ಬೆಂಗಳೂರು : ದೇಶ ಕಂಡ ಚಿತ್ರರಂಗದ ಸೂಪರ್ಸ್ಟಾರ್ಗಳಲ್ಲಿರಜನಿಕಾಂತ್ (Rajinikanth) ಒಬ್ಬರು. ಅದರಲ್ಲೂ ತಮ್ಮದೇ ಆದ ಸ್ಟೈಲ್ನಿಂದಲೇ ಜನಪ್ರಿಯರಾಗಿದ್ದ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಅಂತಹ ಅಪ್ರತಿಮ ನಟನ ಹಳೆ ಐಡಿ ಕಾರ್ಡ್ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.
ಭಾರತೀಯ ಚಿತ್ರರಂಗದ (Indian Cinema) ಸೂಪರ್ಸ್ಟಾರ್ ಆಗಿ ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿರುವ ರಜನಿಕಾಂತ್ (Rajinikanth) ಅವರ ಹಳೆಯ ದಿನಗಳ ಅಪರೂಪದ ಐಡಿ ಕಾರ್ಡ್ (ID Card) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ವೈರಲ್ ಫೋಟೋ ಅಭಿಮಾನಿಗಳಲ್ಲಿ ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದ್ದು, ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯ ಎತ್ತರಕ್ಕೆ ಏರಿದ ಅವರ ಬದುಕಿನ ಪಯಣವನ್ನು ಮತ್ತೆ ಚರ್ಚೆಗೆ ಬಂದಿದೆ.
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ರಜನಿಕಾಂತ್ ಅವರು ಬೆಂಗಳೂರಿನ ಸಾರಿಗೆ ಸಂಸ್ಥೆಯಲ್ಲಿ (Bangalore Transport Service) ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಬಹುತೇಕರಿಗೆ ತಿಳಿದಿರುವ ವಿಷಯ. ಆದರೆ ಇದೀಗ ವೈರಲ್ ಆಗಿರುವ ಅವರ ಅಂದಿನ ಅಧಿಕೃತ ಗುರುತಿನ ಚೀಟಿ ಸಾರ್ವಜನಿಕರ ಗಮನ ಸೆಳೆದಿದೆ.
‘ಶಿವಾಜಿ ರಾವ್ ಗಾಯಕ್ವಾಡ್’ ಹೆಸರಿನ ಐಡಿ ಕಾರ್ಡ್ :
ವೈರಲ್ ಆಗಿರುವ ಐಡಿ ಕಾರ್ಡ್ನಲ್ಲಿ ರಜನಿಕಾಂತ್ ಅವರ ಮೂಲ ಹೆಸರು ‘ಶಿವಾಜಿ ರಾವ್ ಗಾಯಕ್ವಾಡ್’ (Shivaji Rao Gaikwad) ಎಂದು ನಮೂದಿಸಲಾಗಿದೆ. ಅವರು ಶ್ರೀನಗರ ಡಿಪೋದಲ್ಲಿ (Srinagar Depot) ರೂಟ್ ನಂ. 10A ಬಸ್ಸಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂಬ ಮಾಹಿತಿ ಈ ಕಾರ್ಡ್ನಲ್ಲಿ ಕಾಣಿಸುತ್ತದೆ.
ವಿಶೇಷವೆಂದರೆ, 18-06-1971 ರಂದು ಬೆಂಗಳೂರು ಸಾರಿಗೆ ಸಂಸ್ಥೆಗೆ ಸೇರಿದ ವೇಳೆ ಅವರ ಮಾಸಿಕ ಸಂಬಳ ಕೇವಲ ₹275 ಆಗಿತ್ತು ಎನ್ನುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಸ್ಟೈಲ್ನಿಂದಲೇ ಜನಪ್ರಿಯರಾಗಿದ್ದ ರಜನಿ :
ಅಂದಿನ ದಿನಗಳಲ್ಲಿ ಬಸ್ಸಿನಲ್ಲಿ ಟಿಕೆಟ್ ನೀಡುವ ವೇಳೆ ಶಿವಾಜಿ ರಾವ್ ತೋರಿಸುತ್ತಿದ್ದ ವಿಶಿಷ್ಟ ಸ್ಟೈಲ್, ಮ್ಯಾನರಿಸಂ ಹಾಗೂ ಸಿಳ್ಳೆ ಹೊಡೆಯುವ ಶೈಲಿ ಪ್ರಯಾಣಿಕರ ಗಮನ ಸೆಳೆಯುತ್ತಿತ್ತೆಂದು ಹಳೆಯ ಜನರು ನೆನಪಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನು ಓದಿ : ಪ್ರಧಾನಿ ಮೋದಿ ಭದ್ರತೆಯಲ್ಲಿ ಗಂಭೀರ ಲೋಪ; 6 ಪೊಲೀಸ್ ಸಿಬ್ಬಂದಿ ಸಸ್ಪೆಂಡ್.
