ಮೂರ್ಖತನದಿಂದ ರೈಲು ಹಳಿ ದಾಟಲು ಹೋದ ಸೈಕಲ್ ಸವಾರನ ಜೀವ ಉಳಿಸಿದ ಗೋವು!

ಸೈಕಲ್ ಸವಾರನ ಜೀವ ಉಳಿಸಿದ ಗೋವು

ಡೆಸ್ಕ್‌ : ಗೋ ಮಾತೆಯಾದ ಗೋವು ದೇವರಂತೆ ಓಡಿ ಬಂದು ಮೂರ್ಖತನದಿಂದ ರೈಲು ಹಳಿ ದಾಟಲು ಹೋಗಿ ಪ್ರಾಣಾಪಾಯದಲ್ಲಿದ್ದ ಓರ್ವ ಸೈಕಲ್‌ ಸವಾರನ ಪ್ರಾಣ ಉಳಿಸಿದ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಭಲೇ ಭಲೇ ಎಂದಿದ್ದಾರೆ.

ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಹೀಗೆ ವೈರಲ್‌ ಆದ ವಿಡಿಯೋಗಳಲ್ಲಿ ಹಲವಾರು ಪ್ರಾಣಿ – ಪಕ್ಷಿಗಳ ವಿಡಿಯೋಗಳಾಗಿರುತ್ತವೆ. ಅವುಗಳಲ್ಲಿ ಕೆಲವು ಮನರಂಜನೆ ನೀಡಿದರೆ, ಇನ್ನೂ ಕೆಲವು ಜೀವನದ ಮಹತ್ವದ ಪಾಠಗಳನ್ನು ಕಲಿಸುತ್ತವೆ.

ಇದೀಗ ಅಂತಹದ್ದೇ ಒಂದು ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ರೈಲು ಹಳಿ ದಾಟಲು ಮುಂದಾದ ವ್ಯಕ್ತಿಯೊಬ್ಬನ ಪ್ರಾಣವನ್ನು ಗೋವು ಹೇಗೆ ಉಳಿಸಿತು ಎಂಬ ದೃಶ್ಯವು ಎಲ್ಲರನ್ನು ಅಚ್ಚರಿಗೊಳಿಸಿದೆ.

ಇಲ್ಲಿದೆ ಗೋವು ರಕ್ಷಿಸಿದ ಸೈಕಲ್‌ ಸವಾರನ ವಿಡಿಯೋ :

Courtesy : Social Media / Twitter

ವೈರಲ್‌ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ, ರೈಲ್ವೆ ಕ್ರಾಸಿಂಗ್ ಸಮೀಪ ಸೈಕಲ್ ಸವಾರನೊಬ್ಬ ರೈಲು ಹಳಿ ದಾಟಲು ಮುಂದಾಗಿರುವುದು ಕಾಣಿಸುತ್ತದೆ. ಅದೇ ಸಮಯದಲ್ಲಿ ವೇಗವಾಗಿ ರೈಲು ಬರುತ್ತಿರುವುದು ಸ್ಪಷ್ಟವಾಗಿದ್ದರೂ ಸಹ, ಆತ ಹಳಿ ದಾಟಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಗೋಚರಿಸುತ್ತದೆ.

ಅದೇ ವೇಳೆ ಸೈಕಲ್ ಸವಾರನ ವಿರುದ್ಧ ದಿಕ್ಕಿನಿಂದ ಬಂದ ಗೋವು ಆತನ ದಾರಿಗೆ ಅಡ್ಡ ನಿಂತು ಮುಂದೆ ಸಾಗದಂತೆ ತಡೆಯುತ್ತದೆ. ಅಷ್ಟೆ ಅಲ್ಲ ಸೈಕಲ್ ಸವಾರನು ಮುಂದೆ ಹೋಗಲು ಪ್ರಯತ್ನಿಸಿದಾಗಲೂ ಕೂಡ ಗೋವು ತನ್ನ ಕೊಂಬುಗಳಿಂದ  ಆತನನ್ನು ಹಿಂದಕ್ಕೆ ತಳ್ಳುವುದನ್ನು ಸಹ ದೃಶ್ಯದಲ್ಲಿ ಕಾಣಬಹುದಾಗಿದೆ.

