ಡೆಸ್ಕ್ : ನೀವು ಮಳೆ ಬಿದ್ದ ನಂತರ ಮಳೆ ನೀರಿನಲ್ಲೇ ಬೈಕ್ ಚಲಾಯಿಸುತ್ತೀರಾ? ಹಾಗಾದ್ರೆ ಈ ವೈರಲ್ ವಿಡಿಯೋ ಒಮ್ಮೆ ನೋಡಲೇ ಬೇಕು.! ಏಕಂತ್ತೀರಾ? ಇಂತಹ ಘಟನೆ ಗುಜರಾತ್‌ನ ಜುನಾಗಢದಲ್ಲಿ ನಡೆದಿದ್ದು, ಮಳೆಯಿಂದ ನೀರು ತುಂಬಿದ್ದ ರಸ್ತೆ ಗುಂಡಿಗೆ ಬೈಕ್ ಬಿದ್ದು ದಂಪತಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತದ ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ದೇಶದ ವಿವಿಧ ಭಾಗಗಳಲ್ಲಿ ರಸ್ತೆ ಅವಘಡಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತಿರುವುದು ನಾವು ಗಮನಿಸಿರುತ್ತೇವೆ. ಹೀಗೆ ಮಳೆಗಾಲದಲ್ಲಿ ಅದು ಮಳೆ ನೀರಿನಿಂದ ತುಂಬಿದ್ದ ರಸ್ತೆಯಲ್ಲಿ ಬೈಕ್ ಆಗಿರಲಿ ಅಥವಾ ಇನ್ಯಾವುದೇ ವಾಹನವಾಗಿರಲಿ ತುಂಬಾ ಜಾಗರೂಕರಾಗಿ ಚಲಾಯಿಸಬೇಕು. ಸದ್ಯ ಈ ಘಟನೆ ಎಲ್ಲರಿಗೂ ಉದಾಹರಣೆಯಾಗುತ್ತದೆ.
ಈ ಘಟನೆ ಗುಜರಾತ್ ರಾಜ್ಯದಲ್ಲಿ ನಡೆದಿದ್ದು, ಮಳೆಯಿಂದ ರಸ್ತೆ ಮೇಲೆ ನೀರು ತುಂಬಿಕೊಂಡಿದ್ದ ಗುಂಡಿಯನ್ನು ಗುರುತಿಸಲು ಸಾಧ್ಯವಾಗದೆ ಬೈಕ್ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡ ಪರಿಣಾಮ ದಂಪತಿಗಳು ಬೈಕ್‌ನಿಂದ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆ ನೀರಿನಲ್ಲೇ ಬೈಕ್ ಚಲಾಯಿಸುತ್ತೀರಾ? ಈ ವಿಡಿಯೋ ನೋಡಿ :
View this post on Instagram
Courtesy : Social Media / Instagram
ವರದಿಗಳ ಪ್ರಕಾರ, ಈ ಅವಘಡ ಗುಜರಾತಿನ ಜುನಾಗಢ ನಗರದಲ್ಲಿ ಗುರುವಾರ (ಜುಲೈ 2) ಸಂಭವಿಸಿದೆ. ಭಾರಿ ಮಳೆಯ ಹಿನ್ನೆಲೆ ನಗರದಲ್ಲಿನ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆ ಮೇಲಿನ ಗುಂಡಿಗಳು ವಾಹನ ಸವಾರರಿಗೆ ಕಾಣದ ಸ್ಥಿತಿ ನಿರ್ಮಾಣವಾಗಿತ್ತು. ಇದೇ ಪರಿಸ್ಥಿತಿ ಈ ಅಪಘಾತಕ್ಕೂ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ, ಯುವಕನ ಜೊತೆ ಡೇಟ್; 4 ವರ್ಷಗಳ ಬಳಿಕ ಖಾಸಗಿ ವಿಡಿಯೋ ವೈರಲ್!
