ನಿಂತಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಏಕಾಏಕಿ ಓಪನ್; 25 ವರ್ಷದ ಯುವಕನ ದಾರುಣ ಸಾವು, ತನಿಖೆ ಆರಂಭ.

ನಿಂತಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಏಕಾಏಕಿ ಓಪನ್

ಮುಂಬೈ : ನಿಂತಿದ್ದ ಕಾರಿನ ಸ್ಟೀರಿಂಗ್ ವೀಲ್ ಏರ್‌ಬ್ಯಾಗ್ ಏಕಾಏಕಿ ಒಮ್ಮೇಲೆ ಓಪನ್ ಆದ ಪರಿಣಾಮ ಸುಮಾರು 25 ವರ್ಷದ ಯುವಕನ ದಾರುಣ ಸಾವು ಸಂಭವಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸದ್ಯ ಘಟನೆ ಕುರಿತು ತನಿಖೆ ಆರಂಭದ್ದು, ಬೆಚ್ಚಿಬೀಳಿಸಿದ ಘಟನೆ ಕುರಿತು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದೆ.

ಸಾಮಾನ್ಯವಾಗಿ ರಸ್ತೆ ಅಪಘಾತ ಸಂಭವಿಸಿದಾಗ ಪ್ರಯಾಣಿಕರ ಜೀವ ರಕ್ಷಿಸಲು ಕಾರಿನಲ್ಲಿ ಅಳವಡಿಸಿರುವ ಏರ್‌ಬ್ಯಾಗ್ (Airbag) ಸುರಕ್ಷತಾ ವ್ಯವಸ್ಥೆ ಕೆಲವೊಮ್ಮೆ ಜೀವವನ್ನೇ ಕಸಿದುಕೊಳ್ಳುವ ಅಪಾಯಕಾರಿ ಘಟನೆಗಳಿಗೂ ಕಾರಣವಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.

ಮಾನ್ಯ ಫಿಟ್‌ನೆಸ್ ಪ್ರಮಾಣಪತ್ರ :

ಮುಂಬೈ ನಗರದ ಮೀರಾ ರೋಡ್ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಏರ್‌ಬ್ಯಾಗ್ ಅನಿರೀಕ್ಷಿತವಾಗಿ ತೆರೆದುಕೊಂಡ ಪರಿಣಾಮ 25 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಈ ವಾಹನವು ಮಾನ್ಯವಾದ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿದ್ದುದಾಗಿ ಸಹ ದೃಢಪಡಿಸಲಾಗಿದೆ.

ಮೃತ ಯುವಕನನ್ನು ಮೋಹಿತ್ ಸೋನಿ ಎಂದು ಗುರುತಿಸಲಾಗಿದೆ. ಇವರು ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ-ಮಾರಾಟ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಮಾರಾಟಕ್ಕೆ ಇಟ್ಟಿದ್ದಸುಮಾರು 15 ವರ್ಷದ ಹಳೆಯ Honda City ಕಾರೊಂದನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೊದಲು ಅದರ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಏರ್‌ಬ್ಯಾಗ್ ಏಕಾಏಕಿ ಓಪನ್‌ :

ಮಾಹಿತಿಯ ಪ್ರಕಾರ, ರಸ್ತೆಬದಿಯಲ್ಲಿ ನಿಂತಿದ್ದ ಕಾರಿನೊಳಗೆ ಕುಳಿತು ಸ್ಟೀರಿಂಗ್, ಡ್ಯಾಶ್‌ಬೋರ್ಡ್ ಹಾಗೂ ಇತರ ತಾಂತ್ರಿಕ ವ್ಯವಸ್ಥೆಗಳನ್ನು ಮೋಹಿತ್ ಪರಿಶೀಲಿಸುತ್ತಿದ್ದರು. ಇದೇ ಸಮಯದಲ್ಲಿ ಯಾವುದೇ ಅಪಘಾತ ಅಥವಾ ಹೊರಗಿನಿಂದ ಯಾವುದೇ ಡಿಕ್ಕಿ ಸಂಭವಿಸದಿದ್ದರೂ ಸ್ಟೀರಿಂಗ್ ವೀಲ್‌ನಲ್ಲಿದ್ದ ಏರ್‌ಬ್ಯಾಗ್ ಏಕಾಏಕಿ ಭಾರೀ ವೇಗದಲ್ಲಿ ತೆರೆದುಕೊಂಡಿದೆ.

