ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಚಂದರಗಿಯ SPOCO’S ವಿದ್ಯಾರ್ಥಿಗಳು.

ದೇಶದ ಕೀರ್ತಿ ಹೆಚ್ಚಿಸಿದ ಚಂದರಗಿಯ SPOCO’S ವಿದ್ಯಾರ್ಥಿಗಳು

ಚಂದರಗಿ (ರಾಮದುರ್ಗ) : ಭೂತಾನಿನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ “ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ” ಬೆಳಗಾವಿ ಜಿಲ್ಲೆಯ ಚಂದರಗಿಯ “SPOCO’S” ಎನ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆ ಹಾಗೂ ಎಸ್.ಪಿ.ಡಿ.ಸಿ.ಎಲ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶೇಷ ಅಭಿನಂದನಾ ಸಮಾರಂಭವನ್ನು ಭಾನುವಾರ ಅದ್ಧೂರಿಯಾಗಿ ಆಯೋಜಿಸಲಾಯಿತು.

ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಾಧನೆ :

ಇತ್ತೀಚೆಗೆ ಭೂತಾನಿನಲ್ಲಿ ನಡೆದ ಅಂತರರಾಷ್ಟ್ರೀಯ ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿ “ಚಿನ್ನದ ಪದಕ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ”. ಗ್ರಾಮೀಣ ಪ್ರದೇಶದ ಈ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿರುವುದು ಸ್ಥಳೀಯರ ಹೆಮ್ಮೆ ಹೆಚ್ಚಿಸಿದೆ.

ಅಭಿನಂದನಾ ಸಮಾರಂಭ ಯಶಸ್ವಿ ಆಯೋಜನೆ :

ಸಂಸ್ಥೆಯ ಧ್ಯಾನ ಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶ್ ಪಾಟೀಲ್ ಅವರು ಸ್ವಾಗತಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಜಗದೀಶ್ ಮೇಟಿ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಸಂಸ್ಥೆಯ ಕ್ರೀಡಾ ಸಾಧನೆಗಳ ಬಗ್ಗೆ ವಿವರಿಸಿದರು.

ಈ ಸುದ್ದಿಯನ್ನು ಓದಿ : ಕೈಕೊಟ್ಟ ಮುಂಗಾರು: ದೇಶದಲ್ಲಿ 64% ಮಳೆ ಕೊರತೆ, ಬೆಚ್ಚಿಬೀಳಿಸಿದ ಉಪಗ್ರಹ ಚಿತ್ರ.

SPOCO’S ಸಂಸ್ಥಾಪಕರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ :

ಸಂಸ್ಥೆಯ ಸಂಸ್ಥಾಪಕರಾದ “ಎಸ್.ಎಂ. ಕಲೂತಿ” ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ತಂದಿರುವುದು ಸಂಸ್ಥೆಗೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಸತ್ಕಾರ :

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ರಾಜೇಶ್ವರಿ ಯಾದವಾಡ ಅವರು ಅಂತರರಾಷ್ಟ್ರೀಯ ಮಟ್ಟದ ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಸಂಸ್ಥೆ ಹಾಗೂ ದೇಶಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸತ್ಕರಿಸಿ ಅಭಿನಂದಿಸಿದರು.

ವಿದ್ಯಾರ್ಥಿಗಳ ಈ ಸಾಧನೆ ಇತರರಿಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ : ತಂಬಾಕು ಸೇವನೆಯಿಂದ ವರ್ಷಕ್ಕೆ 13 ಲಕ್ಷ ಸಾವು; ಚಿಕ್ಕೋಡಿಯಲ್ಲಿ ಜಾಗೃತಿ ರ‍್ಯಾಲಿ.

ಇದೇ ಸಂದರ್ಭದಲ್ಲಿ ಈ ಯಶಸ್ಸಿಗೆ ಪ್ರಮುಖ ಕಾರಣಕರ್ತರಾಗಿದ್ದ ಅಟ್ಯಾ ಪಟ್ಯಾ ತರಬೇತುದಾರ ಎಲ್.ಸಿ. ಲಮಾಣಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಜೊತೆಗೆ ಭಾರತ ತಂಡದ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ ಉಳುವಿಶ್ ಲಮಾಣಿ ಹಾಗೂ ತಂಡದ ಪ್ರಮುಖ ಸದಸ್ಯರಾಗಿ ಗಮನಾರ್ಹ ಪ್ರದರ್ಶನ ನೀಡಿದ ಶಶಾಂಕ್ ಹುರುಳಿ ಅವರನ್ನೂ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

ಹಲವು ಗಣ್ಯರ ಉಪಸ್ಥಿತಿ :

ಈ ಹೆಮ್ಮೆಯ ಸಮಾರಂಭದಲ್ಲಿ SPOCO’S ದ ನಿರ್ದೇಶಕರುಗಳಾದ ಶಿವಪ್ಪ ನವರಕ್ಕಿ, ಸಂಗಪ್ಪ ಅಡಗಿಮನಿ, ಎಂ. ಎಚ್. ಹೊನ್ನನಾಯ್ಕರ್, ಜಗದೀಶ್ ಮುರಗೋಡ್, ಸಿಬಿಎಸ್ಸಿ (CBSE) ವಿಭಾಗದ ಪ್ರಾಚಾರ್ಯರಾದ ರಾಬಿ ಎ. ಕೆ., ಉಪನ್ಯಾಸಕರು, ವಿವಿಧ ಕ್ರೀಡಾ ತರಬೇತುದಾರರು, ವಸತಿ ನಿಲಯದ ನಿಲಯ ಪಾಲಕರು ಹಾಗೂ ಸಂಸ್ಥೆಯ ಹಿರಿಯರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ

ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಶಿವಾನಂದ ತೋರಣಗಟ್ಟಿ ನಿರೂಪಣೆ ಮಾಡಿದ್ದು, ಕೊನೆಯಲ್ಲಿ ಐ.ಎಸ್. ಸೂಳೇಭಾವಿ ವಂದನಾರ್ಪಣೆ ಸಲ್ಲಿಸಿದರು.

ಒಟ್ಟಾರೆ, ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ SPOCO’S ದಲ್ಲಿ ನಡೆದ ಈ ಸಮಾರಂಭ ಯುವ ಕ್ರೀಡಾಪಟುಗಳಿಗೆ ಹೊಸ ಪ್ರೇರಣೆ ನೀಡುವಂತಾಯಿತು. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದರು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top