ವಿಡಿಯೋದಲ್ಲೇನಿದೇ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ದಂಪತಿಗಳು ಬೈಕ್‌ನಲ್ಲಿ ಸಾಮಾನ್ಯವಾಗಿ ಸಂಚರಿಸುತ್ತಿರುವುದು ಕಾಣಿಸುತ್ತದೆ. ಆದರೆ ಮಳೆಯಿಂದ ರಸ್ತೆ ಮೇಲೆ ತುಂಬಿಕೊಂಡಿದ್ದ ನೀರಿನೊಳಗೆ ಆಳವಾದ ಗುಂಡಿ ಇರುವುದನ್ನು ಬೈಕ್ ಸವಾರ ಗುರುತಿಸಲು ಸಾಧ್ಯವಾಗಿಲ್ಲ. ಪರಿಣಾಮ ವೇಗವಾಗಿ ಬರುತ್ತಿದ್ದ ಬೈಕ್ ನೇರವಾಗಿ ಗುಂಡಿಗೆ ಇಳಿದಿದ್ದು, ಕ್ಷಣಾರ್ಧದಲ್ಲಿ ಬೈಕ್‌ನ ನಿಯಂತ್ರಣ ತಪ್ಪಿ ಇಬ್ಬರೂ ದಂಪತಿಗಳು ರಸ್ತೆಗೆ ಬಿದ್ದಿದ್ದಾರೆ.
ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆ ಬೀಳಲ್ಪಟ್ಟಿರುವ ಸಂಗತಿ ದೃಶ್ಯಗಳಲ್ಲಿ ಕಂಡುಬಂದಿದೆ. ಘಟನೆ ನಡೆದ ಕೂಡಲೇ ಸ್ಥಳೀಯ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ ಗಾಯಗೊಂಡ ದಂಪತಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರಿಗೂ ಗಂಭೀರ ಗಾಯಗಳಾಗಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.
ತೆರೆದ ಒಳಚರಂಡಿಗೆ ಬಿದ್ದು ವೃದ್ಧನ ಸಾವು :
ಈ ಘಟನೆಗೆ ಮುನ್ನವೇ ಮುಂಬೈನಲ್ಲಿ ತೆರೆದ ಒಳಚರಂಡಿಗೆ ಬಿದ್ದು ವೃದ್ಧನೊಬ್ಬ ಮೃತಪಟ್ಟ ಘಟನೆ ದೇಶದ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ ಮತ್ತೆ ಇಂತಹ ಘಟನೆ ವರದಿಯಾಗಿರುವುದು ನಗರ ಮೂಲಸೌಕರ್ಯಗಳ ದುಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
ಈ ಸುದ್ದಿಯನ್ನು ಓದಿ : ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ ಸ್ಫೋಟ; 4 ಜನ ಸಜೀವ ದಹನ, CCTV ವಿಡಿಯೋ ವೈರಲ್.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಬಂದಾಕ್ಷಣ ರಸ್ತೆಗಳ ಗುಂಡಿಗಳು ಜೀವಕ್ಕೆ ಅಪಾಯವಾಗುತ್ತಿರುವಾಗ, ಸಂಬಂಧಪಟ್ಟ ಸ್ಥಳೀಯ ಆಡಳಿತ ಹಾಗೂ ನಾಗರಿಕ ಸಂಸ್ಥೆಗಳು ಏಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ.
ಸಂಪಾದಕೀಯ :
- ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವ ಪ್ರದೇಶಗಳಲ್ಲಿ ವಾಹನ ಸವಾರರು ಅತೀವ ಎಚ್ಚರಿಕೆಯಿಂದ ಸಂಚರಿಸಬೇಕು.
- ವಿಶೇಷವಾಗಿ ಬೈಕ್ ಸವಾರರು ವೇಗ ನಿಯಂತ್ರಿಸಿ, ನೀರು ತುಂಬಿರುವ ಸ್ಥಳಗಳಲ್ಲಿ ನಿಧಾನವಾಗಿ ಸಾಗುವುದು ಅತ್ಯಗತ್ಯ.
- ರಸ್ತೆ ಸುರಕ್ಷತೆ ಕೇವಲ ವಾಹನ ಸವಾರರ ಜವಾಬ್ದಾರಿ ಮಾತ್ರವಲ್ಲ, ಸುರಕ್ಷಿತ ರಸ್ತೆ ನಿರ್ಮಾಣ ಮಾಡುವುದು ಆಡಳಿತದ ಪ್ರಮುಖ ಕರ್ತವ್ಯವೂ ಆಗಿದೆ.
ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಸುದ್ದಿ ವರದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ತನಿಖೆ ಅಥವಾ ಅಧಿಕೃತ ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಮಾಹಿತಿ ಬದಲಾಗುವ ಸಾಧ್ಯತೆ ಇದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ಈ ಮಳೆ ನೀರಿನಲ್ಲೇ ಬೈಕ್ ಚಲಾಯಿಸುತ್ತೀರಾ? ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಸುದ್ದಿ ವರದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ತನಿಖೆ ಅಥವಾ ಅಧಿಕೃತ ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಮಾಹಿತಿ ಬದಲಾಗುವ ಸಾಧ್ಯತೆ ಇದೆ.







