ಆರೋಗ್ಯ ಮಾಹಿತಿ : ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪದಾರ್ಥಗಳಲ್ಲಿ ಬೆಳ್ಳುಳ್ಳಿ (Garlic) ಸಹ ಒಂದು. ಹಾಗಾದ್ರೆ ಈ ಬೆಳ್ಳುಳ್ಳಿ (ಗಾರಲಿಕ್) ಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೊಂದು ಅದ್ಭುತ ಪ್ರಯೋಜನಗಳಿವೆ ಗೊತ್ತಾ? ಬನ್ನಿ ಆ ಅದ್ಬುತ ಪ್ರಯೋಜನಗಳ ಬಗ್ಗೆ ತಿಳಿಯೋಣ.!
ಭಾರತೀಯ ಅಡುಗೆ ಮನೆಯಲ್ಲಿ ಬಹುತೇಕ ಪ್ರತಿದಿನ ಬಳಸುವ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಪ್ರಮುಖ ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಅಡುಗೆಯ ರುಚಿ ಹೆಚ್ಚಿಸಲು ಬಳಸಲಾಗುವ ಗಾರಲಿಕ್, ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಎನ್ನುವುದು ಹಲವು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.
ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಿತ ಪ್ರಮಾಣದಲ್ಲಿ ಕಚ್ಚಾ ಗಾರಲಿಕ್ ಸೇವಿಸುವ ಅಭ್ಯಾಸ ದೇಹಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಅದ್ಭುತ ಪ್ರಯೋಜನಗಳು :
ಬೆಳ್ಳುಳ್ಳಿಯಲ್ಲಿ “ಅಲಿಸಿನ್” (Allicin) ಎಂಬ ಸಕ್ರಿಯ ನೈಸರ್ಗಿಕ ಸಂಯುಕ್ತವಿದ್ದು, ಇದು ಆಂಟಿ-ಆಕ್ಸಿಡೆಂಟ್, ಆಂಟಿ-ಬ್ಯಾಕ್ಟೀರಿಯಲ್ ಹಾಗೂ ಆಂಟಿ-ಇನ್ಫ್ಲಮೇಟರಿ ಗುಣಗಳನ್ನು ಹೊಂದಿದೆ.
ಬೆಳ್ಳುಳ್ಳಿಯನ್ನು ಜಗಿದು ಅಥವಾ ಪುಡಿಮಾಡಿದಾಗ ಇದರಲ್ಲಿ ಸಂಯುಕ್ತಗಳು ಸಕ್ರಿಯವಾಗುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕ ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ.
ಈ ಸುದ್ದಿಯನ್ನು ಓದಿ : ಪ್ರೀತಿಯ ಗೆಳತಿಗೆ ಗಿಫ್ಟ್; ಕಣ್ಣ ಮುಂದಿನ ದೃಶ್ಯ ನೋಡಿ ಪ್ರಿಯಕರನೇ ಶಾಕ್!
ಆರೋಗ್ಯ ತಜ್ಞರ ಪ್ರಕಾರ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಗಾರಲಿಕ್ ಎಸಳು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಬಹುದು. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುವುದರಿಂದ ಜೀರ್ಣಾಂಗದ ಕಾರ್ಯಕ್ಷಮತೆಯನ್ನ ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಜೊತೆಗೆ ಆಹಾರದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಹೀರಿಕೊಳ್ಳಲು ಸಹಕಾರಿ ಆಗಬಹುದು. ಹೃದಯ ಆರೋಗ್ಯಕ್ಕೂ ಗಾರಲಿಕ್ ಉಪಯುಕ್ತ ಎನ್ನಲಾಗುತ್ತದೆ.
ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ :
ಇದರಲ್ಲಿರುವ ನೈಸರ್ಗಿಕ ಸಂಯುಕ್ತಗಳು ರಕ್ತನಾಳಗಳ ಕಾರ್ಯವನ್ನು ಬೆಂಬಲಿಸಿ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ನೆರವಾಗಬಹುದು. ಇದರ ಪರಿಣಾಮವಾಗಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ಎಚ್ಚರ! ಎಕ್ಸ್‌ಪೈರಿ ಡೇಟ್ ಮೀರಿದ ಬಳಿಕ ಈ 10 ಆಹಾರಗಳನ್ನು ಸೇವಿಸಲೇಬೇಡಿ.
ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ಗಾರಲಿಕ್ ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ಸಹಕಾರಿಯಾಗಬಹುದು. ಮಧುಮೇಹದ ಅಪಾಯ ಕಡಿಮೆ ಮಾಡುವುದು, ಮೆಟಾಬಾಲಿಸಂ ಸುಧಾರಿಸುವುದು ಹಾಗೂ ದೇಹದ ಡಿಟಾಕ್ಸ್ ಪ್ರಕ್ರಿಯೆಗೆ ಸಹಾಯ ಮಾಡುವುದಲ್ಲದೆ, ಕೆಲವರಿಗೆ ತೂಕ ನಿಯಂತ್ರಣದಲ್ಲಿಯೂ ನೆರವಾಗಬಹುದು ಎಂದು ಹೇಳಲಾಗುತ್ತಿದೆ.
ಬೆಳ್ಳುಳ್ಳಿ ದುಷ್ಪರಿಣಾಮ :
- ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಕೆಲವರಿಗೆ ಹೊಟ್ಟೆ ಉರಿ, ಗ್ಯಾಸ್ಟ್ರಿಕ್ ಹಾಗೂ ಅಜೀರ್ಣ ಸಮಸ್ಯೆ ಕಾಣಿಸಬಹುದು.
- ಕೆಲವರಲ್ಲಿ ಬಾಯಿಯ ದುರ್ವಾಸನೆ ಮತ್ತು ವಾಕರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.
- ರಕ್ತ ತೆಳುವಾಗಿಸುವ ಔಷಧಿ ತೆಗೆದುಕೊಳ್ಳುವವರು ಹೆಚ್ಚು ಗಾರಲಿಕ್ ಸೇವಿಸಿದರೆ ರಕ್ತಸ್ರಾವದ ಅಪಾಯ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
- ಕೆಲವರಿಗೆ ಇದು ಅಲರ್ಜಿ ಅಥವಾ ಚರ್ಮದ ಉರಿಯೂತ ಉಂಟುಮಾಡಬಹುದು. ಆದ್ದರಿಂದ ಬೆಳ್ಳುಳ್ಳಿಯನ್ನು ಯಾವಾಗಲೂ ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.
ಸಂಪಾದಕೀಯ :
ನೈಸರ್ಗಿಕ ಆಹಾರ ಪದಾರ್ಥಗಳು ದೇಹಕ್ಕೆ ಅನೇಕ ರೀತಿಯಲ್ಲಿ ಸಹಕಾರಿಯಾಗಬಹುದು. ಆದರೆ ಯಾವುದನ್ನೂ ಔಷಧಿಗೆ ಪರ್ಯಾಯ ಎಂದು ಪರಿಗಣಿಸುವುದು ಸರಿಯಲ್ಲ. ಸಮತೋಲಿತ ಆಹಾರ, ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯ ಜೊತೆಗೆ ಇಂತಹ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಬಹುದು.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





