ಡೆಸ್ಕ್ : ಆಸ್ಪತ್ರೆಯಲ್ಲಿರುವ ರೋಗಿಗಳ ಸಾವಿನ ಬಗ್ಗೆ ಬೆಕ್ಕು ಮುಂಚಿತ ಸೂಚನೆ ನೀಡುತ್ತಿತ್ತು ಎನ್ನುವ ವಿಸ್ಮಯಕಾರಿ ಘಟನೆ ಕಳೆದ ಕೆಲ ವರ್ಷಗಳ ಹಿಂದೆ ಅಮೆರಿಕದ ರೋಡ್ ಐಲ್ಯಾಂಡ್ ರಾಜ್ಯದಲ್ಲಿರುವ ಒಂದು ನರ್ಸಿಂಗ್ ಹೋಮ್ನಲ್ಲಿ ನಡೆದಿದೆ.
ಅಮೆರಿಕದ ರೋಡ್ ಐಲ್ಯಾಂಡ್ ರಾಜ್ಯದಲ್ಲಿರುವ ಒಂದು ನರ್ಸಿಂಗ್ ಹೋಮ್ನಲ್ಲಿ ವಾಸಿಸುವ ಬೆಕ್ಕು (Cat) ಇದೀಗ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ‘ಆಸ್ಕರ್’ (Oscar the Cat) ಎಂಬ ಹೆಸರಿನ ಈ ಬೆಕ್ಕು, ಯಾವ ರೋಗಿಯ ಸಾವು ಸಮೀಪಿಸುತ್ತಿದೆಯೋ ಅದನ್ನು ಮುಂಚಿತವಾಗಿಯೇ ಗುರುತಿಸುತ್ತದೆ ಎಂಬ ನಂಬಿಕೆ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಮೂಡಿದೆ.
ಈ ವಿಚಿತ್ರ ಘಟನೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಹಲವಾರು ಬಾರಿ ಈ ”ಆಸ್ಕರ್ ಬೆಕ್ಕು” ನೀಡಿದ ಸೂಚನೆಗಳು ನಿಜವಾಗಿರುವುದರಿಂದ, ಆಸ್ಪತ್ರೆಯ ಸಿಬ್ಬಂದಿ ಕೂಡ ಇದರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದಾರೆ.
100ಕ್ಕೂ ಹೆಚ್ಚು ಸಾವಿನ ಬಗ್ಗೆ ನಿಖರ ಸೂಚನೆ?
ಆಸ್ಕರ್ ಎಂಬ ಬೆಕ್ಕು, ಸ್ಟೀರೆ ಹೌಸ್ ನರ್ಸಿಂಗ್ ಅಂಡ್ ರೆಹಬಿಲಿಟೇಷನ್ ಸೆಂಟರ್) Steere House Nursing and Rehabilitation Center) ಎಂಬ ನರ್ಸಿಂಗ್ ಹಾಗೂ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿತ್ತು. ಮುಖ್ಯವಾಗಿ ಅಲ್ಝೈಮರ್ಸ್ (Alzheimer’s) ಮತ್ತು ಪಾರ್ಕಿನ್ಸನ್ (Parkinson’s Disease) ರೋಗಿಗಳಿಗೆ ಚಿಕಿತ್ಸೆ ನೀಡುವ ಡಿಮೆನ್ಶಿಯಾ ಯುನಿಟ್ನಲ್ಲಿ ಈ ಬೆಕ್ಕನ್ನು ಥೆರಪಿ (Therapy) ಉದ್ದೇಶಕ್ಕಾಗಿ 2000ನೇ ಇಸವಿಯಲ್ಲಿ ತರಲಾಗಿತ್ತು.
ಬ್ರೌನ್ ವಿಶ್ವವಿದ್ಯಾಲಯದ ವಯೋವಿಜ್ಞಾನಿ ಡಾ. ಡೇವಿಡ್ ಡೋಸಾ ಅವರು ತಮ್ಮ “Making Rounds with Oscar” ಪುಸ್ತಕದಲ್ಲಿ ಆಸ್ಕರ್ ಬೆಕ್ಕಿನ ಕುರಿತು ವಿವರವಾಗಿ ಉಲ್ಲೇಖಿಸಿದ್ದಾರೆ.
