ಡೆಸ್ಕ್ : ಹೊಲದಲ್ಲಿ ದಿನವಿಡೀ ಶ್ರಮಪಟ್ಟು ದುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಮರದ ನೆರಳಿನಲ್ಲಿ ಮಲಗಿದ್ದ ರೈತನ ಶರ್ಟ್‌ನೊಳಗೆ ನುಗ್ಗಿದ ವಿಷಕಾರಿ ನಾಗರಹಾವು, ಮುಂದೆ ನಡೆದದ್ದು ನೋಡಿದರೆ ಮೈ ಜುಮ್ಮೆನಿಸುತ್ತದೆ. ಬೆಚ್ಚಿಬೀಳಿಸುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.!
ವಿಶ್ರಾಂತಿ ಪಡೆಯಲೆಂದು ಮರದ ನೆರಳಿನಲ್ಲಿ ಮಲಗಿದ್ದ ರೈತನೊಬ್ಬನಿಗೆ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವ ಎದುರಾಗಿದೆ. ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಪ್ರಾಣಾಪಾಯ ಉಂಟುಮಾಡಬಲ್ಲ ವಿಷಕಾರಿ ನಾಗರಹಾವೊಂದು ಆತನ ಶರ್ಟ್‌ನೊಳಗೆ ನುಗ್ಗಿ ಹೊಟ್ಟೆ ಭಾಗದಲ್ಲಿ ಸುತ್ತಿಕೊಂಡು ಮಲಗಿದೆ.
ಸಣ್ಣದೊಂದು ಎಡವಟ್ಟು ನಡೆದರೂ ವಿಷಕಾರಿ ನಾಗರಹಾವು ಕಚ್ಚುವ ಸಾಧ್ಯತೆ ಇದ್ದರೂ ಸಹ ರೈತ ತಾಳ್ಮೆ, ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ವರ್ತಿಸಿದ್ದರಿಂದ ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸದ್ಯ ರೈತನ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಜೊತೆಗೆ, ಕೃಷಿ ಕೆಲಸದ ವೇಳೆ ರೈತರು ಎದುರಿಸಬೇಕಾಗುವ ಅಪಾಯಗಳ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
ವಿಶ್ರಾಂತಿ ವೇಳೆ ಸಂಭವಿಸಿದ ಘಟನೆ :
ಮಾಹಿತಿಯ ಪ್ರಕಾರ, ರೈತನು ದಿನವಿಡೀ ಹೊಲದಲ್ಲಿ ದುಡಿದ ಬಳಿಕ ಆಯಾಸ ನಿವಾರಿಸಿಕೊಳ್ಳಲು ಮರದ ನೆರಳಿನಲ್ಲಿ ಮಲಗಿದ್ದನು. ಇದೇ ವೇಳೆ ಸಮೀಪದಲ್ಲಿದ್ದ ವಿಷಕಾರಿ ನಾಗರಹಾವೊಂದು ನಿಧಾನವಾಗಿ ಹೇಗೋ ಆತನ ಶರ್ಟ್‌ನೊಳಗೆ ನುಗ್ಗಿ, ಸ್ವಲ್ಪ ಸಮಯದಲ್ಲೇ ಹಾವು ರೈತನ ಹೊಟ್ಟೆ ಭಾಗದಲ್ಲಿ ಬೆಚ್ಚಗೆ ಸುತ್ತಿಕೊಂಡು ಮಲಗಿದೆ.
ಈ ಸುದ್ದಿ ಓದಿ : ಆಷಾಢ ಏಕಾದಶಿ ವಿಶೇಷ ರೈಲು: ಧಾರವಾಡ–ಪಂಡರಪುರ ನಡುವೆ 6 ದಿನ ಸಂಚಾರ; ಭಕ್ತರಿಗೆ ಸಿಹಿಸುದ್ದಿ.!
