Advertisement
Advertisement

ಕೇರಳ: ದಟ್ಟನೆಯ ರಸ್ತೆ ಮಧ್ಯದಲ್ಲಿ ವ್ಯಕ್ತಿ ಮೊಬೈಲ್‌ನಲ್ಲಿ ಬ್ಯೂಸಿ ; ಮುಂದೆನಾಯ್ತು ವಿಡಿಯೋ ನೋಡಿ.

ದಟ್ಟನೆಯ ರಸ್ತೆ ಮಧ್ಯದಲ್ಲಿ ವ್ಯಕ್ತಿ ಮೊಬೈಲ್‌ನಲ್ಲಿ ಬ್ಯೂಸಿ

ಕೋಝಿಕ್ಕೋಡ್ (ಕೇರಳ) : ರಸ್ತೆ ಬದಿ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದ ಭಯಾನಕ ಕ್ಷಣದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಪ್ರದೇಶದಲ್ಲಿ ನಡೆದ ಈ ರಸ್ತೆ ಅಪಘಾತದ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಎಚ್ಚರಿಕೆ ನೀಡುತ್ತಿದೆ.

ವಾಹನ ಸಂಚಾರ ದಟ್ಟವಾಗಿರುವ ಹೆದ್ದಾರಿಯ ಅಂಚಿನಲ್ಲಿ ಸ್ಕೂಟರ್ ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಬಂದ ಪಿಕ್‌ಅಪ್ ವಾಹನ ಡಿಕ್ಕಿ ಹೊಡೆದ ಘಟನೆ ಜನರಲ್ಲಿ ಆತಂಕ ಹುಟ್ಟಿಸಿದೆ.

ಹೆದ್ದಾರಿ ಅಂಚಿನಲ್ಲೇ ನಿಲ್ಲಿಸಿದ ಸ್ಕೂಟರ್ :

ಮಾಹಿತಿಯ ಪ್ರಕಾರ, ಕೊಯಿಲಾಂಡಿ ಪ್ರದೇಶದ ಬ್ಯುಸಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್ ಅನ್ನು ಹೆದ್ದಾರಿಯ ಎಡಬದಿಯಲ್ಲೇ ನಿಲ್ಲಿಸಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ವಾಹನ ದಟ್ಟಣೆ ಹೆಚ್ಚು ಇರುವ ಪ್ರದೇಶವಾಗಿದ್ದರೂ, ಅವರು ರಸ್ತೆ ಅಂಚಿನಿಂದ ಕೆಳಕ್ಕೆ ಇಳಿಯದೇ ಅಲ್ಲಿಯೇ ನಿಂತಿದ್ದರು.

ಮೊಬೈಲ್‌ನಲ್ಲಿ ಬ್ಯೂಸಿ, ಹಿಂಬದಿಯಿಂದ ವೇಗವಾಗಿ ಬಂದ ವಾಹನ :

ರಸ್ತೆಯ ಬದಿಯಲ್ಲಿ ಸಾಕಷ್ಟು ಜಾಗ ಇದ್ದರೂ ಸಹ ಆತ ಮುಖ್ಯ ರಸ್ತೆಯಲ್ಲೇ ನಿಂತು ಮಾತನಾಡುತ್ತಿದ್ದ ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಮಹೀಂದ್ರ ಪಿಕ್‌ಅಪ್ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ವ್ಯಕ್ತಿ ಸ್ಕೂಟರ್ ಸಮೇತ ನೆಲಕ್ಕೆ ಬಿದ್ದಿದ್ದಾರೆ.

ಈ ಸುದ್ದಿನೂ ಓದಿ : ಹಾವಿನ ಬಾಯಿಗೆ ಬಾಯಿ ಹಾಕಿದ ಭೂಪ: ಮೈ ನಡುಗಿಸುವ ವಿಡಿಯೋ ನೋಡಿ.

