ಆರೋಗ್ಯ ಮಾಹಿತಿ : ನೀವು ಮುಂಜಾನೆ ಎದ್ದ ತಕ್ಷಣ ಈ ಲಕ್ಷಣಗಳು ಕಾಣಿಸುತ್ತಿವೆಯೇ? ಹಾಗಾದ್ರೆ ಖಂಡಿತಾ ನಿರ್ಲಕ್ಷ್ಯ ಮಾಡಬೇಡಿ, ಇವು ಕಿಡ್ನಿ ಸಮಸ್ಯೆ (Kidney Problem) ಯ ಎಚ್ಚರಿಕೆ ಇರಬಹುದು. ಇಂದಿನ ಆರೋಗ್ಯ ಮಾಹಿತಿಯಲ್ಲಿ ಅವು ಯಾವ ಲಕ್ಷಣಗಳು ಮತ್ತು ಮುನ್ನೇಚ್ಚರಿ ಏನು ತೆಗೆದುಕೊಳ್ಳಬೇಕು ಅಂತ ತಿಳಿಯೋಣ.! ಯಾವು
ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ (Kidney) ಸಂಬಂಧಿತ ಸಮಸ್ಯೆಗಳು ಯುವಕರಲ್ಲಿಯೂ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವುದು, ರಕ್ತವನ್ನು ಶುದ್ಧೀಕರಿಸುವುದು ಹಾಗೂ ದೇಹದ ದ್ರವ ಸಮತೋಲನವನ್ನು ಕಾಪಾಡುವುದು ಮೂತ್ರಪಿಂಡಗಳ ಪ್ರಮುಖ ಕೆಲಸವಾಗಿದೆ.
ಆದರೆ, ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹವು ಕೆಲವು ಮುನ್ಸೂಚನೆಗಳನ್ನು (Warning Signs) ನೀಡಲು ಆರಂಭಿಸುತ್ತದೆ. ವಿಶೇಷವಾಗಿ ಮುಂಜಾನೆ ಸಮಯದಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ಸಾಮಾನ್ಯ ಆಯಾಸ ಅಥವಾ ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.
ಮುಂಜಾನೆ ಕಾಣಿಕೊಳ್ಳುವ ಲಕ್ಷಣಗಳು :
1. ಮುಖ ಮತ್ತು ಕಣ್ಣುಗಳ ಸುತ್ತ ಊತ :
ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮುಖ, ಕಣ್ಣುಗಳ ಸುತ್ತ ಬಾವು ಅಥವಾ ಊತ ಕಾಣಿಸಿಕೊಂಡರೆ ಅದು ಕಿಡ್ನಿ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು. ಸಾಮಾನ್ಯವಾಗಿ ಮೂತ್ರಪಿಂಡಗಳು ದೇಹದಲ್ಲಿನ ಹೆಚ್ಚುವರಿ ನೀರು ಮತ್ತು ಉಪ್ಪನ್ನು ಹೊರಹಾಕುತ್ತವೆ. ಆದರೆ ಅವು ಸರಿಯಾಗಿ ಕೆಲಸ ಮಾಡದಿದ್ದರೆ ದ್ರವಗಳು ದೇಹದಲ್ಲೇ ಉಳಿದುಕೊಂಡು ಊತ ಉಂಟಾಗುತ್ತದೆ.
2. ವಿಪರೀತ ಆಯಾಸ ಮತ್ತು ನಿಶ್ಯಕ್ತಿ :
ರಾತ್ರಿಯಿಡೀ ಸಮರ್ಪಕ ನಿದ್ರೆ ಮಾಡಿದರೂ ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ಶಕ್ತಿ ಇಲ್ಲದಂತೆ ಅನಿಸುವುದು, ಸುಸ್ತು ಅಥವಾ ನಿಶ್ಯಕ್ತಿ ಕಾಡುವುದು ಕಿಡ್ನಿ ಆರೋಗ್ಯದ ಸಮಸ್ಯೆಗೆ ಸೂಚನೆಯಾಗಿರಬಹುದು. ದೇಹದಲ್ಲಿನ ಟಾಕ್ಸಿನ್‌ಗಳು (Toxins) ಹೊರಹೋಗದೆ ರಕ್ತದಲ್ಲಿ ಉಳಿದಾಗ ಶಕ್ತಿಯ ಮಟ್ಟ ಕುಸಿಯಬಹುದು.
ಈ ಸುದ್ದಿಯನ್ನು ಓದಿ : ಕೊಡಗು ದುಬಾರೆಯಲ್ಲಿ ಆನೆಗಳ ಕಾದಾಟ ದುರಂತ; ಪ್ರವಾಸಿ ಮಹಿಳೆ ದುರ್ಮರಣ.
3. ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ :
ಬೆಳಗಿನ ಮೊದಲ ಮೂತ್ರದಲ್ಲಿ ಅತಿಯಾದ ನೊರೆ ಕಾಣಿಸುವುದು, ಮೂತ್ರದ ಬಣ್ಣ ಗಾಢವಾಗಿರುವುದು ಅಥವಾ ಪ್ರಮಾಣದಲ್ಲಿ ಅಸಾಮಾನ್ಯ ಬದಲಾವಣೆ ಕಂಡುಬಂದರೆ ಎಚ್ಚರ ವಹಿಸಬೇಕು. ಕೆಲವೊಮ್ಮೆ ಮೂತ್ರದಲ್ಲಿ ರಕ್ತದ ಅಂಶ ಕೂಡ ಕಾಣಿಸಬಹುದು. ಇದು ಕಿಡ್ನಿ ಸೋಂಕು (Infection) ಅಥವಾ ಮೂತ್ರಪಿಂಡ ಹಾನಿಯ ಲಕ್ಷಣವಾಗಿರಬಹುದು.