ಆರಂಭದಲ್ಲಿ ಏನಾಗಿದೆ ಎಂಬುದು ರೈತನಿಗೆ ತಿಳಿದಿರಲಿಲ್ಲ, ಆದರೆ ನಂತರ ಶರ್ಟ್‌ನೊಳಗೆ ಏನೋ ಚಲನವಲನವಾಗುತ್ತಿರುವುದನ್ನು ಅರಿತಾಗ ಪರಿಸ್ಥಿತಿಯ ಗಂಭೀರತೆ ತಿಳಿದುಬಂದಿದೆ. ಯಾವುದೇ ಆತಂಕ ತೋರಿಸದೆ ಆತ ಸಂಪೂರ್ಣ ಶಾಂತವಾಗಿ ಮಲಗಿಯೇ ಬಿಟ್ಟಿದ್ದಾನೆ.
ಸ್ವಲ್ಪ ಅಲ್ಲಾಡಿದರೂ ಜೀವಕ್ಕೆ ಅಪಾಯ :
ನಾಗರಹಾವು ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಇಂತಹ ಹಾವು ಕ್ಷಣಾರ್ಧದಲ್ಲಿ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಹೊಟ್ಟೆ ಮೇಲೆ ಹಾವೂ ಸುತ್ತಿಕೊಂಡು ಮಲಗಿದ್ದನ್ನು ಕಂಡರೆ ಯಾರೇ ಆಗಿದ್ದರೂ ಸಹ ತಕ್ಷಣ ಭಯದಿಂದ ಎದ್ದು ಓಡಲು ಅಥವಾ ಕೈಯಿಂದ ಹಾವನ್ನು ಹೊರತೆಗೆಯಲು ಯತ್ನಿಸುತ್ತಿದ್ದರೂ.
ಆದರೆ ಆ ರೈತ ಮಾತ್ರ ಇದಕ್ಕೆ ಯಾವುದೇ ಅವಕಾಶ ಕೊಡದೆ ವಿಷಕಾರಿ ನಾಗರಹಾವು ಮೈಮೇಲಿದ್ದರೂ ಸಂಪೂರ್ಣ ಶಾಂತವಾಗಿ ಅದೇ ಸ್ಥಳದಲ್ಲಿ ಸ್ವಲ್ಪವೂ ಅಲುಗಾಡದೇ ತಾಳ್ಮೆಯಿಂದ ಮಲಗಿಯೇ ಬಿಟ್ಟು ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ.

ಇದೇ ವೇಳೆ ಸ್ಥಳದಲ್ಲಿದ್ದ ಇತರರು ಸಹ ಯಾವುದೇ ಆತುರಪಡದೆ ಅತ್ಯಂತ ಜಾಗರೂಕತೆಯಿಂದ ಶರ್ಟ್‌ನೊಳಗಿದ್ದ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಇದರಿಂದ ರೈತ ಯಾವುದೇ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವೈರಲ್ ಆದ ವಿಡಿಯೋ
ಈ ಸಂಪೂರ್ಣ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನು ಓದಿ : ಹೋಟೆಲ್ ರೂಮ್‌ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಪತಿ; ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ, ವಿಡಿಯೋ ವೈರಲ್.
ಶರ್ಟ್‌ನೊಳಗೆ ಹಾವು ಇದ್ದರೂ ಯಾವುದೇ ಗಾಬರಿಯಿಲ್ಲದೆ ಶಾಂತವಾಗಿ ಮಲಗಿರುವ ರೈತನ ಧೈರ್ಯವನ್ನು ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಸಮಯಪ್ರಜ್ಞೆಯ ಅತ್ಯುತ್ತಮ ಉದಾಹರಣೆ ಎಂದು ಕೊಂಡಾಡಿದ್ದಾರೆ.
