ಹೆಚ್ಚುತ್ತಿರುವ ಡಯಾಬಿಟಿಸ್‌ಗೆ ತಪ್ಪಾದ ಆಹಾರವೇ ಕಾರಣ? ಇದರಲ್ಲಿ ತುಪ್ಪದ ಪಾತ್ರವೇನು?

ಹೆಚ್ಚುತ್ತಿರುವ ಡಯಾಬಿಟಿಸ್‌ಗೆ ತಪ್ಪಾದ ಆಹಾರವೇ ಕಾರಣ?

ಆರೋಗ್ಯ ಮಾಹಿತಿ : ಇಂದಿನ ದಿನಮಾನದಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್‌ (Diabetes) ಗೆ ತಪ್ಪಾದ ಆಹಾರ ಕಾರಣವೇ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ? ಇಂದಿನ ಆಹಾರ ಮಾಹಿತಿಯಲ್ಲಿ ತಪ್ಪಾದ ಆಹಾರ ಪದ್ದತಿ ಯಾವುದು ಅಂತ ತಿಳಿಯೋಣ.

ಹೌದು, ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes), ರಕ್ತದೊತ್ತಡ (Blood Pressure) ಹಾಗೂ ಹೃದಯ ಸಂಬಂಧಿ ಕಾಯಿಲೆಗಳು (Heart Diseases) ವೇಗವಾಗಿ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರಲ್ಲಿಯೇ ಈ ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ.

ಅಸ್ವಸ್ಥ ಜೀವನಶೈಲಿ (Lifestyle) ಮತ್ತು ತಪ್ಪಾದ ಆಹಾರ ಪದ್ಧತಿಯೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಈ ಕುರಿತು ವೈದ್ಯ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಹೇಳುತ್ತಾರೆ, ದೇಹದೊಳಗೆ ಉಂಟಾಗುವ ‘ಇನ್ಫ್ಲಮೇಶನ್’ (Inflammation) ಅಥವಾ ಒಳಗಿನ ಉರಿ ಅನೇಕ ದೀರ್ಘಕಾಲಿಕ ಕಾಯಿಲೆಗಳಿಗೆ ಮೂಲ ಕಾರಣವಾಗಬಹುದು ಎಂದಿದ್ದಾರೆ.

ನಾವು ಪ್ರತಿದಿನ ಬಳಸುವ ರಿಫೈನ್ ಎಣ್ಣೆಗಳು (Refined Oil) ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಗಾಣದ ಎಣ್ಣೆ ಬಳಕೆ ಉತ್ತಮ :

ಡಾ. ವಿಕ್ರಾಂತ್ ಅವರ ಪ್ರಕಾರ, ಸಂಪ್ರದಾಯಿಕ ಗಾಣದ ಎಣ್ಣೆ (Cold Pressed Oil) ಬಳಕೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚುತ್ತಿರುವ ಗ್ಲೂಕೋಸ್ :

ಇಂದಿನ ದಿನಗಳಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು ಸಾಮಾನ್ಯವಾಗಿದೆ. ಜೊತೆಗೆ ಹೆಚ್ಚು ಕಾರ್ಬೋಹೈಡ್ರೇಟ್‌ (Carbohydrate) ಇರುವ ಆಹಾರ ಸೇವನೆ, ವಿಶೇಷವಾಗಿ ಬಿಳಿ ಅಕ್ಕಿ ಮತ್ತು ಸಕ್ಕರೆ ಮಿಶ್ರಿತ ಚಹಾ-ಕಾಫಿ ಹೆಚ್ಚಾಗಿ ಕುಡಿಯುವುದು ರಕ್ತದಲ್ಲಿನ ಗ್ಲೂಕೋಸ್‌ (Glucose) ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ.

ಇದರಿಂದ ದೇಹದಲ್ಲಿ ‘ಇನ್ಸುಲಿನ್ ರೆಸಿಸ್ಟೆನ್ಸ್’ (Insulin Resistance) ಉಂಟಾಗಿ, ಮುಂದಿನ ದಿನಗಳಲ್ಲಿ ಡಯಾಬಿಟಿಸ್, ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಳ ಹಾಗೂ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಏನು ಲಾಭ?

ಇನ್ನು ವೈಟ್ ರೈಸ್‌ (White Rice) ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಅದರ ಪ್ರಮಾಣ ಕಡಿಮೆ ಮಾಡಿ, ಸ್ವಲ್ಪ ತುಪ್ಪ (Ghee) ಸೇರಿಸಿ ತಿಂದರೆ ಗ್ಲೂಕೋಸ್ ಮಟ್ಟ ತಕ್ಷಣ ಏರಿಕೆಯಾಗುವುದನ್ನು ನಿಯಂತ್ರಿಸಲು ಸಹಾಯವಾಗಬಹುದು.