ಅವರ ಪ್ರಕಾರ, ”ಆಸ್ಕರ್ ಬೆಕ್ಕು” ಸಾಮಾನ್ಯವಾಗಿ ಆಸ್ಪತ್ರೆಯ ಕೋಣೆಗಳಲ್ಲಿ ಓಡಾಡುತ್ತಾ ಆಟವಾಡುತ್ತಿರುತ್ತದೆ. ಆದರೆ ಯಾವ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗುತ್ತದೆಯೋ, ಆ ರೋಗಿಯ ಹಾಸಿಗೆಯ ಬಳಿಯೇ ಹೋಗಿ ದೀರ್ಘ ಸಮಯ ಕುಳಿತುಕೊಳ್ಳುತ್ತದೆ. ಕೆಲವೇ ಗಂಟೆಗಳಲ್ಲಿ ಅಥವಾ ಅದೇ ದಿನ ಆ ರೋಗಿ ಸಾವನ್ನಪ್ಪಿರುವ ಅನೇಕ ಘಟನೆಗಳು ದಾಖಲಾಗಿವೆ ಎನ್ನಲಾಗಿದೆ.
ಸಿಬ್ಬಂದಿಯಲ್ಲೂ ಆಶ್ಚರ್ಯ, ಸಂಬಂಧಿಕರಿಗೆ ಮುಂಚಿತ ಮಾಹಿತಿ :
ಆಸ್ಪತ್ರೆಯ ಸಿಬ್ಬಂದಿ ಹೇಳುವಂತೆ, ಹಲವಾರು ಬಾರಿ ಆಸ್ಕರ್ನ್ನು ಬೇರೆ ಕೋಣೆಗೆ ಕಳುಹಿಸಲು ಪ್ರಯತ್ನಿಸಿದರೂ ಅದು ಮತ್ತೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಬಳಿಗೇ ಮರಳುತ್ತಿತ್ತಂತೆ. ಇದರಿಂದ ಕೆಲವೊಮ್ಮೆ ಆಸ್ಪತ್ರೆ ಸಿಬ್ಬಂದಿ ಸಂಬಂಧಿಕರಿಗೆ ಮುಂಚಿತ ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ.
ಈ ಸುದ್ದಿಯನ್ನು ಓದಿ : ಹೋಟೆಲ್ ಬಾತ್ರೂಮ್ನಲ್ಲಿ ರಹಸ್ಯವಾಗಿ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿದ ಆರೋಪ: ಇಬ್ಬರು ಕ್ರಿಕೆಟ್ ಆಟಗಾರರ ಬಂಧನ.!
ಒಂದು ಸಂದರ್ಭದಲ್ಲಿ ವೈದ್ಯರು ರೋಗಿಯ ಸ್ಥಿತಿ ಸ್ಥಿರವಾಗಿದೆ (ಸಾಯುವ ಸ್ಥಿತಿಯಲ್ಲಿ ಇಲ್ಲದ) ಎಂದು ಭಾವಿಸಿದ್ದರೂ, ”ಆಸ್ಕರ್ ಬೆಕ್ಕು” ಆ ರೋಗಿಯ ಬಳಿಯೇ ಕುಳಿತಿತ್ತು. ನಂತರ ಅಚ್ಚರಿಯ ರೀತಿಯಲ್ಲಿ ಆ ರೋಗಿ ಸಾವನ್ನಪ್ಪಿದ ಘಟನೆ ಕೂಡ ನಡೆದಿದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ವಿಜ್ಞಾನಿಗಳು ಏನು ಹೇಳುತ್ತಾರೆ?
ವಿಜ್ಞಾನಿಗಳ ಅಭಿಪ್ರಾಯದಂತೆ, ಪ್ರಾಣಿಗಳಿಗೆ ಮಾನವರಿಗಿಂತ ಹೆಚ್ಚು ಸಂವೇದನಾಶೀಲವಾದ ವಾಸನೆ ಗುರುತಿಸುವ ಶಕ್ತಿ (Sense of Smell) ಇರುತ್ತದೆ. ಸಾವಿನ ಮುನ್ನ ಮಾನವ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು (Chemical Changes), ದೇಹದ ಉಷ್ಣಾಂಶದ ವ್ಯತ್ಯಾಸ ಹಾಗೂ ಮೆಟಾಬಾಲಿಸಂ (Metabolism) ಬದಲಾವಣೆಗಳನ್ನು ಪ್ರಾಣಿಗಳು ಗುರುತಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಇದೇ ಕಾರಣದಿಂದ ಕೆಲವು ನಾಯಿಗಳು (Dogs) ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಎಂಬ ಅಧ್ಯಯನಗಳೂ ಈಗಾಗಲೇ ಹೊರಬಂದಿವೆ. ಆಸ್ಕರ್ ಬೆಕ್ಕಿನ ವರ್ತನೆಯೂ ಇದೇ ರೀತಿಯ ಜೈವಿಕ ಬದಲಾವಣೆಗಳನ್ನು ಗುರುತಿಸುವ ಶಕ್ತಿಯ ಪರಿಣಾಮವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಇದನ್ನು ಓದಿ : ಸಿಂಧನೂರು: ರಿವರ್ಸ್ ಬಂದ ಕಾರು ಡಿಕ್ಕಿ, ದ್ವಿತೀಯ PUC ವಿದ್ಯಾರ್ಥಿನಿ ದುರ್ಮರಣ.