ಮಲಗಿದ್ದ ರೈತನ ಶರ್ಟ್‌ನೊಳಗೆ ನುಗ್ಗಿದ ವಿಷಕಾರಿ ನಾಗರಹಾವು; ವಿಡಿಯೋ :
किसान सो रहा था शर्ट में कोबरा सर्प घूस गया , खेती किसानी आसान काम नही है ।
अन्नदाता की जय बनी रहे जो सभी की भूख मिटाता है सभी के पेट भरता है अपने अनाज की नाम मात्र कीमत लेकर । pic.twitter.com/jSQMq3aRIE— Hemlata Meena (@hemlatajk) July 22, 2026
Courtesy : Social Media / Twitter
ಈ ಸುದ್ದಿಯನ್ನು ಓದಿ : ನೀರಿನಲ್ಲಿ ಹಾವು ಕಚ್ಚುವುದಿಲ್ಲ ಅನ್ನೋದು ನಿಜವೇ? ನಿಜಾಂಶ ತಿಳಿದರೆ ನೀವು ಕೂಡ ಬೆಚ್ಚಿಬೀಳುತ್ತೀರಿ..!
ಕೃಷಿ ಕೆಲಸದಲ್ಲಿ ಎಚ್ಚರಿಕೆ ಅಗತ್ಯ :
ತಜ್ಞರ ಪ್ರಕಾರ, ಹೊಲಗಳು, ಮರಗಳ ನೆರಳು, ಹುಲ್ಲಿನ ಪ್ರದೇಶಗಳು ಹಾಗೂ ಬೆಳೆಗಳ ನಡುವೆ ಹಾವುಗಳು ಆಶ್ರಯ ಪಡೆಯುವುದು ಸಾಮಾನ್ಯ.
ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ರೈತರು ಹೊಲದಲ್ಲಿ ವಿಶ್ರಾಂತಿ ಪಡೆಯುವ ಮುನ್ನ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸುವುದು ಉತ್ತಮ. ಪಾದರಕ್ಷೆ, ಕೈಗವಸು ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರಿಂದ ಹಾವುಗಳ ಅಪಾಯವನ್ನು ಕೆಲಮಟ್ಟಿಗೆ ಕಡಿಮೆ ಮಾಡಬಹುದು.
ಈ ಘಟನೆ ಮತ್ತೊಮ್ಮೆ ಕೃಷಿ ಕೇವಲ ದುಡಿಮೆಯ ಕೆಲಸವಲ್ಲ, ಪ್ರತಿದಿನವೂ ಪ್ರಕೃತಿ ಮತ್ತು ವನ್ಯಜೀವಿಗಳ ನಡುವೆಯೇ ಸಾಗುವ ಸವಾಲಿನ ಬದುಕು ಎಂಬುದನ್ನು ನೆನಪಿಸಿದೆ. ರೈತನ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಈ ಬಾರಿ ದೊಡ್ಡ ಅನಾಹುತ ತಪ್ಪಿದರೂ, ಇಂತಹ ಸಂದರ್ಭಗಳಲ್ಲಿ ಆತುರದ ನಿರ್ಧಾರ ಕೈಗೊಳ್ಳದೆ ತಕ್ಷಣ ನೆರವು ಪಡೆಯುವುದು ಅತ್ಯಂತ ಮುಖ್ಯ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ವಿಷಕಾರಿ ನಾಗರಹಾವು ಕಂಡಾಗ ಅಥವಾ ಹಾವು ದೇಹದ ಮೇಲೆ ಇದ್ದರೆ ಅದನ್ನು ಹಿಡಿಯಲು ಅಥವಾ ಓಡಿಸಲು ಪ್ರಯತ್ನಿಸಬೇಡಿ. ಸಾಧ್ಯವಾದಷ್ಟು ಶಾಂತವಾಗಿದ್ದು, ಸ್ಥಳೀಯ ಹಾವು ರಕ್ಷಣಾ ಸಿಬ್ಬಂದಿ ಅಥವಾ ತುರ್ತು ಸೇವೆಗಳ ನೆರವು ಪಡೆಯುವುದು ಸುರಕ್ಷಿತ ಮಾರ್ಗವಾಗಿದೆ.