ಘಟನೆ ಕ್ಷಣಾರ್ಧದಲ್ಲಿ ನಡೆದಿದ್ದು, ಅದರ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಗೊಂಡಿದೆ.

ಹೆಲ್ಮೆಟ್ ಜೀವ ಉಳಿಸಿತು :

ಅಪಘಾತದ ತೀವ್ರತೆ ಹೆಚ್ಚಿದ್ದರೂ, ವ್ಯಕ್ತಿ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯ ತಪ್ಪಿದೆಯೆಂದು ತಿಳಿದುಬಂದಿದೆ. ತಕ್ಷಣವೇ ಸುತ್ತಮುತ್ತಲಿನವರು ನೆರವಿಗೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ರಸ್ತೆ ಸುರಕ್ಷತೆ ಬಗ್ಗೆ ಎಚ್ಚರಿಕೆ :

ಈ ಘಟನೆ, ವಾಹನ ಓಡಿಸುವಾಗ ಅಥವಾ ರಸ್ತೆ ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುವುದು ಕ್ಷಣಿಕ ಗಮನಚ್ಯುತಿಯನ್ನು ಉಂಟುಮಾಡಿ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.

ಕರೆ ಮಾಡಬೇಕಾದರೆ ಸುರಕ್ಷಿತ ಸ್ಥಳದಲ್ಲಿ ಸಂಪೂರ್ಣವಾಗಿ ವಾಹನ ನಿಲ್ಲಿಸಿ ನಂತರವೇ ಮಾತನಾಡಿ. “ನಿಮ್ಮ ಒಂದು ಜಾಗ್ರತೆ ನಿಮ್ಮ ಜೀವವನ್ನೂ, ಇತರರ ಸುರಕ್ಷತೆ”ಯನ್ನೂ ಕಾಪಾಡುತ್ತದೆ.

ತಜ್ಞರ ಪ್ರಕಾರ, ಫೋನ್‌ನಲ್ಲಿ ಮಾತನಾಡಬೇಕಾದರೆ ಸುರಕ್ಷಿತ ಸ್ಥಳದಲ್ಲಿ ಸಂಪೂರ್ಣವಾಗಿ ವಾಹನವನ್ನು ಪಾರ್ಕ್ ಮಾಡಿ ನಂತರವೇ ಮಾತನಾಡುವುದು ಉತ್ತಮ.

ಜನರಿಗೆ ಪಾಠವಾದ ಘಟನೆ :

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಅನೇಕ ಮಂದಿಗೆ ಎಚ್ಚರಿಕೆಯಾಗಿ ಪರಿಣಮಿಸಿದೆ. “ಒಂದು ಕ್ಷಣದ ಅಜಾಗರೂಕತೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು” ಎಂಬ ಸಂದೇಶವನ್ನು ಈ ಘಟನೆ ಮತ್ತೆ ನೆನಪಿಸಿದೆ.

ಮೊಬೈಲ್‌ನಲ್ಲಿ ಬ್ಯೂಸಿ ; ಪ್ರಾಣಕ್ಕೆ ಸಂಕಟ

ವ್ಯಕ್ತಿ ಮೊಬೈಲ್‌ನಲ್ಲಿ ಬ್ಯೂಸಿ ವಿಡಿಯೋ ನೋಡಿ :

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

Courtesy : Social Media / Twitter


Disclaimer  : ಈ ಸುದ್ದಿಯಲ್ಲಿ (ಮೊಬೈಲ್‌ನಲ್ಲಿ ಬ್ಯೂಸಿ) ನೀಡಿರುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೋ ಮತ್ತು ಮೂಲಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ.

ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಇಲ್ಲ. ಘಟನೆಗೆ ಸಂಬಂಧಿಸಿದ ವಿವರಗಳು ಸ್ಥಳೀಯ ಮೂಲಗಳ ಪ್ರಕಾರ ಬದಲಾಗುವ ಸಾಧ್ಯತೆ ಇದೆ. ಓದುಗರು ಇದನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top