ಏರ್‌ಬ್ಯಾಗ್ ಏಕಾಏಕಿ ಭಾರೀ ವೇಗದಲ್ಲಿ ತೆರೆದುಕೊಂಡ ಪರಿಣಾಮ ಅದರ ಮೇಲಿದ್ದ ಪ್ಲಾಸ್ಟಿಕ್ ಕವಚ ಅತಿಯಾದ ವೇಗದಿಂದ ಯುವಕನ ಕತ್ತಿನ ಭಾಗಕ್ಕೆ ಅಪ್ಪಳಿಸಿದೆ. ಅಪ್ಪಳಿಕೆಯ ತೀವ್ರತೆಯಿಂದ ಮೋಹಿತ್ ಅವರ ಕತ್ತಿಗೆ ಆಳವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ.

ಕಾರು ರಸ್ತೆಬದಿಯಲ್ಲಿ ನಿಂತಿದ್ದ ಹಿನ್ನಲೆಯಲ್ಲಿ ಯಾರಿಗೂ ಘಟನೆ ಬಗ್ಗೆ ತಿಳಿಯದೆ ಸುಮಾರು ಸಮಯ ಕಳೆದುಹೋಗಿದೆ. ನಂತರ ಯಾರೋ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಈ ಕ್ರೈಂ ಸುದ್ದಿ ಓದಿ : ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆ ತಗುಲಿದ ಚೆಂಡು; ಇಬ್ಬರು ಅಪ್ರಾಪ್ತರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ.

ಈ ಘಟನೆ ಕುರಿತು ಸ್ಥಳೀಯ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರಿನಲ್ಲಿ ಯಾವುದೇ ಅಪಘಾತದ ಗುರುತುಗಳಿಲ್ಲದಿರುವುದರಿಂದ ವಿದ್ಯುತ್ ದೋಷ ಅಥವಾ ಯಾಂತ್ರಿಕ ವೈಫಲ್ಯ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಪರಿಶೀಲನೆಗಾಗಿ ಲ್ಯಾಬ್‌ಗೆ :

ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಫೋರೆನ್ಸಿಕ್ ತಂಡವು ಕಾರಿನ ಒಳಭಾಗದಿಂದ ಅಗತ್ಯವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ವಿಶೇಷವಾಗಿ ರಕ್ತದ ಮಾದರಿಗಳನ್ನು ಪರಿಶೀಲನೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಇದೀಗ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು, ವಾಹನ ತಯಾರಕ ಕಂಪನಿಯಿಂದಲೂ ಸಂಪೂರ್ಣ ತಾಂತ್ರಿಕ ವರದಿ ಪಡೆಯಲು ಮುಂದಾಗಿದ್ದಾರೆ.

ಇದೇ ವೇಳೆ, ವಾಹನದಲ್ಲಿ ಯಾವುದೇ ತಾಂತ್ರಿಕ ದೋಷ, ಯಾಂತ್ರಿಕ ವೈಫಲ್ಯ ಅಥವಾ ವಿದ್ಯುತ್ ವ್ಯವಸ್ಥೆಯ ಅಸಮರ್ಪಕ ಕಾರ್ಯವು ಈ ಘಟನೆಗೆ ಕಾರಣವಾಗಿದೆಯೇ ಎಂಬುದನ್ನು ತಿಳಿಯಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಗೆ ವಿಶೇಷವಾಗಿ ಸೂಚನೆ ನೀಡಲಾಗಿದೆ.

ಆರ್‌ಟಿಒ ತಜ್ಞರು ಕಾರಿನ ಸಂಪೂರ್ಣ ತಾಂತ್ರಿಕ ಅಂಶಗಳನ್ನು ಪರಿಶೀಲಿಸುವ ಮೂಲಕ ಏರ್‌ಬ್ಯಾಗ್ ವ್ಯವಸ್ಥೆ, ಸೆನ್ಸಾರ್‌ಗಳು ಹಾಗೂ ಇತರ ಸುರಕ್ಷತಾ ಘಟಕಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಿದ್ದಾರೆ.

ಈ ಸುದ್ದಿಯನ್ನು ಓದಿ : ಕರ್ನಾಟಕ ಕಂದಾಯ ಇಲಾಖೆಯಲ್ಲಿ ಬೃಹತ್ ಬಡ್ತಿ: 162 ಅಧಿಕಾರಿಗಳಿಗೆ ತಹಶೀಲ್ದಾರ್ ಗ್ರೇಡ್-2 ಹುದ್ದೆ, 60 ಮಂದಿಗೆ ವರ್ಗಾವಣೆ.