ಆಸ್ಕರ್ ಬೆಕ್ಕಿನ ಕಥೆ ವೈದ್ಯಕೀಯ ಲೋಕದಲ್ಲಿ ಮಾತ್ರವಲ್ಲ, ಸಾಮಾನ್ಯ ಜನರಲ್ಲಿಯೂ ಭಾರೀ ಕುತೂಹಲ ಹುಟ್ಟಿಸಿದ್ದು, “ಪ್ರಾಣಿಗಳಿಗೆ ವಿಶೇಷ ಆರನೇ ಇಂದ್ರಿಯ (Sixth Sense) ಇದೆಯೇ?” ಎಂಬ ಪ್ರಶ್ನೆಯನ್ನು ಮತ್ತೆ ಚರ್ಚೆಗೆ ತಂದಿದೆ.
ಈ ‘ಆಸ್ಕರ್’ (Oscar the Cat) ಗೆ ಒಬ್ಬ ವ್ಯಕ್ತಿಗತ ಮಾಲೀಕ (Owner) ಇರಲಿಲ್ಲ. ಅದು ಅಮೆರಿಕದ Steere House Nursing and Rehabilitation Center ನರ್ಸಿಂಗ್ ಹೋಮ್ನಲ್ಲೇ ವಾಸಿಸುತ್ತಿದ್ದ ಥೆರಪಿ ಬೆಕ್ಕು (Therapy Cat) ಆಗಿತ್ತು. 2005ರಲ್ಲಿ ಆ ನರ್ಸಿಂಗ್ ಹೋಮ್ ಆರು ಬೆಕ್ಕುಗಳನ್ನು ದತ್ತು ಪಡೆದಾಗ ಆಸ್ಕರ್ ಕೂಡ ಅಲ್ಲಿ ಸೇರಿತ್ತು.
ಆಸ್ಕರ್ನ್ನು ಜಗತ್ತಿಗೆ ಪರಿಚಯಿಸಿದವರು ಡಾ. ಡೇವಿಡ್ ಡೋಸಾ. ಅವರು ಬ್ರೌನ್ ವಿಶ್ವವಿದ್ಯಾಲಯದ ವೈದ್ಯರು ಮತ್ತು ವಯೋವಿಜ್ಞಾನಿ (Gerontologist) ಆಗಿದ್ದು, ಆಸ್ಕರ್ನ ವಿಚಿತ್ರ ವರ್ತನೆ ಬಗ್ಗೆ 2007ರಲ್ಲಿ ಲೇಖನ ಬರೆದಿದ್ದರು. ನಂತರ ಅವರು “Making Rounds with Oscar “ಎಂಬ ಪುಸ್ತಕವನ್ನೂ ಪ್ರಕಟಿಸಿದರು. ಇದರಿಂದ ಆಸ್ಕರ್ ಜಗತ್ತಿನಾದ್ಯಂತ ಪ್ರಸಿದ್ಧಿಯಾಯಿತು.
ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
”ಆಸ್ಕರ್ ಬೆಕ್ಕು” (Oscar the Cat) ; ಸಾವು :
‘ಆಸ್ಕರ್’ (Oscar the Cat) ಎಂಬ ಈ ಪ್ರಸಿದ್ಧ ಥೆರಪಿ ಬೆಕ್ಕು 2022ರ ಫೆಬ್ರವರಿ 22ರಂದು ಮೃತಪಟ್ಟಿತು. ಅದು 17 ವರ್ಷದ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
Photo Credit : Crossroads Hospice
Disclaimer: ಈ ಲೇಖನವು (“ಆಸ್ಕರ್ ಬೆಕ್ಕು”) ವಿವಿಧ ವರದಿಗಳು ಮತ್ತು ಲಭ್ಯ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಇಲ್ಲಿ ಉಲ್ಲೇಖಿಸಲಾದ ಅಂಶಗಳು ವೈಜ್ಞಾನಿಕ ಅಧ್ಯಯನಗಳು, ಪುಸ್ತಕಗಳು ಹಾಗೂ ಮಾಧ್ಯಮ ವರದಿಗಳ ಆಧಾರಿತವಾಗಿದ್ದು, ಅಧಿಕೃತ ವೈದ್ಯಕೀಯ ನಿರ್ಣಯವಾಗಿ ಪರಿಗಣಿಸಬಾರದು.




