ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೇ? ಈ ಬಗ್ಗೆ ತಜ್ಞರು ಏನಂತಾರೆ?

ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೇ?

ಆರೋಗ್ಯ ಮಾಹಿತಿ : ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅಥವಾ ದಿನದಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ? ಹಾಗಾದ್ರೆ ಈ ರೀತಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ತಿಳಿದಿದೆಯೇ? ಪಪ್ಪಾಯಿ ಸೇವಿಸಿವುದರಿಂದ ದೇಹಕ್ಕಾಗುವ ಲಾಭ ಅಷ್ಟಿಷ್ಟಲ್ಲ, ನಿಮಗೆ ಗೊತ್ತಾದರೆ ಇಂದೇ ಆಹಾರದಲ್ಲಿ ಸೇರಿಸಿಕೊಳ್ಳುತ್ತೀರಿ.

ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಲು ಪ್ರತಿದಿನ ಹಣ್ಣುಗಳ ಸೇವನೆ ಅತ್ಯಂತ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಹಣ್ಣುಗಳಲ್ಲಿ ಇರುವ ನೈಸರ್ಗಿಕ ಪೋಷಕಾಂಶಗಳು ದೇಹಕ್ಕೆ ಅಗತ್ಯ ಶಕ್ತಿ ನೀಡುವುದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತವೆ.

ಪಪ್ಪಾಯಿ ಹಣ್ಣು :

ಅಂತಹ ಆರೋಗ್ಯಕರ ಹಣ್ಣುಗಳಲ್ಲಿ ಪಪ್ಪಾಯಿ ಪ್ರಮುಖ ಸ್ಥಾನದಲ್ಲಿದೆ. ಪ್ರತಿದಿನ ಪಪ್ಪಾಯಿ ಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳು ದೊರೆಯುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಪಪ್ಪಾಯಿ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರ ಸಮೃದ್ಧ ಪ್ರಮಾಣದಲ್ಲಿ ದೊರೆಯುತ್ತದೆ. ಇವು ದೇಹದ ಕಾರ್ಯವೈಖರಿ ಸರಿಯಾಗಿ ನಡೆಯಲು ನೆರವಾಗುವುದರ ಜೊತೆಗೆ ದೈನಂದಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಆಮ್ಲಗಳ ಸಮತೋಲನ :

ಪ್ರತಿದಿನ ಪಪ್ಪಾಯಿ ಸೇವಿಸಿದರೆ ದೇಹಕ್ಕೆ ಅಗತ್ಯವಾದ ಕೆಲವು ಆಮ್ಲಗಳ ಕೊರತೆಯಾಗದೆ, ಸಮತೋಲನದಲ್ಲಿರುತ್ತದೆ. ಬೆಳಗಿನ ಉಪಾಹಾರದ ಸಮಯದಲ್ಲಿ ಪಪ್ಪಾಯಿ ಹಣ್ಣು ಸೇವಿಸುವುದು ವಿಶೇಷವಾಗಿ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಹಸಿವಿನ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪಪ್ಪಾಯಿಯಲ್ಲಿ ಇರುವ ನೈಸರ್ಗಿಕ ಕಿಣ್ವಗಳು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ ಆಗುತ್ತವೆ. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರ ದೊರೆಯಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಇನ್ನಷ್ಟು ಚುರುಕುಗೊಳ್ಳುತ್ತದೆ. ಪಪ್ಪಾಯಿಯಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೇಹದ ಕೋಶಗಳನ್ನು ರಕ್ಷಿಸಲು ಸಹಕಾರಿಯಾಗುತ್ತದೆ.

ಅಜೀರ್ಣ ಸಮಸ್ಯೆ :

ಇದಲ್ಲದೆ ಇದರಲ್ಲಿ ಇರುವ ಪ್ರೋಟೀನ್ ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಅಜೀರ್ಣ ಸಮಸ್ಯೆ ಎದುರಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಆಹಾರ ಸೇವನೆಯ ನಂತರ ಸುಮಾರು ಎರಡು ಗಂಟೆಗಳ ಬಳಿಕ ಪಪ್ಪಾಯಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವ ಸ್ಥಿತಿಯನ್ನು ನಿಯಂತ್ರಿಸಲು ಸಹಾಯವಾಗಬಹುದು ಎಂದು ಕೆಲ ಅಧ್ಯಯನಗಳು ಸೂಚಿಸುತ್ತವೆ. ಇದೇ ಕಾರಣಕ್ಕೆ ಸಮತೋಲನ ಆಹಾರ ಪದ್ಧತಿಯಲ್ಲಿ ಪಪ್ಪಾಯಿ ಸೇರಿಸುವುದು ಒಳ್ಳೆಯದು ಎಂದು ಸಲಹೆ ನೀಡಲಾಗುತ್ತದೆ.

ತೂಕ ನಿಯಂತ್ರಣ :

ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಪ್ಪಾಯಿ ಉತ್ತಮ ಆಯ್ಕೆಯ ಹಣ್ಣಾಗಿದೆ. ಕಡಿಮೆ ಕ್ಯಾಲೊರಿಯನ್ನು ಹೊಂದಿರುವುದರಿಂದ ತೂಕ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಜೊತೆಗೆ ಪಪ್ಪಾಯಿ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇನ್ನು ಮಹಿಳೆಯರಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಮುಟ್ಟಿನ ಅಸಮರ್ಪಕ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಇದು ಸಹಕಾರಿ ಎಂದು ಹೇಳಲಾಗುತ್ತದೆ.

ಒಟ್ಟಾರೆ ಪಪ್ಪಾಯಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ, ದೇಹದ ಸಮಗ್ರ ಆರೋಗ್ಯ ಕಾಪಾಡಲು ಸಹ ಉಪಯುಕ್ತವಾಗಿದೆ. ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಂಡರೆ ದೀರ್ಘಕಾಲಿಕ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Disclaimer: ಪಪ್ಪಾಯಿ ಹಣ್ಣಿನ ಲೇಖನವು ಆರೋಗ್ಯ ಸಂಬಂಧಿತ ಸಾಮಾನ್ಯ ಮಾಹಿತಿಯ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಆಹಾರ ಪದ್ಧತಿ ಅಥವಾ ಆರೋಗ್ಯ ಸಮಸ್ಯೆಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top