ನಂತರದಲ್ಲಿ ಅವರ ಸ್ನೇಹಿತ ರಾಜ ಬಹದ್ದೂರ್ (Raj Bahadur) ಪ್ರೇರಣೆಯಿಂದ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ಗೆ (Madras Film Institute) ಸೇರಿದರು. ಅಲ್ಲಿಂದ ನಿರ್ದೇಶಕ ಕೆ. ಬಾಲಚಂದರ್ (K. Balachander) ಅವರ ಕಣ್ಣಿಗೆ ಬಿದ್ದ ಅವರು ‘ರಜನಿಕಾಂತ್’ ಎಂಬ ಹೆಸರಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು, ನಂತರ ಭಾರತೀಯ ಸಿನಿರಂಗದ ಮಹಾ ನಟನಾಗಿ ಬೆಳೆದರು.
ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ :
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಐಡಿ ಕಾರ್ಡ್ ನೋಡಿ ಅಭಿಮಾನಿಗಳು ಭಾವನಾತ್ಮಕ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. “₹275 ಸಂಬಳದಿಂದ ಸೂಪರ್ಸ್ಟಾರ್ ಮಟ್ಟಕ್ಕೆ ಏರಿರುವುದು ಸ್ಫೂರ್ತಿದಾಯಕ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ಚಿಕ್ಕಬಳ್ಳಾಪುರ DC ಕಚೇರಿಯಲ್ಲಿ 169 ಹುದ್ದೆಗಳ ಭರ್ತಿ; 18 – 50 ವರ್ಷ ವಯಸ್ಸಿನವರಿಗೆ ಅವಕಾಶ.
ಕೆಲವರು “ಶ್ರಮ, ಆತ್ಮವಿಶ್ವಾಸ ಮತ್ತು ಛಲ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ರಜನಿಕಾಂತ್ ಜೀವಂತ ಉದಾಹರಣೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಫೂರ್ತಿಯ ಪ್ರತೀಕವಾದ ರಜನಿಕಾಂತ್ :
ಸಾಮಾನ್ಯ ಬಸ್ ಕಂಡಕ್ಟರ್ನಿಂದ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ನಟರಲ್ಲಿ ಒಬ್ಬರಾಗಿ ಬೆಳೆದಿರುವ ರಜನಿಕಾಂತ್ ಅವರ ಬದುಕಿನ ಪಯಣ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ. ಇಂದು ಕೂಡ ಅವರ ಸರಳತೆ, ಶಿಸ್ತು ಮತ್ತು ಪರಿಶ್ರಮ ಜನಮನ ಗೆಲ್ಲುತ್ತಿದೆ.
View this post on Instagram
Courtesy : Social Media / Instagram
ರಜನಿ ಬಗ್ಗೆ ಒಂದಿಷ್ಟು :
ರಜನಿಕಾಂತ್(Rajinikanth) ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ (Shivaji Rao Gaikwad) ಎಂಬುದು ಗೊತ್ತೇ ಇದೆ. ಅವರು 1950 ಡಿಸೆಂಬರ್ 12ರಂದು ಬೆಂಗಳೂರಿ (Bengaluru) ನಲ್ಲಿ ಜನಿಸಿದರು.
ಅವರ ತಂದೆ ರಾಮೋಜಿ ರಾವ್ ಗಾಯಕ್ವಾಡ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ತಾಯಿ ಜಿಜಾಬಾಯಿ ಗೃಹಿಣಿಯಾಗಿದ್ದರು. ರಜನಿಕಾಂತ್ ಅವರಿಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು.
ಅವರು ಬೆಂಗಳೂರಿನ ಆಚಾರ್ಯ ಪಾಠಶಾಲೆ (Acharya Pathashala) ಮತ್ತು ವಿವೇಕಾನಂದ ಬಾಲಕ ಸಂಘದಲ್ಲಿ ಶಿಕ್ಷಣ ಪಡೆದಿದ್ದರು.
ನಂತರ ಜೀವನೋಪಾಯಕ್ಕಾಗಿ ಕೂಲಿ ಕೆಲಸ, ಕಾರ್ಪೆಂಟರ್ ಕೆಲಸ ಹಾಗೂ ಕೊನೆಗೆ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದು, ಅಲ್ಲಿಂದಲೇ ಅವರ ಬದುಕಿನ ದಿಕ್ಕು ಬದಲಾಗಿದೆ.
ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
Disclaimer: ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಾಹಿತಿ ಹಾಗೂ ಲಭ್ಯ ಸಾರ್ವಜನಿಕ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ವೈರಲ್ ವಿಷಯಗಳಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕಾಲಾನುಗುಣವಾಗಿ ಬದಲಾಗುವ ಸಾಧ್ಯತೆ ಇದೆ.





