Advertisement
Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 400ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ; 10ನೇ ಪಾಸ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಉದ್ಯೋಗ ಮಾಹಿತಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 400ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ನೀವು 10ನೇ ತರಗತಿ ಪಾಸ್ ಅಭ್ಯರ್ಥಿಗಳಾಗಿದ್ದರೆ ನಿಮಗೆ ಇದೊಂದು ಸುವರ್ಣಾವಕಾಶ.! ನಿಮ್ಮಲ್ಲಿ ಅರ್ಹತೆ ಮತ್ತು ಆಸಕ್ತಿ ಇದ್ದ ಮಹಿಳಾ ಅಭ್ಯರ್ಥಿಗಳು ನೀವಾಗಿದ್ದರೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ SSLC Pass ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ದೊರೆತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ವತಿಯಿಂದ ಗದಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗಾಗಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ; ಹುದ್ದೆಗಳ ಮಾಹಿತಿ :

ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 412 ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದೆ. ಹುದ್ದೆಗಳ ವಿವರದ ಪ್ರಕಾರ,

  • ಅಂಗನವಾಡಿ ಕಾರ್ಯಕರ್ತೆ 37 ಹುದ್ದೆಗಳು ಹಾಗೂ
  • ಅಂಗನವಾಡಿ ಸಹಾಯಕಿ 131 ಹುದ್ದೆಗಳು ಲಭ್ಯವಿದ್ದು,

Note : ಉಳಿದ ಹುದ್ದೆಗಳು ವಿವಿಧ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ.*

ಈ ಸುದ್ದಿ ಓದಿ : ಕುಡಿದ ಮತ್ತಿನಲ್ಲಿ 11 ಸಾವಿರ ವೋಲ್ಟ್ ವಿದ್ಯುತ್ ತಂತಿ ಮೇಲೆ ಮಲಗಿದ ವ್ಯಕ್ತಿ; ವಿಡಿಯೋ ವೈರಲ್.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 168 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.

ತಾಲ್ಲೂಕುಕಾರ್ಯಕರ್ತೆಸಹಾಯಕಿ
ಶಿರಹಟ್ಟಿ821
ನರಗುಂದ520
ರೋಣ927
ಮುಂಡರಗಿ822
ಗದಗ741

ಆಯ್ಕೆಯಾದ ಅಭ್ಯರ್ಥಿಗಳಿಗೆ ಗದಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದ್ದು, ಅರ್ಜಿ ಆಫ್‌ಲೈನ್ ಮೂಲಕ ಸಲ್ಲಿಸಬೇಕಾಗಿದೆ.

ಶೈಕ್ಷಣಿಕ ಅರ್ಹತೆ :

ಶೈಕ್ಷಣಿಕ ಅರ್ಹತೆಯ ವಿಚಾರದಲ್ಲಿ, ಅಧಿಕೃತ ಅಧಿಸೂಚನೆಯ ಪ್ರಕಾರ,

  • ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ :

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ :

ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿದಾರರ ವಯೋಮಿತಿ,

  • ಕನಿಷ್ಠ 19 ವರ್ಷ ಪೊರೈಸಿರಬೇಕು.
  • ಗರಿಷ್ಠ 35 ವರ್ಷ ಮೀರಿರಬಾರದು.

Note : ಮಹಿಳಾ ಅಭ್ಯರ್ಥಿಗಳಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ಈ ನೇಮಕಾತಿ ಅನುಕೂಲಕರವಾಗಿದೆ.

ಈ ಆರೋಗ್ಯ ಸುದ್ದಿ ಓದಿ : ದಿನಕ್ಕೆ 4-5 ಕಪ್ ಚಹಾ ಕುಡಿಯುತ್ತೀರಾ? ಕೇವಲ 30 ದಿನ ಬಿಡಿ, ದೇಹದಲ್ಲಿ ಆಗುವ ಬದಲಾವಣೆ ನೋಡಿ!

ವಿಳಾಸ :

  • ಗದಗ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಜಿಲ್ಲಾ ಬಾಲಕರ ಬಾಲ ಮಂದಿರ ಪಾಲಾ ಬದಾಮಿ ರೋಡ ಹಾಕಿ ಗ್ರೌಂಡ್ ಹತ್ತಿರ ಬೆಟಗೇರಿ-ಗದಗ.
  • ಮುಂಡರಗಿ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ತಾಲೂಕ ಬಾಲ ಭವನ ಕಟ್ಟಡ, ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿ, ಹಳೆ ಕಲಕೇರಿ ರಸ್ತೆ ಮುಂಡರಗಿ.
  • ರೋಣ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಎ.ಎಮ್ ಸಾಣಿ ಕಟ್ಟಡ, ಗದಗ ರಸ್ತೆ, ರೋಣ.
  • ನರಗುಂದ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ತಾಲೂಕ ಆಡಳಿತ ಭವನ, ರೂಮ್ ನಂಬರ – 17, ಹುಬ್ಬಳ್ಳಿ – ಸೋಲ್ಲಾಪುರ ರೋಡ ನರಗುಂದ.
  • ಶಿರಹಟ್ಟಿ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ, ತಾಲ್ಲೂಕು ಪಂಚಾಯತ ಕಟ್ಟಡ, ಪೊಲೀಸ್ ಸ್ಟೇಶನ್ ಹತ್ತಿರ, ಶಿರಹಟ್ಟಿ.

