560 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹76,100 ವೇತನ, ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ.!

560 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ;

ಉದ್ಯೋಗ ಮಾಹಿತಿ : ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ, KEA ವತಿಯಿಂದ 560 ಭೂಮಾಪಕರ ಹುದ್ದೆಗಳ (Land Surveyor) ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭವಾಗಿದ್ದು, ವಿದ್ಯಾರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ, ವೇತನ ಹಾಗೂ ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ.

ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ 560 ಭೂಮಾಪಕರ (Land Surveyor) ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಭೂಮಾಪಕರ ಹುದ್ದೆಗಳ ವಿವರ :

  • ಈ ನೇಮಕಾತಿಯಡಿ ಭೂಮಾಪಕರ (Land Surveyor) ಒಟ್ಟು 560 ಹುದ್ದೆಗಳು ಭರ್ತಿಯಾಗಲಿವೆ.

ಈ ಸುದ್ದಿ ಓದಿ : ಈ 6 ರಾಶಿಯವರಿಗೆ ಸುಳ್ಳು ಹೇಳೋದು ಅಸಾಧ್ಯ! ಮೋಸವನ್ನು ಕ್ಷಣದಲ್ಲೇ ಪತ್ತೆ ಹಚ್ಚುತ್ತಾರೆ.

ವೇತನ ಶ್ರೇಣಿ :

  • ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ 2024ರ ಪರಿಷ್ಕೃತ ವೇತನ ಶ್ರೇಣಿಯಂತೆ ತಿಂಗಳಿಗೆ ₹37,500 ರಿಂದ ₹76,100ರವರೆಗೆ ವೇತನ ಮತ್ತು ಇತರೆ ಸೌಲಭ್ಯಗಳು ಲಭ್ಯವಾಗಲಿವೆ.

ವಿದ್ಯಾರ್ಹತೆ :

ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಕಂಡ ಯಾವುದಾದರೂ ಒಂದು ವಿದ್ಯಾರ್ಹತೆಯನ್ನು ಹೊಂದಿರಬೇಕು.

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E / B.Tech ಅಥವಾ A.M.I.E ಪದವಿ.
  • ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಅಥವಾ ಕೃಷಿ ವಿಷಯದಲ್ಲಿ B.Sc ಪದವಿ.
  • AICTE ಮಾನ್ಯತೆ ಪಡೆದ ಸಂಸ್ಥೆಯಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಡಿಪ್ಲೊಮಾ.

ವಯೋಮಿತಿ :

ಸರ್ಕಾರದ 29-01-2026ರ ಆದೇಶದ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

  • ಕನಿಷ್ಠ ವಯಸ್ಸು : 18 ವರ್ಷ.
  • ಸಾಮಾನ್ಯ ವರ್ಗ (GM) : 40 ವರ್ಷ

ವಯೋಮಿತಿ ಸಡಿಲಿಕೆ :

  • 2A, 2B, 3A, 3B : 43 ವರ್ಷ.
  • ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ-1 : 45 ವರ್ಷ

ಇದನ್ನು ಓದಿ : ರೈಲ್ವೆಯಲ್ಲಿ 6,557 ತಂತ್ರಜ್ಞ ಹುದ್ದೆಗಳ ನೇಮಕಾತಿ; 10ನೇ, ITI, ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ.

ಪ್ರಮುಖ ದಿನಾಂಕಗಳು :

  • ಆನ್‌ಲೈನ್ ಅರ್ಜಿ ಆರಂಭ : 11 ಜುಲೈ 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07 ಆಗಸ್ಟ್ 2026.
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10 ಆಗಸ್ಟ್ 2026.

Note : ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಒಳಿತು.

ಪರೀಕ್ಷೆ ಹೇಗಿರಲಿದೆ?

ಅಭ್ಯರ್ಥಿಗಳ ಆಯ್ಕೆಗಾಗಿ Offline OMR ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.

  • 03-10-2026 (ಶನಿವಾರ) : ಪತ್ರಿಕೆ-2 (ನಿರ್ದಿಷ್ಟ ಪತ್ರಿಕೆ) – ಮಧ್ಯಾಹ್ನ 3:00 ರಿಂದ 5:00
  • 04-10-2026 (ಭಾನುವಾರ) : ಪತ್ರಿಕೆ-1 (ಸಾಮಾನ್ಯ ಜ್ಞಾನ) – ಬೆಳಿಗ್ಗೆ 10:30 ರಿಂದ 12:30

Note : ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.

ಅರ್ಜಿ ಶುಲ್ಕ :

  • ಸಾಮಾನ್ಯ, 2A, 2B, 3A, 3B ಅಭ್ಯರ್ಥಿಗಳು: ₹750/-
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳು: ₹500/-
  • ವಿಶೇಷ ಚೇತನ ಅಭ್ಯರ್ಥಿಗಳು: ₹250/-

ಈ ಸುದ್ದಿಯನ್ನು ಓದಿ : ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದೆಯಾ? ಜುಲೈನಲ್ಲಿ ಬಿಡುಗಡೆಯಾಗಲಿವೆ ಈ ಟಾಪ್ 5 ಮೊಬೈಲ್‌ಗಳು!

ಆಯ್ಕೆ ಪ್ರಕ್ರಿಯೆ :

  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
  • ಪರೀಕ್ಷೆಯಲ್ಲಿ Negative Valuation ಅನ್ವಯವಾಗಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಭೂಮಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು “2 ವರ್ಷಗಳ ಕಾಲ ಖಾಯಂ ಪೂರ್ವಾವಧಿ (Probation)” ಯಲ್ಲಿದ್ದು, ಈ ಅವಧಿಯಲ್ಲಿ ಇಲಾಖೆಯ ನಿಗದಿತ ತರಬೇತಿ ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ವಿದ್ಯಾರ್ಹತೆ, ವಯೋಮಿತಿ, ಶುಲ್ಕ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವುದು ಸೂಕ್ತ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಭೂಮಾಪಕರ ಹುದ್ದೆಗಳ ಲೇಖನವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿರುವ ಅಧಿಕೃತ ನೇಮಕಾತಿ ಅಧಿಸೂಚನೆ ಮತ್ತು ಲಭ್ಯ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಸಂಪೂರ್ಣ ಅಧಿಸೂಚನೆಯನ್ನು ಪರಿಶೀಲಿಸಿ, ವಿದ್ಯಾರ್ಹತೆ, ವಯೋಮಿತಿ, ಶುಲ್ಕ, ಮೀಸಲಾತಿ ಹಾಗೂ ಇತರೆ ನಿಯಮಗಳನ್ನು ದೃಢಪಡಿಸಿಕೊಂಡು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗುತ್ತದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top