ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ದುರಂತ; ತುರ್ತು ಲ್ಯಾಂಡಿಂಗ್ ವೇಳೆ ಸುಟ್ಟು ಭಸ್ಮವಾದ ವಿಮಾನ.

ತುರ್ತು ಲ್ಯಾಂಡಿಂಗ್ ವೇಳೆ ಸುಟ್ಟು ಭಸ್ಮವಾದ ವಿಮಾನ.

ಡೆಸ್ಕ್‌ : ಖಾಸಗಿ ಜೆಟ್ ವಿಮಾನವೊಂದು ರನ್‌ವೇ ಸಮೀಪ ತುರ್ತು ಲ್ಯಾಂಡಿಂಗ್ ವೇಳೆ ದುರಂತಕೊಳಗಾಗಿದ್ದು, ಘಟನೆಯಲ್ಲಿ ಇಬ್ಬರು ಸಿಬ್ಬಂದಿ ದುರ್ಮರಣಕ್ಕಿಡಾಗಿದ್ದಾರೆಂದು ವರದಿಯಾಗಿದೆ. ಘಟನೆ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸಂಭವಿಸಿದ ವಿಮಾನ ದುರಂತವೊಂದು ಆತಂಕಕ್ಕೆ ಕಾರಣವಾಗಿದೆ. ಖಾಸಗಿ ಜೆಟ್ ವಿಮಾನವೊಂದು ವಿಮಾನ ನಿಲ್ದಾಣದ ರನ್‌ವೇ ಸಮೀಪ ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುವ ವೇಳೆಯೇ ಪತನಗೊಂಡು ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಲಾ ರೊಮಾನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರಕ್ಕೆ ತೆರಳಬೇಕಿದ್ದ ಖಾಸಗಿ ಜೆಟ್ ವಿಮಾನವು ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಎದುರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಪೈಲಟ್ ತುರ್ತು ಲ್ಯಾಂಡಿಂಗ್‌ಗೆ ಮುಂದಾಗಿದ್ದ ವೇಳೆ ದುರಾದೃಷ್ಟಕ್ಕೆ ವಿಮಾನ ಸುರಕ್ಷಿತವಾಗಿ ನೆಲಕ್ಕಿಳಿಯುವ ಮುನ್ನವೇ ದುರಂತಕ್ಕೀಡಾಗಿದೆ ಎಂದು ತಿಳಿದು ಬಂದಿದೆ. ಸದ್ಯ ದುರಂತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ.

ತುರ್ತು ಲ್ಯಾಂಡಿಂಗ್ ವೇಳೆ ದುರಂತ :

Courtesy : Social Media / Twitter

ರನ್‌ವೇ ಸಮೀಪ ಬೆಂಕಿಗಾಹುತಿ :

ವೈರಲ್‌ ವಿಡಿಯೋದಲ್ಲಿ ಕಾಣಿಸಿರುವಂತೆ ವಿಮಾನ ರನ್‌ವೇ ಸಮೀಪ ಬಂದಾಗ ಅದರ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಭಾರೀ ಅಗ್ನಿಗೆ ಆಹುತಿಯಾಗಿರುವಂತೆ ಕಾಣುತ್ತಿದೆ. ಈ ಘಟನೆಯನ್ನು ಸ್ಥಳೀಯರು ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಆ ದೃಶ್ಯಗಳಲ್ಲಿ ವಿಮಾನ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ.

ಇದನ್ನು ಓದಿ : SA: ನಾಪತ್ತೆಯಾದ ಉದ್ಯಮಿಯ ಶೋಧಕ್ಕೆ ಹೋದ ಪೊಲೀಸರಿಗೆ ಶಾಕ್‌; ರೋಚಕ ವಿಡಿಯೋ ವೈರಲ್‌.

ದುರಂತದಲ್ಲಿ ಪೈಲಟ್ ಹಾಗೂ ಸಹ-ಪೈಲಟ್ ಮೃತಪಟ್ಟಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ತುರ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರೂ, ಇಬ್ಬರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ತಾಂತ್ರಿಕ ದೋಷದ ಶಂಕೆ :

ಪ್ರಾಥಮಿಕ ತನಿಖೆಯ ಪ್ರಕಾರ, ವಿಮಾನದಲ್ಲಿ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ಎಂಜಿನ್ ಅಥವಾ ಇತರೆ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿರಬಹುದೆಂಬ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ತನಿಖೆ ಆರಂಭ :

ಅಪಘಾತದ ನಿಖರ ಕಾರಣ ತಿಳಿಯಲು ವಿಮಾನಯಾನ ಸುರಕ್ಷತಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಿಮಾನದ ನಿರ್ವಹಣಾ ದಾಖಲೆಗಳು, ತಾಂತ್ರಿಕ ಸ್ಥಿತಿ ಹಾಗೂ ಪೈಲಟ್ ನೀಡಿದ್ದ ತುರ್ತು ಸಂದೇಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಘಟನೆ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದ್ದು, ಅಪಘಾತದ ನಿಖರ ಕಾರಣದ ಬಗ್ಗೆ ತನಿಖಾ ವರದಿ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಪ್ರಾಥಮಿಕ ವರದಿಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಅಪಘಾತದ ಕಾರಣಗಳ ಕುರಿತು ಅಧಿಕೃತ ವರದಿ ಪ್ರಕಟವಾದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top