Note : ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನವಿಟ್ಟು ಓದಿ, ಅಗತ್ಯ ದಾಖಲೆಗಳೊಂದಿಗೆ ಸರಿಯಾಗಿ ಫಾರ್ಮ್ ಭರ್ತಿ ಮಾಡಬೇಕು ಎಂದು ಇಲಾಖೆ ಸೂಚಿಸಿದೆ.

ಪ್ರಮುಖ ದಿನಾಂಕ :

  • ಪ್ರಾರಂಭದ ದಿನಾಂಕ : ಜೂನ್ 22, 2026
  • ಕೊನೆಯ ದಿನಾಂಕ : ಜುಲೈ 30, 2026

ಇದನ್ನು ಓದಿ : ನೀವು ಪದವೀಧರರೇ? ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ನೇಮಕಾತಿಗೆ ಅಭ್ಯರ್ಥಿಗಳು ಆಫ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಕೆಲವು ಪ್ರಮುಖ ಹಂತಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಹಂತ – 1 :

  • ಮೊದಲಿಗೆ ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆ ಮತ್ತು ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಗಮನವಿಟ್ಟು ಓದಿಕೊಳ್ಳಬೇಕು.
  • ನಂತರ ಅರ್ಜಿ ಫಾರ್ಮ್‌ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
  • ಅಗತ್ಯವಿರುವ ದಾಖಲೆಗಳ ಪ್ರತಿಗಳನ್ನು ಪತ್ರಾಂಕಿತ ಅಧಿಕಾರಿ ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸುವುದು ಕಡ್ಡಾಯವಾಗಿದೆ.

ಈ ಸುದ್ದಿಯನ್ನು ಓದಿ : ಸ್ನೇಹಿತರೊಂದಿಗೆ ಮೋಜು-ಮಸ್ತಿ: ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದ 25 ರ ಯುವಕನಿಗೆ ಮುಂದೆನಾಯ್ತು? ವಿಡಿಯೋ ನೋಡಿ.

ಹಂತ – 2 :

  • ಭರ್ತಿ ಮಾಡಿದ ಅರ್ಜಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಇಟ್ಟು, ಕಚೇರಿ ಕೆಲಸದ ಅವಧಿಯೊಳಗೆ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ವೇಳೆ ಕಚೇರಿಯಲ್ಲಿರುವ ಅರ್ಜಿ ಸ್ವೀಕೃತಿ ರಿಜಿಸ್ಟರ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಬೇಕು.
  • ಜೊತೆಗೆ ಲಕೋಟೆಯ ಮೇಲೆ “ಅಂಗನವಾಡಿ ಕಾರ್ಯಕರ್ತೆ” ಅಥವಾ “ಅಂಗನವಾಡಿ ಸಹಾಯಕಿ” ಹುದ್ದೆಗೆ ಅರ್ಜಿ ಎಂದು ಸ್ಪಷ್ಟವಾಗಿ ದಪ್ಪ ಅಕ್ಷರಗಳಲ್ಲಿ ನಮೂದಿಸಿ ಸಂಬಂಧಿತ ಬಾಕ್ಸ್‌ನಲ್ಲಿ ಹಾಕಬೇಕು ಎಂದು ಇಲಾಖೆ ಸೂಚಿಸಿದೆ.

Note : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಎಲ್ಲ ದಾಖಲೆಗಳು ಸರಿಯಾಗಿವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ. ತಪ್ಪಾದ ಅಥವಾ ಅಪೂರ್ಣ ಅರ್ಜಿಗಳನ್ನು ಇಲಾಖೆ ತಿರಸ್ಕರಿಸುವ ಸಾಧ್ಯತೆ ಇದೆ.

ಉದ್ಯೋಗ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಬಯಸುವವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2026 ಒಳ್ಳೆಯ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ತಪ್ಪದೇ ಇದರ ಪ್ರಯೋಜನ ಪಡೆದುಕೊಳ್ಳಬಹುದು.

* ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Disclaimer: ಈ ಲೇಖನವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (wcd-gadag) ಅಧಿಕೃತ ಅಧಿಸೂಚನೆ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆ ಮತ್ತು ನಿಯಮಾವಳಿಗಳನ್ನು ಪರಿಶೀಲಿಸುವುದು ಕಡ್ಡಾಯ. ಅರ್ಜಿ ಪ್ರಕ್ರಿಯೆ ಅಥವಾ ನೇಮಕಾತಿ ನಿಯಮಗಳಲ್ಲಿ ಆಗಬಹುದಾದ ಬದಲಾವಣೆಗಳಿಗೆ ಪ್ರಕಟಣೆ ನೀಡಿದ ಇಲಾಖೆ ಅಂತಿಮವಾಗಿ ಹೊಣೆಗಾರಿಯಾಗಿರುತ್ತದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top