4. ಬಾಯಿ ಒಣಗುವುದು ಮತ್ತು ದುರ್ವಾಸನೆ :
ಬೆಳಗ್ಗೆ ಎದ್ದ ತಕ್ಷಣ ಬಾಯಿ ಒಣಗಿರುವುದು ಅಥವಾ ದುರ್ವಾಸನೆ (Bad Breath) ಹೆಚ್ಚಿರುವುದು ಕೂಡ ದೇಹದಲ್ಲಿನ ತ್ಯಾಜ್ಯ ವಸ್ತುಗಳು ಸರಿಯಾಗಿ ಹೊರಹೋಗದಿರುವುದನ್ನು ಸೂಚಿಸಬಹುದು. ಕಿಡ್ನಿ ಸಮಸ್ಯೆ ಇರುವ ಕೆಲವರಲ್ಲಿ ಈ ಲಕ್ಷಣ ಸಾಮಾನ್ಯವಾಗಿ ಕಂಡುಬರುತ್ತದೆ.
5. ಕಾಲು ಮತ್ತು ಪಾದಗಳಲ್ಲಿ ಊತ :
ಕಾಲು, ಪಾದಗಳು ಉಬ್ಬಿದಂತಾಗುವುದು ಅಥವಾ ಚಪ್ಪಲಿ ಬಿಗಿಯಾದಂತೆ ಅನುಭವವಾಗುವುದು ಕೂಡ ಕಿಡ್ನಿ ಕಾರ್ಯಕ್ಷಮತೆ ಕುಸಿದಿರುವ ಸಂಕೇತವಾಗಿರಬಹುದು. ದೇಹದಲ್ಲಿನ ಹೆಚ್ಚುವರಿ ದ್ರವ ಕಾಲುಗಳಲ್ಲಿ ಸಂಗ್ರಹವಾಗುವುದರಿಂದ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇದನ್ನು ಓದಿ : ಪೀರಿಯಡ್ಸ್ ಮುಂದೂಡುವ ಮಾತ್ರೆ ಬಳಸುವ ಮುನ್ನ ಮಹಿಳೆಯರೇ ಎಚ್ಚರ!
6. ಅಧಿಕ ರಕ್ತದೊತ್ತಡ ಮತ್ತು ಬೆನ್ನುನೋವು :
ಮುಂಜಾನೆ ಸಮಯದಲ್ಲಿ ಪದೇ ಪದೇ ಬಿಪಿ (High BP) ಹೆಚ್ಚಾಗುವುದು ಹಾಗೂ ಬೆನ್ನಿನ ಒಂದು ಬದಿಯಲ್ಲಿ ನೋವು ಕಾಣಿಸಿಕೊಳ್ಳುವುದು ಕೂಡ ಮೂತ್ರಪಿಂಡ ಸಮಸ್ಯೆಯ ಸೂಚನೆಯಾಗಿರಬಹುದು. ಕೆಲವರಲ್ಲಿ ಇದು ಕಿಡ್ನಿ ಸ್ಟೋನ್ (Kidney Stones) ಅಥವಾ ಸೋಂಕಿನ ಕಾರಣದಿಂದಲೂ ಉಂಟಾಗಬಹುದು.
ಆರೋಗ್ಯ ಕಾಪಾಡಲು ಏನು ಮಾಡಬೇಕು?
ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ಉಪ್ಪಿನ ಬಳಕೆ ಕಡಿಮೆ ಮಾಡುವುದು, ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ (Health Checkup) ಮಾಡಿಸಿಕೊಳ್ಳುವುದು ಕಿಡ್ನಿ ಆರೋಗ್ಯ ಕಾಪಾಡಲು ಸಹಕಾರಿ. ಯಾವುದೇ ಲಕ್ಷಣಗಳು ನಿರಂತರವಾಗಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ಕಿಡ್ನಿ ಅವಶ್ಯಕತೆ :
ಮೂತ್ರಪಿಂಡಗಳು (Kidneys) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿವೆ.
ಇವು ರಕ್ತದಲ್ಲಿನ ಕಲ್ಮಶಗಳನ್ನು ಫಿಲ್ಟರ್ ಮಾಡಿ ಮೂತ್ರದ ಮೂಲಕ ಹೊರಹಾಕುವ ಕೆಲಸ ಮಾಡುತ್ತವೆ. ಜೊತೆಗೆ ದೇಹದಲ್ಲಿನ ನೀರು, ಉಪ್ಪು ಹಾಗೂ ಖನಿಜಗಳ ಸಮತೋಲನವನ್ನು ಕಾಪಾಡಿ ರಕ್ತದೊತ್ತಡ (Blood Pressure) ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತವೆ.
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದ ಹಲವು ಅಂಗಗಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಅತ್ಯಗತ್ಯ.
Disclaimer: ಈ Kidney ಲೇಖನವು ಸಾರ್ವಜನಿಕ ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ ಬರೆಯಲಾಗಿದೆ. ಇಲ್ಲಿ ನೀಡಿರುವ ಮಾಹಿತಿ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಅರ್ಹ ವೈದ್ಯರ ಸಲಹೆ ಪಡೆಯಿರಿ.