ಈ ಸುದ್ದಿಯನ್ನು ಓದಿ : ಚಿಕ್ಕಬಳ್ಳಾಪುರ DC ಕಚೇರಿಯಲ್ಲಿ 169 ಹುದ್ದೆಗಳ ಭರ್ತಿ; 18 – 50 ವರ್ಷ ವಯಸ್ಸಿನವರಿಗೆ ಅವಕಾಶ.

ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು (Healthy Fat) ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುತ್ತದೆ ಎಂದು ವಿವರಿಸಲಾಗಿದೆ.

ಆಹಾರದಲ್ಲಿ ಮಾಡಬೇಕಾದ ಪ್ರಮುಖ ಬದಲಾವಣೆಗಳು :

ಆರೋಗ್ಯಕರ ಜೀವನಕ್ಕಾಗಿ ಈ ಕೆಳಗಿನ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ:

  • ಬೆಳಿಗ್ಗೆ ಖಾಲಿ ಹೊಟ್ಟೆಗೆ ಸಕ್ಕರೆ ಚಹಾ ಅಥವಾ ಕಾಫಿ ಸೇವನೆ ತಪ್ಪಿಸಿ.
  • ಇಡ್ಲಿ, ದೋಸೆ ಬದಲು ಮೊಟ್ಟೆ, ಸ್ಪ್ರೌಟ್ಸ್‌ (Sprouts) ಮತ್ತು ಡ್ರೈಫ್ರೂಟ್ಸ್‌ (Dry Fruits) ಸೇವಿಸಿ.
  • ದಿನಕ್ಕೆ ಎರಡು ಬಾರಿ ಮಾತ್ರ ಸಮತೋಲನ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
  • ಹಾಲು ಹಾಗೂ ಮೊಸರು ಸೇವನೆಯಿಂದ ವಿಟಮಿನ್ B12 ದೊರೆಯುತ್ತದೆ.

ಆರೋಗ್ಯಕರ ಜೀವನಶೈಲಿ ಅಗತ್ಯ :

ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ (Exercise) ಹಾಗೂ ಒತ್ತಡರಹಿತ ಜೀವನಶೈಲಿ ಡಯಾಬಿಟಿಸ್ ನಿಯಂತ್ರಣದಲ್ಲಿ ಇರಿಸಲು ಪ್ರಮುಖ ಪಾತ್ರವಹಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನು ಓದಿ : ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ ಪ್ಯಾಶನ್ ಫ್ರೂಟ್; ಹೃದಯ ಆರೋಗ್ಯಕ್ಕೂ ಬೆಸ್ಟ್!

ಇಂದಿನ ಧಾವಂತದ ಜೀವನದಲ್ಲಿ ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡದೆ, ಆಹಾರ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಂಡರೆ ಅನೇಕ ಗಂಭೀರ ಕಾಯಿಲೆಗಳಿಂದ ದೂರ ಇರಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಧುಮೇಹ (ಡಯಾಬಿಟಿಸ್‌) ಎಂದರೇನು ? :

  • ಮಧುಮೇಹ (Diabetes) ಎನ್ನುವುದು ರಕ್ತದಲ್ಲಿನ ಸಕ್ಕರೆಯ (Blood Sugar) ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗುವ ಒಂದು ದೀರ್ಘಕಾಲಿಕ ಆರೋಗ್ಯ ಸಮಸ್ಯೆಯಾಗಿದೆ.
  • ದೇಹದಲ್ಲಿ ಇನ್ಸುಲಿನ್‌ (Insulin) ಸರಿಯಾಗಿ ಉತ್ಪತ್ತಿಯಾಗದಿದ್ದಾಗ ಅಥವಾ ಕೆಲಸ ಮಾಡದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ.
  • ಅತಿಯಾದ ದಾಹ, ಹೆಚ್ಚಾಗಿ ಮೂತ್ರ ವಿಸರ್ಜನೆ, ದೌರ್ಬಲ್ಯ ಹಾಗೂ ತೂಕ ಇಳಿಕೆಯಾಗುವುದು ಇದರ ಸಾಮಾನ್ಯ ಲಕ್ಷಣಗಳಾಗಿವೆ.
  • ನಿಯಂತ್ರಣದಲ್ಲಿರದ ಮಧುಮೇಹ ಹೃದಯ, ಮೂತ್ರಪಿಂಡ ಹಾಗೂ ಕಣ್ಣುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
  • ಸರಿಯಾದ ಆಹಾರ, ವ್ಯಾಯಾಮ ಮತ್ತು ವೈದ್ಯರ ಸಲಹೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ


Disclaimer: ಡಯಾಬಿಟಿಸ್‌ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಒಳಿತು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top