ಬೆಂಗಳೂರು: ಈ ರೈಲು ಮೂಲಕ ಪ್ರಯಾಣಿಸಲು ಯೋಜನೆ ಮಾಡಿಕೊಂಡಿರುವ ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ. ಜೂನ್ 06 ರಿಂದ ಪುಣೆ-ಮಿರಜ್ ಜೋಡಿ ಮಾರ್ಗ ಕಾಮಗಾರಿಯ ಹಿನ್ನೆಲೆಯಲ್ಲಿ ಮಧ್ಯ ರೈಲ್ವೆ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಘೋಷಿಸಿದೆ.
ಈ ಬದಲಾವಣೆಗಳ ಪರಿಣಾಮ ಕರ್ನಾಟಕದಿಂದ ಸಂಚರಿಸುವ ಕೆಲವು ಪ್ರಮುಖ ರೈಲುಗಳ ಮೇಲೂ ಬೀಳಲಿದೆ.
ನೀರಾ ಯಾರ್ಡ್‌ನಲ್ಲಿ ನಡೆಯಲಿರುವ ಇಂಜಿನಿಯರಿಂಗ್ ಕಾಮಗಾರಿಯ ಕಾರಣದಿಂದ ಕೆಲವು ರೈಲುಗಳನ್ನು ನಿರ್ದಿಷ್ಟ ನಿಲ್ದಾಣಗಳಲ್ಲಿ ತಡೆಹಿಡಿಯಲಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ಭಾಗಶಃ ರದ್ದತಿ ಮಾಡಲಾಗಿದೆ.
ಈ ರೈಲುಗಳ ಸಂಚಾರದಲ್ಲಿ ಬದಲಾವಣೆ, ಭಾಗಶಃ ರದ್ದು :
ಯಾವ ರೈಲುಗಳಿಗೆ ವಿಳಂಬ?
- ಜೂನ್ 6 ಮತ್ತು 13 ರಂದು ಸಂಚರಿಸುವ 20686 ಕೆಎಸ್‌ಆರ್ ಬೆಂಗಳೂರು-ಗಾಂಧಿಧಾಮ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಲೋನಂದ್ ನಿಲ್ದಾಣದಲ್ಲಿ 25 ನಿಮಿಷ ನಿಯಂತ್ರಣಕ್ಕೆ ಒಳಗಾಗಲಿದೆ.
- ಜೂನ್ 6, 9 ಹಾಗೂ 13 ರಂದು ಹೊರಡುವ 16553 ಎಸ್‌ಎಂವಿಟಿ ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಮಿರಜ್-ಲೋನಂದ್ ವಿಭಾಗದಲ್ಲಿ ಸುಮಾರು 2 ಗಂಟೆ 30 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ.
- ಜೂನ್ 9 ರಂದು ಹೊರಡುವ 16210 ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಸಲ್ಪಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.
- ಜೂನ್ 10 ರಂದು ಸಂಚರಿಸುವ 20694 ಕೆಎಸ್‌ಆರ್ ಬೆಂಗಳೂರು-ಜೋಧ್ಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ
- ಜೂನ್ 14 ರಂದು ಹೊರಡುವ 16534 ಕೆಎಸ್‌ಆರ್ ಬೆಂಗಳೂರು-ಜೋಧ್ಪುರ ಎಕ್ಸ್‌ಪ್ರೆಸ್ ರೈಲುಗಳು ಸಲ್ಪಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿವೆ.
ಇದನ್ನು ಓದಿ : ವೈರಲ್ ಆಯಿತು ರಜನಿಕಾಂತ್ ಹಳೆಯ ಕಂಡಕ್ಟರ್ ಐಡಿ ಕಾರ್ಡ್; ₹275 ಸಂಬಳದಿಂದ ‘ತಲೈವಾ’ವರೆಗೆ ಅದ್ಭುತ ಪಯಣ.
ವಂದೇ ಭಾರತ್ ರೈಲುಗೆ ಭಾಗಶಃ ರದ್ದತಿ :
ಜೂನ್ 19 ರಂದು ಸಂಚರಿಸುವ 20669 ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ನಿಗದಿತ ಗಮ್ಯಸ್ಥಾನವಾದ ಪುಣೆ ಬದಲಿಗೆ ಸತಾರಾ ನಿಲ್ದಾಣದಲ್ಲೇ ಪ್ರಯಾಣ ಮುಗಿಸಲಿದೆ. ಹೀಗಾಗಿ ಸತಾರಾ-ಪುಣೆ ನಡುವೆ ಈ ರೈಲು ಸಂಚರಿಸುವುದಿಲ್ಲ.
ಮಾರ್ಗ ಬದಲಾವಣೆ :
- ಜೂನ್ 24 ರಂದು ಹಜರತ್ ನಿಜಾಮುದ್ದೀನ್‌ನಿಂದ ಹೊರಡುವ 12780 ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ತನ್ನ ನಿಯಮಿತ ಮಾರ್ಗದ ಬದಲಿಗೆ ಮಿರಜ್-ದೌಂಡ್-ಕುರ್ದುವಾಡಿ ಮಾರ್ಗದ ಮೂಲಕ ಸಂಚರಿಸಲಿದೆ.
ಪ್ರಯಾಣಕ್ಕೂ ಮುನ್ನ ಪರಿಶೀಲಿಸಿ :
ರೈಲ್ವೆ ಇಲಾಖೆಯು ಪ್ರಯಾಣಿಕರು ತಮ್ಮ ರೈಲಿನ ಇತ್ತೀಚಿನ ವೇಳಾಪಟ್ಟಿ ಮತ್ತು ಸಂಚಾರ ಸ್ಥಿತಿಯನ್ನು IRCTC ಅಥವಾ ರೈಲ್ವೆಯ ಅಧಿಕೃತ ಮೂಲಗಳ ಮೂಲಕ ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ಈ ರೈಲುಗಳ ಸಂಚಾರ ಲೇಖನವು ರೈಲ್ವೆ ಇಲಾಖೆಯಿಂದ ಪ್ರಕಟಿಸಲಾದ ಮಾಹಿತಿ ಆಧರಿಸಿ ಸಿದ್ಧಪಡಿಸಲಾಗಿದೆ. ರೈಲುಗಳ ವೇಳಾಪಟ್ಟಿ, ಮಾರ್ಗ ಅಥವಾ ಸಂಚಾರ ವಿವರಗಳಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ, ಪ್ರಯಾಣಕ್ಕೂ ಮುನ್ನ ಅಧಿಕೃತ ರೈಲ್ವೆ ಮೂಲಗಳಿಂದ ಮಾಹಿತಿ ಪರಿಶೀಲಿಸುವುದು ಸೂಕ್ತ.





