ವೈರಲ್ ವಿಡಿಯೋ : ಕೆಲವೊಮ್ಮೆ ಸಣ್ಣ ನಿರ್ಲಕ್ಷ್ಯವು ಪ್ರಾಣಾಪಾಯ ತಂದೊಡ್ಡಬಲ್ಲದು ಎನ್ನುವುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಸಿಕ್ಕಿದೆ. ಓರ್ವ 25 ವರ್ಷದ ಯುವಕ ಸ್ವಿಮ್ಮಿಂಗ್ ಪೂಲ್‌ನಲ್ಲಿ ನೀರಿನ ಆಳವನ್ನು ಅಂದಾಜಿಸದೆ ಜಿಗಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ.
ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿ ಮೋಜು-ಮಸ್ತಿ ಮಾಡುವುದು ಯುವಕರಲ್ಲಿ ಸಾಮಾನ್ಯ. ಆದರೆ ಕೆಲವೊಮ್ಮೆ ಇಂತಹ ಉತ್ಸಾಹದಲ್ಲಿ ಮಾಡುವ ಒಂದು ಸಣ್ಣ ತಪ್ಪು ಕೂಡ ಜೀವಕ್ಕೆ ಮಾರಕವಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಈ ದಾರುಣ ಘಟನೆ ಉದಾಹರಣೆಯಾಗಿದೆ.
25 ವರ್ಷದ ಯುವಕನೊಬ್ಬ ಸ್ವಿಮ್ಮಿಂಗ್ ಪೂಲ್‌ನಲ್ಲಿ ನೀರಿನ ಆಳವನ್ನು ಸರಿಯಾಗಿ ಅಂದಾಜಿಸದೇ ಎತ್ತರದಿಂದ ಡೈವ್ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಈ ದುರ್ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಸಿಗರಿಗೆ ಎಚ್ಚರಿಕೆಯ ಸಂದೇಶವಾಗಿ ರವಾನಿಸಿದೆ.
ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಮಾಲ್ವನ್ ತಾಲೂಕಿನ ವೈರಿ ಗ್ರಾಮದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ಯುವಕನನ್ನು ಸಾಂಗ್ಲಿ ಜಿಲ್ಲೆಯ ನಿವಾಸಿ ಶ್ರೇಣಿಕ್ ಟಕ್ಲೆ (25) ಎಂದು ಗುರುತಿಸಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ :
https://www.instagram.com/reel/DaFIkffou_N/?utm_source=ig_embed&ig_rid=AsM4an3mbDV_RmePbt6qn2y
ವಾರಾಂತ್ಯದ ರಜೆ ಕಳೆಯಲು ಯುವಕ ತನ್ನ ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ಬಂದಿದ್ದನು. ಈ ವೇಳೆ ಯುವಕರು ಈಜುಕೊಳದ ಬಳಿ ಡಾನ್ಸ್ ಮಾಡುತ್ತ ಖುಷಿ-ಖುಷಿಯಾಗಿ ಸಮಯ ಕಳೆಯುತ್ತಿದ್ದರೆ, ಇನ್ನು ಕೆಲವರು ನೀರಿನಲ್ಲಿ ಆಟವಾಡುತ್ತಿದ್ದರು.
ಈ ವೇಳೆ ಯುವಕ ಶ್ರೇಣಿಕ್ ಸ್ವಿಮ್ಮಿಂಗ್ ಪೂಲ್‌ಗೆ ಮೇಲಿನಿಂದ ಡೈವ್ ಮಾಡಲು ಸುಮಾರು 10 ರಿಂದ 15 ಅಡಿ ಕಲ್ಲಿನ ಕಟ್ಟೆಯ ಮೇಲಕ್ಕೆ ಹೋಗಿದ್ದಾನೆ. ಆದರೆ ಆತ ನೀರಿಗೆ ಹಾರಲು ಇಚ್ಚಿಸಿದ್ದ ಸ್ಥಳದಲ್ಲಿ ನೀರಿನ ಆಳ ಬಹಳ ಕಡಿಮೆ ಇತ್ತು ಎಂಬುದು ಆತನ ಗಮನಕ್ಕೆ ಇದ್ದಿರಲಿಲ್ಲ. ಹೀಗಾಗಿ ಆತ ಎತ್ತರದಿಂದ ನೇರವಾಗಿ ನೀರಿಗೆ ಹಾರಿದ್ದಾನೆ.
