ಒಮ್ಮೆ ಹಾವು ಕಚ್ಚಿದರೇ ಎಷ್ಟು ವಿಷ ದೇಹ ಸೇರುತ್ತೆ ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೋ ವೈರಲ್!

ಒಮ್ಮೆ ಹಾವು ಕಚ್ಚಿದರೇ ಎಷ್ಟು ವಿಷ ದೇಹ ಸೇರುತ್ತೆ ಗೊತ್ತಾ?

ಡೆಸ್ಕ್‌ : ಯಾರಿಗಾದರೂ ಒಮ್ಮೆ ಹಾವು ಕಚ್ಚಿದರೇ ನಮ್ಮ ದೇಹಕ್ಕೆ ಎಷ್ಟು ವಿಷ ಸೇರುತ್ತೆ ಎನ್ನುವ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆಯಾಗಿರಬಹುದು? ಹಾಗಾದ್ರೆ ಒಮ್ಮೆ ಹಾವು ಕಚ್ಚಿದರೇ ಎಷ್ಟು ವಿಷ ದೇಹ ಸೇರುತ್ತೆ ಗೊತ್ತಾ? ಬನ್ನಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ವಿಡಿಯೋ ಒಂದು ವೈರಲ್ ಆಗಿದೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಮನರಂಜನೆ ನೀಡಿದರೆ, ಇನ್ನೂ ಕೆಲವು ಬೆಚ್ಚಿಬೀಳಿಸುವಂತಹ ದೃಶ್ಯಗಳಿಂದ ಗಮನ ಸೆಳೆಯುತ್ತವೆ. ಇದೀಗ ಇದೇ ರೀತಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿಡಿಯೋ ನೋಡಿ ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹಾವೊಂದು ಪ್ಲಾಸ್ಟಿಕ್ ಚಪ್ಪಲಿಯನ್ನು ಬಾಯಿಯಲ್ಲಿ ಬಿಗಿಯಾಗಿ ಕಚ್ಚಿರುವುದು ಕಾಣಿಸುತ್ತದೆ. ಅದಾದ ಬಳಿಕ ಅದು ತನ್ನ ಕೋರೆಹಲ್ಲುಗಳಿಂದ ಚಪ್ಪಲಿಯ ಮೇಲೆಯೇ ದ್ರವರೂಪದ ವಿಷವನ್ನು ಹೊರಹಾಕುತ್ತಿರುವ ದೃಶ್ಯ ಗಮನ ಸೆಳೆಯುತ್ತದೆ.

ಹಾವು ಒಂದೇ ಬಾರಿ ಅಲ್ಲ, ನಿರಂತರವಾಗಿ ವಿಷವನ್ನು ಹೊರಹಾಕುತ್ತಿರುವಂತೆ ಕಂಡುಬರುವುದರಿಂದ ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ.

ಸಾಮಾನ್ಯವಾಗಿ ಹಾವುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಥವಾ ಬೇಟೆಯಾಡುವ ಸಂದರ್ಭದಲ್ಲಿ ವಿಷವನ್ನು ಬಳಸುತ್ತವೆ. ಆದರೆ ಈ ವಿಡಿಯೋದಲ್ಲಿನ ಹಾವಿನ ವರ್ತನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಓರ್ವ ವ್ಯಕ್ತಿ ಹಾವನ್ನು ಯಾವ ಉದ್ದೇಶವಿಟ್ಟು ಚಪ್ಪಲಿಯಂದ ಚುಚ್ಚಿದರೋ ಗೊತ್ತಿಲ್ಲ, ಆದರೆ ಚಪ್ಪಲಿ ಮೇಲೆಯೇ ಇಷ್ಟು ಪ್ರಮಾಣದಲ್ಲಿ ವಿಷವನ್ನು ಹೊರಹಾಕುತ್ತಿರುವುದನ್ನು ನೋಡಿ, ಅದು ತೀವ್ರ ಆಕ್ರಮಣಕಾರಿ ಸ್ಥಿತಿಯಲ್ಲಿತ್ತೇ ಅಥವಾ ಬೇರೆ ಕಾರಣದಿಂದ ಈ ರೀತಿ ವರ್ತಿಸಿತ್ತೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.

ವಿಷಕಾರುತ್ತಿರುವ ಹಾವಿನ ವಿಡಿಯೋ :

Courtesy : Social Media / Twitter

ವಿಡಿಯೋ ನೋಡಿದರೆ ಒಂದಿಷ್ಟು ಅಂಶಗಳು ಗಮನಕ್ಕೆ ಬರುತ್ತದೆ. ವಿಡಿಯೋದಲ್ಲಿ ಪ್ರಾರಂಭದಿಂದ ಎಲ್ಲವನ್ನು ತೋರಿಸದೇ ಕೇವಲ ವಿಷಕಾರುವ ದೃಶ್ಯ ಮಾತ್ರ ತೋರಿಸಲಾಗುತ್ತದೆ. ಇದರಿಂದ ಒಂದಂತ್ತು ಸ್ಪಷ್ಟ, ಏನೆಂದರೆ ಅವರು ಹಾವನ್ನು ಚುಚ್ಚಿರುವುದೇ ಅದು ಎಷ್ಟು ವಿಷಕಾರುತ್ತೇ ಅಂಥ ತಿಳಿಯಲು.

