ರೈಲ್ವೆಯಲ್ಲಿ ಬಂಪರ್ ನೇಮಕಾತಿ: 6,565 ಟೆಕ್ನೀಷಿಯನ್ ಹುದ್ದೆಗಳಿಗೆ ಜೂನ್ 30ರಿಂದ ಅರ್ಜಿ ಆಹ್ವಾನ.

ರೈಲ್ವೆಯಲ್ಲಿ ಬಂಪರ್ ನೇಮಕಾತಿ

ನೌಕರಿ ಮಾಹಿತಿ : ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಕ-ಯುವತಿಯರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ದೇಶದಾದ್ಯಂತ ಖಾಲಿ ಇರುವ “6,565 ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ (RRB)” ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ ಪಡೆಯಬೇಕೆಂದರೆ ಜೂನ್ 30ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದ್ದು, ಜುಲೈ 29 ಕೊನೆಯ ದಿನವಾಗಿದ್ದು, ಈ ಹಿನ್ನಲೆಯಲ್ಲಿ ಇದರ ನಡುವೆ ನೀವು ಅರ್ಜಿ ಸಲ್ಲಿಬೇಕಾಗುತ್ತದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಈ ರೈಲ್ವೆ ನೇಮಕಾತಿ ಮಂಡಳಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸಾವಿರಾರು ಟೆಕ್ನೀಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ರೈಲ್ವೆಯಲ್ಲಿ ಖಾಲಿ ಹುದ್ದೆಗಳು :

ಈ ನೇಮಕಾತಿಯಲ್ಲಿ ಎರಡು ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) :

ಒಟ್ಟು “323 ಹುದ್ದೆಗಳು” ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ವೇತನವಾಗಿ **ರೂ. 29,200** ನೀಡಲಾಗುತ್ತದೆ.

ಟೆಕ್ನೀಷಿಯನ್ ಗ್ರೇಡ್-3 :

ಅತಿ ಹೆಚ್ಚು ಅಂದರೆ **6,242 ಹುದ್ದೆಗಳು** ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ **ರೂ. 19,900 ಮಾಸಿಕ ವೇತನ** ಲಭ್ಯವಾಗಲಿದೆ.

ವೇತನ ಶ್ರೇಣಿ :

ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) :

  • ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) ಹುದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮಾಸಿಕ ವೇತನವಾಗಿ “ರೂ. 29,200/” ನೀಡಲಾಗುತ್ತದೆ.

ಈ ಸುದ್ದಿಯನ್ನು ಓದಿ : ಕೈಕೊಟ್ಟ ಮುಂಗಾರು: ದೇಶದಲ್ಲಿ 64% ಮಳೆ ಕೊರತೆ, ಬೆಚ್ಚಿಬೀಳಿಸಿದ ಉಪಗ್ರಹ ಚಿತ್ರ.

ಟೆಕ್ನೀಷಿಯನ್ ಗ್ರೇಡ್-3 :

  • ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗೆ ಆಯ್ಕೆಯಾದವರಿಗೆ “ರೂ. 19,900/-“ ಮಾಸಿಕ ವೇತನ ಲಭ್ಯವಾಗಲಿದೆ.

ವಿದ್ಯಾರ್ಹತೆ ಏನು?

ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.

  • 10ನೇ ತರಗತಿ (SSLC) ಪಾಸ್.
  • ಸಂಬಂಧಿತ ಟ್ರೇಡ್‌ನಲ್ಲಿ ITI ಸರ್ಟಿಫಿಕೇಟ್.
  • ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಕೆಲವು ಹುದ್ದೆಗಳಿಗೆ B.Sc ಅಥವಾ ಇಂಜಿನಿಯರಿಂಗ್ ಅರ್ಹತೆ ಅಗತ್ಯ.

ವಯೋಮಿತಿ :

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಸಾಮಾನ್ಯವಾಗಿ “18 ರಿಂದ 33 ವರ್ಷಗಳೊಳಗೆ” ಇರಬೇಕು.
  • ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ.

1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) :

  • ಮೊದಲ ಹಂತದಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ.

2. ದಾಖಲೆ ಪರಿಶೀಲನೆ :

  • ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

3. ವೈದ್ಯಕೀಯ ಪರೀಕ್ಷೆ :

  • ಕೊನೆಯ ಹಂತದಲ್ಲಿ ಆರೋಗ್ಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಇದನ್ನು ಓದಿ : ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ; 3,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಚಾಲನೆ.

ಪ್ರಮುಖ ದಿನಾಂಕಗಳು :

ರೈಲ್ವೆ ಮಂಡಳಿ ಪ್ರಸ್ತುತ ಸಂಕ್ಷಿಪ್ತ ಅಧಿಸೂಚನೆ ಬಿಡುಗಡೆ ಮಾಡಿರುವ ಪ್ರಕಾರ,

  • ಜೂನ್ 30, 2026ರಂದು ಸಂಪೂರ್ಣ ನೋಟಿಫಿಕೇಶನ್ ಪ್ರಕಟವಾಗಲಿದೆ.

Note : ಅದೇ ದಿನದಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

  • ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನ

ಎಂದು ತಿಳಿಸಲಾಗಿದೆ.

ನಿರುದ್ಯೋಗಿ ಯುವಕರಿಗೆ ಉತ್ತಮ ಅವಕಾಶ :

ಒಟ್ಟಾರೆ ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸುವುದು ಒಳಿತು.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ರೈಲ್ವೆ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಉದ್ಯೋಗ ಮಾಹಿತಿ ಹಾಗೂ ಪ್ರಕಟಿತ ಅಧಿಸೂಚನೆ ಆಧರಿಸಿ ಮಾಹಿತಿ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top