ಈ ಸುದ್ದಿ ಓದಿ : ದಿನಕ್ಕೆ 4-5 ಕಪ್ ಚಹಾ ಕುಡಿಯುತ್ತೀರಾ? ಕೇವಲ 30 ದಿನ ಬಿಡಿ, ದೇಹದಲ್ಲಿ ಆಗುವ ಬದಲಾವಣೆ ನೋಡಿ!
ಯುವಕ ನೇರವಾಗಿ ನೀರಿಗೆ ಹಾರಿದ ಕ್ಷಣವೇ ಆತನ ತಲೆ ಈಜುಕೊಳದ ತಳಭಾಗಕ್ಕೆ ಅತ್ಯಂತ ವೇಗವಾಗಿ ಅಪ್ಪಳಿಸಿದ್ದು, ಅದರ ಪರಿಣಾಮ ತೀವ್ರ ಗಾಯಗೊಂಡ ಆತ ಅಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆಗ ನೀರಿನಿಂದ ಮೇಲಕ್ಕೆ ಬರದೇ ಇದ್ದಾಗ ಸ್ನೇಹಿತರು ಗಾಬರಿಯಾಗಿ ಕೂಡಲೇ ಆತನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ವೈದ್ಯರು ಪರೀಕ್ಷಿಸಿದಾಗ ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಘಟನೆ ಅಲ್ಲಿದ್ದವರಲ್ಲಿ ಆತಂಕ ಮೂಡಿಸಿದ್ದು, ಕ್ಷಣಾರ್ಧದಲ್ಲಿ ಮೋಜು ಮಸ್ತಿಯಲ್ಲಿದ್ದ ಸಂತೋಷದ ವಾತಾವರಣ ಶೋಕವಾಗಿ ಮಾರ್ಪಟ್ಟಿದೆ. ಈ ಮೋಜು ಮಸ್ತಿಯಲ್ಲಿದ್ದ ಸಂತೋಷದ ಎಲ್ಲ ಘಟನೆಯನ್ನು ಓರ್ವ ಯುವಕ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.
ತಜ್ಞರ ಪ್ರಕಾರ, ಸ್ವಿಮ್ಮಿಂಗ್ ಪೂಲ್ ಅಥವಾ ಜಲಾಶಯಗಳಲ್ಲಿ ಡೈವ್ ಮಾಡುವ ಮೊದಲು ನೀರಿನ ಆಳ, ಸುರಕ್ಷತಾ ಕ್ರಮಗಳು ಹಾಗೂ ಪರಿಸ್ಥಿತಿ ಪರಿಶೀಲಿಸುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ಕ್ಷಣಿಕ ಸಾಹಸ ಜೀವವನ್ನೇ ಕಸಿದುಕೊಳ್ಳಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಇದನ್ನು ಓದಿ : ಕುಡಿದ ಮತ್ತಿನಲ್ಲಿ 11 ಸಾವಿರ ವೋಲ್ಟ್ ವಿದ್ಯುತ್ ತಂತಿ ಮೇಲೆ ಮಲಗಿದ ವ್ಯಕ್ತಿ; ವಿಡಿಯೋ ವೈರಲ್.
ಈ ಘಟನೆ ಪ್ರವಾಸಕ್ಕೆ ತೆರಳುವ ಯುವಕರಿಗೆ ದೊಡ್ಡ ಎಚ್ಚರಿಕೆಯ ಸಂದೇಶ ನೀಡಿದ್ದು, ಮೋಜು-ಮಸ್ತಿಯ ನಡುವೆಯೂ ಸುರಕ್ಷತೆಯನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂಬ ಚರ್ಚೆಗೆ ಕಾರಣವಾಗಿದೆ.
ಸ್ವಿಮ್ಮಿಂಗ್ ಪೂಲ್‌ನಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು :
- ನೀರಿನ ಆಳ ಪರಿಶೀಲಿಸಿ : ಪೂಲ್‌ಗೆ ಇಳಿಯುವ ಅಥವಾ ಡೈವ್ ಮಾಡುವ ಮುನ್ನ ನೀರಿನ ಆಳ (Depth) ಎಷ್ಟು ಇದೆ ಎಂಬುದನ್ನು ಕಡ್ಡಾಯವಾಗಿ ಗಮನಿಸಬೇಕು.
- ಎತ್ತರದಿಂದ ಡೈವ್ ಮಾಡಬೇಡಿ : ಪೂಲ್ ಸುರಕ್ಷಿತವಾಗಿ ವಿನ್ಯಾಸಗೊಳಿಸದಿದ್ದರೆ ಮೇಲಿನಿಂದ ಜಿಗಿಯುವುದು ತಲೆ ಅಥವಾ ಬೆನ್ನಿಗೆ ಗಂಭೀರ ಗಾಯ ಉಂಟುಮಾಡಬಹುದು.