ತಜ್ಞರ ಪ್ರಕಾರ, ವಾಹನಗಳಲ್ಲಿ ಅಳವಡಿಸಲಾದ ಏರ್‌ಬ್ಯಾಗ್‌ಗಳು ಡಿಕ್ಕಿಯ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಮಿಲಿಸೆಕೆಂಡ್‌ಗಳ ಅಂತರದಲ್ಲಿ ಉಬ್ಬಿಕೊಳ್ಳುವಂತೆ ವಿನ್ಯಾಸಗೊಳಿಸಲಾಗುತ್ತದೆ.

ಆದರೆ ಕೆಲ ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ಏರ್‌ಬ್ಯಾಗ್ ಸಕ್ರಿಯವಾಗುವುದು ಅಥವಾ ಅದರ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗುವುದು ಗಂಭೀರ ಗಾಯಗಳಿಗೆ ಕಾರಣವಾಗಬಹುದು. ಕೆಲ ಸಂದರ್ಭದಲ್ಲಿ ಉಂಟಾಗುವ ಬಲವು ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಘಟನೆ ಕಾರುಗಳ ಸುರಕ್ಷತಾ ವ್ಯವಸ್ಥೆಗಳಲ್ಲಿ ನಿಯಮಿತ ತಾಂತ್ರಿಕ ಪರಿಶೀಲನೆ ಎಷ್ಟು ಅಗತ್ಯ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಮುಂದಿಟ್ಟಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಇಲಾಖೆ, ಫೋರೆನ್ಸಿಕ್ ತಂಡ ಮತ್ತು ಆರ್‌ಟಿಒ ಅಧಿಕಾರಿಗಳು ಸಂಯುಕ್ತವಾಗಿ ತನಿಖೆ ಮುಂದುವರಿಸುತ್ತಿದ್ದು, ಘಟನೆಗೆ ನಿಖರ ಕಾರಣವನ್ನು ಶೀಘ್ರದಲ್ಲೇ ಪತ್ತೆಹಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: 24% ಇಳಿಕೆ ಕಂಡು ಹೂಡಿಕೆದಾರರಿಗೆ ಭಾರಿ ಶಾಕ್!

ಏರ್‌ಬ್ಯಾಗ್ (Airbag) :

  • ಏರ್‌ಬ್ಯಾಗ್ (Airbag) ಒಂದು ವಾಹನದ ಪ್ರಮುಖ ಸುರಕ್ಷತಾ ವ್ಯವಸ್ಥೆಯಾಗಿದ್ದು, ಅಪಘಾತ ಸಂಭವಿಸಿದಾಗ ಪ್ರಯಾಣಿಕರನ್ನು ಗಂಭೀರ ಗಾಯಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
  • ಡಿಕ್ಕಿಯ ಕ್ಷಣದಲ್ಲಿ ಸೆನ್ಸಾರ್‌ಗಳು ತಕ್ಷಣ ಸಕ್ರಿಯವಾಗಿ, ಮಿಲಿಸೆಕೆಂಡ್‌ಗಳೊಳಗೆ ಏರ್‌ಬ್ಯಾಗ್ ಉಬ್ಬುತ್ತದೆ.
  • ಇದು ಚಾಲಕ ಮತ್ತು ಪ್ರಯಾಣಿಕರ ತಲೆ ಹಾಗೂ ಎದೆಯ ಭಾಗವನ್ನು ಸ್ಟೀರಿಂಗ್ ಮತ್ತು ಡ್ಯಾಶ್‌ಬೋರ್ಡ್‌ನ ಬಲವಾದ ಹೊಡೆತದಿಂದ ಕಾಪಾಡುತ್ತದೆ.
  • ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸಿದರೆ, ಅಪಘಾತದ ಪರಿಣಾಮವನ್ನು ಬಹಳಷ್ಟು ಕಡಿಮೆ ಮಾಡಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Disclaimer: ಈ ಲೇಖನವು ಲಭ್ಯವಿರುವ ವರದಿಗಳು ಮತ್ತು ಪ್ರಾಥಮಿಕ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಅಧಿಕೃತ ಮಾಹಿತಿ ಬದಲಾಗುವ ಸಾಧ್ಯತೆ ಇರುತ್ತದೆ. 

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top