ಗೋವು ತನ್ನ ಕೊಂಬುಗಳಿಂದ ಆತನನ್ನು ಹಿಂದಕ್ಕೆ ತಳ್ಳಿದ ಕೆಲವೇ ಕ್ಷಣಗಳಲ್ಲಿ ವೇಗವಾಗಿ ಬಂದ ರೈಲು ಹಳಿಗಳ ಮೂಲಕ ಸಾಗಿ ಮುಂದೆ ದಾಟಿ ಹೋಗುತ್ತದೆ. ಆದರೆ, ಈ ವಿಡಿಯೋ ಎಲ್ಲಿ? ಯಾರು? ಎಂದು ಮಾಡಿದರು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಏನಂದ್ರು ನೆಟ್ಟಿಗರು :

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಈ ದೃಶ್ಯವನ್ನು ನೋಡಿದ ಹಲವಾರು ಜನರು ಪ್ರತಿಕ್ರಯಿಸಿದ್ದಾರೆ. ಅದರಲ್ಲಿ ಕೆಲವರು, ಗೋವು ಅಡ್ಡ ಬಂದಿರದಿದ್ದರೆ ದೊಡ್ಡ ದುರಂತವೇ ಸಂಭವಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರೆಕ್ಷಣದ ಅಜಾಗರೂಕತೆ ಕೆಲವೊಮ್ಮೆ ಜೀವವನ್ನೇ ಕಸಿದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

“ಗೋವು ದೇವರ ರೂಪದಲ್ಲಿ ಬಂದು ಆ ವ್ಯಕ್ತಿಯ ಜೀವ ಉಳಿಸಿತು” ಎಂದು ಹಲವರು ಕಾಮೆಂಟ್ ಮಾಡಿದರೇ, ಇನ್ನೂ ಕೆಲವರು, ಪ್ರಾಣಿಗಳಲ್ಲೂ ಅಪಾಯವನ್ನು ಗುರುತಿಸುವ ಅದ್ಭುತ ಸಾಮರ್ಥ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : ಬ್ಯಾಗ್ ಕದಿಯಲು ಬಂದ ಖದೀಮರಿಗೆ ಶಾಕ್ ಕೊಟ್ಟ ಮಹಿಳೆ; ವಿಡಿಯೋ ವೈರಲ್.

ಈ ಘಟನೆ ನಿಜಕ್ಕೂ ಮಾನವರ ಅಜಾಗರೂಕತೆ ಮತ್ತು ಸುರಕ್ಷತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುವಂತಿದೆ. ಯಾವುದೇ ಸಂದರ್ಭದಲ್ಲೂ ರೈಲು ಹಳಿ ದಾಟುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂಬ ಸಂದೇಶವನ್ನು ಈ ವೈರಲ್ ವಿಡಿಯೋ ಸಾರುತ್ತಿದೆ.

ಸುರಕ್ಷತಾ ನಿಯಮ :

  • ಯಾರೆ ಆಗಲಿ ರೈಲು ಹಳಿ ದಾಟುವ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.
  • ರೈಲು ಸಮೀಪಿಸುತ್ತಿರುವಾಗ ಅಥವಾ ಎಚ್ಚರಿಕೆ ಸಿಗ್ನಲ್ ಕಂಡುಬಂದಾಗ ಹಳಿ ದಾಟಲು ಯತ್ನಿಸುವುದು ಅಪಾಯಕಾರಿ.
  • ಕೆಲವೇ ಕ್ಷಣಗಳ ಆತುರ ಅಥವಾ ನಿರ್ಲಕ್ಷ್ಯವು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ರೈಲ್ವೆ ಗೇಟ್ ತೆರೆಯುವವರೆಗೆ ಅಥವಾ ಸಂಪೂರ್ಣ ಸುರಕ್ಷತೆ ಖಚಿತವಾಗುವವರೆಗೆ ಕಾಯುವುದು ಜೀವ ರಕ್ಷಣೆಯ ದೃಷ್ಟಿಯಿಂದ ಅಗತ್ಯವಾಗಿದೆ.

ಆದರೂ ಕೆಲವರು ಸಮಯ ಉಳಿಸಿಕೊಳ್ಳುವ ಉದ್ದೇಶದಿಂದ ಇಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ. ಇದರ ಪರಿಣಾಮವಾಗಿ ಅನೇಕ ದುರ್ಘಟನೆಗಳು ಸಂಭವಿಸಿರುವ ಉದಾಹರಣೆಗಳಿವೆ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ


Disclaimer: ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಅದರ ಕುರಿತು ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಹಾಗೆಯೇ ಅದು ಹಸು ಅಥವಾ ಹೋರಿ ಎಂಬ ಬಗ್ಗೆ ಸಂಪೂರ್ಣ ಅಧಿಕೃತ ವಿವರಗಳನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ. ಓದುಗರು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಪರಿಶೀಲಿಸಿ ಸ್ವೀಕರಿಸುವಂತೆ ವಿನಂತಿಸಲಾಗುತ್ತದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top