ನಿರಂತರ ವಿಷಕಾರಿದ ಹಾವು :

ಇನ್ನು ಸಾಮಾನ್ಯವಾಗಿ ಹಾವುಗಳು ಮನುಷ್ಯರ ಬಣ್ಣಿಗೆ ಬಿದ್ದಾಗ ಸಾಧ್ಯವಾದಷ್ಟು ಅವು ಮನುಷ್ಯರಿಂದ ದೂರ ಹೋಗಲು ಬಯಸುತ್ತವೆ. ಆದರೆ ಇಲ್ಲಿ ಹಾವು ಇಷ್ಟು ಪ್ರಮಾಣದಲ್ಲಿ ನಿರಂತರ ವಿಷಕಾರುವುದನ್ನು ಗಮನಿಸಿದರೆ, ಆ ವ್ಯಕ್ತಿ ಸುಮಾರು ಸಲ ಆ ಹಾವನ್ನು ಕೆಣಕಿರುವ ಬಗ್ಗೆ ಸಂಶವ್ಯಕ್ತವಾಗುತ್ತದೆ.

ಈ ದೃಶ್ಯ ವೈರಲ್ ಆದ ನಂತರ ಸಾವಿರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಇಂತಹ ದೃಶ್ಯವನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ” ಎಂದು ಕೆಲವರು ಹೇಳಿದರೆ, “ಇನ್ಮುಂದೆ ಹೊರಗೆ ಬಿಟ್ಟಿರುವ ಚಪ್ಪಲಿ ಅಥವಾ ಶೂಗಳನ್ನು ಧರಿಸುವ ಮೊದಲು ಕಡ್ಡಾಯವಾಗಿ ಪರಿಶೀಲಿಸುತ್ತೇವೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೆಲವರು ಹಾವಿನ ವಿಷದ ಪ್ರಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿಡಿಯೋದ ನೈಜತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಮಳೆಗಾಲ ಸೇರಿದಂತೆ ವಿವಿಧ ಋತುಗಳಲ್ಲಿ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ವಿಶೇಷವಾಗಿ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ಪೊದೆಗಳು ಹಾಗೂ ಕಸವನ್ನು ತೆರವುಗೊಳಿಸುವುದು, ರಾತ್ರಿ ವೇಳೆ ಟಾರ್ಚ್ ಬಳಸಿ ಓಡಾಡುವುದು ಮತ್ತು ಚಪ್ಪಲಿ ಅಥವಾ ಶೂಗಳನ್ನು ಧರಿಸುವ ಮೊದಲು ಅವುಗಳ ಒಳಭಾಗವನ್ನು ಪರಿಶೀಲಿಸುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಅಭ್ಯಾಸವಾಗಿದೆ.

ವೈರಲ್ ವಿಡಿಯೋಗಳು ಕೆಲವೊಮ್ಮೆ ಭಯ ಹುಟ್ಟಿಸುವಂತಿದ್ದರೂ, ಅವುಗಳನ್ನು ಅಂತಿಮ ಸತ್ಯ ಎಂದು ನಂಬುವ ಮುನ್ನ ಅವುಗಳ ಹಿನ್ನೆಲೆ ಮತ್ತು ನೈಜತೆಯನ್ನು ಪರಿಶೀಲಿಸುವುದು ಮುಖ್ಯ. ಅದೇ ವೇಳೆ, ಹಾವುಗಳಂತಹ ವಿಷಕಾರಿ ಜೀವಿಗಳ ಬಗ್ಗೆ ಜಾಗೃತಿ ಹೊಂದಿರುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅನಾಹುತಗಳನ್ನು ತಪ್ಪಿಸಲು ಸಹಕಾರಿ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ವಿಡಿಯೋದ ಸ್ಥಳ, ಸಮಯ, ಹಾವಿನ ಜಾತಿ ಹಾಗೂ ದೃಶ್ಯದ ನಿಖರತೆಯನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ. ಹಾವುಗಳನ್ನು ಕಂಡರೆ ಹಿಡಿಯಲು ಅಥವಾ ಕೆಣಕಲು ಪ್ರಯತ್ನಿಸದೆ, ತಕ್ಷಣ ಅರಣ್ಯ ಇಲಾಖೆ ಅಥವಾ ಸ್ಥಳೀಯ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top