- ಜಾರುವ ಭಾಗಗಳಲ್ಲಿ ಓಡಾಡಬೇಡಿ : ಪೂಲ್ ಸುತ್ತಲಿನ ನೆಲ ಸಾಮಾನ್ಯವಾಗಿ ಒದ್ದೆಯಾಗಿರುತ್ತದೆ. ಓಡಿದರೆ ಜಾರಿ ಬಿದ್ದು ಗಾಯವಾಗುವ ಸಾಧ್ಯತೆ ಹೆಚ್ಚು.
- ಮದ್ಯ ಅಥವಾ ನಶೆಯಲ್ಲಿದ್ದಾಗ ಈಜಬೇಡಿ : ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಈಜುವುದು ನಿಯಂತ್ರಣ ಕಳೆದುಕೊಳ್ಳುವ ಅಪಾಯ ಹೆಚ್ಚಿಸುತ್ತದೆ.
- ಮಕ್ಕಳ ಮೇಲೆ ನಿರಂತರ ನಿಗಾ ಇರಲಿ : ಮಕ್ಕಳು ಪೂಲ್‌ನಲ್ಲಿ ಇದ್ದರೆ ದೊಡ್ಡವರು ಕಡ್ಡಾಯವಾಗಿ ಹತ್ತಿರದಲ್ಲೇ ಗಮನ ಹರಿಸಬೇಕು.
ಈ ಸುದ್ದಿಯನ್ನು ಓದಿ : ಲೊಂಡಾ–ಕ್ಯಾಸಲ್‌ರಾಕ್ ಕಾಮಗಾರಿ ಹಿನ್ನೆಲೆ: ಮಿರಜ್–ಕ್ಯಾಸಲ್‌ರಾಕ್ ಎಕ್ಸ್‌ಪ್ರೆಸ್ ಭಾಗಶಃ ರದ್ದತಿ ವಿಸ್ತರಣೆ.
- ಒಬ್ಬರೇ ಈಜಲು ಹೋಗಬೇಡಿ : ಸಾಧ್ಯವಾದಷ್ಟು ಸ್ನೇಹಿತರು ಅಥವಾ ಲೈಫ್‌ಗಾರ್ಡ್ ಇರುವ ಸ್ಥಳದಲ್ಲೇ ಈಜುವುದು ಸುರಕ್ಷಿತ.
- ಸುರಕ್ಷತಾ ಸಾಧನ ಬಳಸಿ : ಈಜು ಬಾರದವರು ಲೈಫ್ ಜಾಕೆಟ್, ಟ್ಯೂಬ್ ಅಥವಾ ಫ್ಲೋಟರ್ ಬಳಸುವುದು ಉತ್ತಮ.
- ಆಳ ಕಡಿಮೆ ಇರುವ ಕಡೆ ಸಾಹಸ ಮಾಡಬೇಡಿ : ನೀರಿನ ಮಟ್ಟ ಕಡಿಮೆ ಇದ್ದರೆ ಜಿಗಿತ ಅಥವಾ ಸ್ಟಂಟ್‌ಗಳು ಪ್ರಾಣಾಪಾಯಕ್ಕೆ ಕಾರಣವಾಗಬಹುದು.
- ದೇಹ ಅಸ್ವಸ್ಥವಾಗಿದ್ದರೆ ನೀರಿಗೆ ಇಳಿಯಬೇಡಿ : ತಲೆ ಸುತ್ತುವುದು, ದೌರ್ಬಲ್ಯ ಅಥವಾ ಆರೋಗ್ಯ ಸಮಸ್ಯೆ ಇದ್ದರೆ ಪೂಲ್ ಬಳಸಬಾರದು.
- ಪೂಲ್ ನಿಯಮಗಳನ್ನು ಪಾಲಿಸಿ : ರೆಸಾರ್ಟ್ ಅಥವಾ ಕ್ಲಬ್ ನೀಡಿರುವ ಎಲ್ಲಾ ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
“ಒಂದು ಕ್ಷಣದ ನಿರ್ಲಕ್ಷ್ಯ, ಜೀವನಪೂರ್ತಿ ನೋವಿಗೆ ಕಾರಣವಾಗಬಹುದು, ಸುರಕ್ಷತೆ ನಿಮ್ಮ ಕೈಯಲ್ಲಿದೆ”
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Disclaimer: ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮಾಹಿತಿ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅತ್ಯಂತ ಅಗತ್ಯ.







