವುದನ್ನು ತಜ್ಞರು ಶಿಫಾರಸು ಮಾಡುವುದಿಲ್ಲ.

ಕಾರ್ನ್ ಆಯಿಲ್ :

ಮೆಕ್ಕೆಜೋಳದಿಂದ ತಯಾರಿಸಲಾದ ಕಾರ್ನ್ ಆಯಿಲ್‌ನಲ್ಲಿ ಒಮೆಗಾ-6 ಫ್ಯಾಟಿ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ. ಇದನ್ನು ಸಮತೋಲಿತ ಆಹಾರ ಕ್ರಮದ ಭಾಗವಾಗಿ ಮಿತ ಪ್ರಮಾಣದಲ್ಲಿ ಬಳಸುವುದು ಉತ್ತಮ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯಕರ ಎಣ್ಣೆ ಆಯ್ಕೆ ಯಾವುದು?

ಆರೋಗ್ಯ ತಜ್ಞರ ಪ್ರಕಾರ, ಯಾವುದೇ ಒಂದು ಆಯಿಲ್‌ನ್ನು ಮಾತ್ರ ನಿರಂತರವಾಗಿ ಬಳಸುವುದಕ್ಕಿಂತ ವಿವಿಧ ರೀತಿಯ ಆಯಿಲ್‌ಗಳನ್ನು ಮಿತ ಪ್ರಮಾಣದಲ್ಲಿ ಪರ್ಯಾಯವಾಗಿ ಬಳಸುವುದು ಉತ್ತಮ.

ಇದನ್ನು ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುತ್ತೀರಾ? ಈ ಬಗ್ಗೆ ತಜ್ಞರು ಹೇಳುವುದೇನು?

ಕಡಲೆ ಆಯಿಲ್‌, ಎಳ್ಳೆಣ್ಣೆ, ಸಾಸಿವೆ ಆಯಿಲ್‌ ಮತ್ತು ಉತ್ತಮ ಗುಣಮಟ್ಟದ ಆಲಿವ್ ಆಯಿಲ್‌ಗಳನ್ನು ಆರೋಗ್ಯಕರ ಆಯ್ಕೆಗಳೆಂದು ಪರಿಗಣಿಸಲಾಗುತ್ತದೆ.

ಅತಿ ಹೆಚ್ಚು ರಿಫೈನ್ಡ್ ಮಾಡದ, ಕೋಲ್ಡ್-ಪ್ರೆಸ್ಡ್ (Cold-Pressed) ಎಣ್ಣೆಗಳು ಕೆಲವು ಪೌಷ್ಟಿಕಾಂಶಗಳನ್ನು ಉಳಿಸಿಕೊಂಡಿರಬಹುದು. ಅಡುಗೆಯಲ್ಲಿ ಆಯಿಲ್‌ ಪ್ರಮಾಣವನ್ನು ನಿಯಂತ್ರಿಸುವುದೂ ಅಷ್ಟೇ ಮುಖ್ಯವಾಗಿದೆ.

ಜೊತೆಗೆ ಹಣ್ಣುಗಳು, ತರಕಾರಿಗಳು ಮತ್ತು ಸಮತೋಲಿತ ಆಹಾರ ಸೇವನೆಯ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸೂಕ್ತ ಆಯಿಲ್‌ ಆಯ್ಕೆಗೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು ಹಾಗೂ ವಿವಿಧ ತಜ್ಞರ ಸಾಮಾನ್ಯ ಸಲಹೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಲೇಖನದಲ್ಲಿನ ಮಾಹಿತಿ ಕೇವಲ ಅರಿವು ಮೂಡಿಸುವ ಉದ್ದೇಶ ಹೊಂದಿದ್ದು, ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆಹಾರ ಪದ್ಧತಿ ಅಥವಾ ಅಡುಗೆ oil ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ಅರ್ಹ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಸೂಕ್ತ. ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪರಿಣಾಮಗಳು ಬದಲಾಗಬಹುದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top