ಆರೋಗ್ಯ : ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಸದ್ಯಕ್ಕೆ ದಿನಗಳಲ್ಲಿ ಅತೀ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಹೃದಯ ಆರೋಗ್ಯ ಕಾಪಾಡುವ ಶಕ್ತಿಶಾಲಿ ಹಣ್ಣು ರಾಸ್‌ಬೆರಿ (Raspberry) . ಬನ್ನಿ ಈ ಹಣ್ಣಿನ ಬಗ್ಗೆ ಇಂದು ತಿಳಿಯೋಣ.!
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಸಮಸ್ಯೆ ಅದರಲ್ಲೂ ಯುವಕರಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅಸ್ವಸ್ಥ ಆಹಾರ ಪದ್ಧತಿ, ಒತ್ತಡದ ಜೀವನಶೈಲಿ ಹಾಗೂ ವ್ಯಾಯಾಮದ ಕೊರತೆ (Unhealthy diet, stressful lifestyle and lack of exercise) ಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ.
ಆದರೆ ಕೆಲವು ಆರೋಗ್ಯಕರ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅಂತಹ ಹಣ್ಣುಗಳಲ್ಲಿ ರಾಸ್‌ಬೆರಿ (Raspberry) ಪ್ರಮುಖ ಸ್ಥಾನ ಪಡೆದಿದೆ. ಇದು ಕೇವಲ ರುಚಿಕರ ಹಣ್ಣು ಮಾತ್ರವಲ್ಲದೆ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುವ ಸೂಪರ್‌ಫುಡ್ (Superfood) ಆಗಿಯೂ ಪರಿಗಣಿಸಲಾಗುತ್ತದೆ.
ರಾಸ್‌ಬೆರಿ ಹಣ್ಣು ಯಾಕೆ ವಿಶೇಷ?
ರಾಸ್‌ಬೆರಿ ಹಣ್ಣಿನಲ್ಲಿ ವಿಟಮಿನ್ ಸಿ (Vitamin C), ವಿಟಮಿನ್ ಇ (Vitamin E), ಆಂಥೋಸಯಾನಿನ್ (Anthocyanins), ಫ್ಲೇವನಾಯ್ಡ್‌ಗಳು (Flavonoids) ಹಾಗೂ ಫೈಬರ್ (Fiber) ಸಮೃದ್ಧವಾಗಿವೆ. ಇವು ದೇಹದಲ್ಲಿನ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಿ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ :
ಈ ಹಣ್ಣಿನ ಪ್ರಮುಖ ಲಾಭಗಳಲ್ಲಿ ಒಂದು ಎಂದರೆ ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಲ್ಲಿ ಇರುವ ಪೊಟ್ಯಾಸಿಯಮ್ (Potassium) ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಹೀಗಾಗಿ ಹೃದಯರಕ್ತನಾಳದ ಸಮಸ್ಯೆಗಳ ಅಪಾಯ ಕಡಿಮೆಯಾಗಬಹುದು.
ಇದನ್ನು ಓದಿ : ಪ್ಯಾಕೆಟ್ ಹಾಲು ಬಳಸುತ್ತೀರಾ? ಹಾಲನ್ನು ಎಷ್ಟು ಸಮಯ ಕುದಿಸಬೇಕು; ತಜ್ಞರು ಹೇಳಿದ್ದು ಏನು?
ಹೃದಯ ಆರೋಗ್ಯಕ್ಕೆ ಉತ್ತಮ :
ಈ ಹಣ್ಣಿನಲ್ಲಿ ಇರುವ ಪಾಲಿಫಿನಾಲ್‌ಗಳು (Polyphenols) ಹಾಗೂ ಆಂಟಿಆಕ್ಸಿಡೆಂಟ್‌ಗಳು (Antioxidants) ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಜೊತೆಗೆ ದೇಹದ ಉರಿಯೂತವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.
ತೂಕ ಇಳಿಕೆಗೆ ಸಹಕಾರಿ :
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ Raspberry ಹಣ್ಣು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಕಡಿಮೆ ಕ್ಯಾಲೊರಿ (Low Calories) ಹಾಗೂ ಹೆಚ್ಚು ಫೈಬರ್ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೀಗಾಗಿ ಅತಿಯಾಗಿ ಆಹಾರ ಸೇವಿಸುವುದನ್ನು ತಪ್ಪಿಸಬಹುದು.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ :
Raspberry ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (Low Glycemic Index) ಹೊಂದಿರುವ ಹಣ್ಣು. ಆದ್ದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಹೆಚ್ಚಿಸದೆ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮಧುಮೇಹ (Diabetes) ಇರುವವರು ಕೂಡ ಮಿತವಾಗಿ ಸೇವಿಸಬಹುದು.
ಮೆದುಳಿನ ಆರೋಗ್ಯಕ್ಕೂ ಲಾಭ :
ರಾಸ್‌ಬೆರಿ ಹಣ್ಣಿನಲ್ಲಿ ಇರುವ ಉತ್ಕರ್ಷಣ ನಿರೋಧಕ ಗುಣಗಳು ಮೆದುಳಿನ ಆರೋಗ್ಯಕ್ಕೂ ಸಹಕಾರಿ. ಇದು ಸ್ಮರಣಶಕ್ತಿ (Memory Power) ಹೆಚ್ಚಿಸಲು ಹಾಗೂ ವಯೋಸಹಜ ನರ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಚರ್ಮದ ಆರೈಕೆಗೆ ಸಹಕಾರಿ :
ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಯೌವ್ವನ ಕಾಪಾಡಲು ಸಹಕಾರಿ. ಇದನ್ನು ಸೇವನೆಯಿಂದ ಚರ್ಮದ ಸುಕ್ಕುಗಳು, ಕಲೆಗಳು ಕಡಿಮೆಯಾಗಲು ನೆರವಾಗಬಹುದು.
ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಆಹಾರದ ಜೊತೆಗೆ ರಾಸ್‌ಬೆರಿ ಹಣ್ಣು ಸೇವಿಸುವುದು ದೇಹದ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯಕವಾಗಬಹುದು.
ಯಾರು ಸೇವಿಬಾರದು ?
ರಾಸ್‌ಬೆರಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದಾದರೂ ಕೆಲವರು ಎಚ್ಚರಿಕೆಯಿಂದ ಸೇವಿಸಬೇಕು.
- ಅಲರ್ಜಿ ಸಮಸ್ಯೆ ಇರುವವರು ರಾಸ್‌ಬೆರಿ ತಿಂದರೆ ಚರ್ಮದಲ್ಲಿ ಕೆರಡು ಅಥವಾ ಉರಿ ಕಾಣಿಸಬಹುದು.
- ಮಧುಮೇಹ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
- ಜೀರ್ಣಕ್ರಿಯೆ ದುರ್ಬಲವಾಗಿರುವವರಿಗೆ ಹೆಚ್ಚು ತಿಂದರೆ ಹೊಟ್ಟೆ ಉಬ್ಬರ ಅಥವಾ ಅಸ್ವಸ್ಥತೆ ಉಂಟಾಗಬಹುದು.
- ಕಿಡ್ನಿ ಸಮಸ್ಯೆ ಇರುವವರು ಕೂಡ ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಒಳ್ಳೆಯದು.
Disclaimer: ಈ ಲೇಖನವು (Raspberry) ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಆಹಾರ ಪದ್ಧತಿ ಬದಲಾವಣೆಗೂ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಒಳಿತು.





