ಆರೋಗ್ಯ ಮಾಹಿತಿ : ಕೆಲವರು ಊಟ ಮಾಡಿದ ನಂತರ ಪಾನ್ (Paan) ತಿನ್ನುವುದನ್ನು ರೂಢಿಸಿಕೊಂಡಿರುತ್ತಾರೆ, ಆದರೆ ಈ ಸಮಸ್ಯೆ ಇರುವವರು ಪಾನ್ (ತಾಂಬೂಲ) ತಿನ್ನದೇ ದೂರ ಉಳಿಯುವುದು ಒಳಿತು ಅಂತ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಯಾರು Paan ತಿನ್ನಬಾರದು? ಬನ್ನಿ ತಿಳಿಯೋಣ.!
ಭಾರತದಲ್ಲಿ ಪಾನ್ (Paan) ಅಥವಾ ತಾಂಬೂಲ ಸೇವನೆ ಒಂದು ಹಳೆಯ ಸಂಪ್ರದಾಯವಾಗಿದೆ. ಊಟದ ನಂತರ ತಾಂಬೂಲ ತಿಂದರೆ ಬಾಯಿ ಫ್ರೆಶ್ ಆಗುತ್ತದೆ, ಜೀರ್ಣಕ್ರಿಯೆ (Digestion) ಸುಧಾರಿಸುತ್ತದೆ ಎಂಬ ನಂಬಿಕೆ ಹಲವರಲ್ಲಿದೆ.
ನಗರದಿಂದ ಗ್ರಾಮಗಳವರೆಗೆ ಬಹುತೇಕ ಎಲ್ಲೆಡೆ ತಾಂಬೂಲ ಅಂಗಡಿಗಳು ಕಾಣಸಿಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಸಾಲೆ ಪಾನ್, ಮೀಠಾ ಪಾನ್, ಫೈರ್ ಪಾನ್‌ಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ವಿಶೇಷವಾಗಿ ಸುಣ್ಣ (Lime), ತಂಬಾಕು (Tobacco), ಅಡಿಕೆ (Areca Nut), ಸಕ್ಕರೆ ಪಾಕ ಹಾಗೂ ಕೃತಕ ಸುವಾಸನೆಗಳನ್ನು ಹೊಂದಿರುವ Paan ಗಳು ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಗಂಭೀರ ತೊಂದರೆ ಉಂಟುಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಪಾನ್‌ನಲ್ಲಿರುವ ಅಪಾಯಕಾರ ಅಂಶಗಳು :
ಸಾಂಪ್ರದಾಯಿಕ ವೀಳ್ಯದೆಲೆ (Betel Leaf) ಕೆಲಮಟ್ಟಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು. ಆದರೆ ಇಂದಿನ ಮಿಶ್ರ Paan ಗಳಲ್ಲಿ ಬಳಸುವ ರಾಸಾಯನಿಕಗಳು ಮತ್ತು ಹೆಚ್ಚುವರಿ ಸಿಹಿ ಪದಾರ್ಥಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
ಕೆಲ Paan ಗಳಲ್ಲಿ ಅಧಿಕ ಪ್ರಮಾಣದ ಸಕ್ಕರೆ ಹಾಗೂ ಸುಣ್ಣ ಬಳಸಲಾಗುತ್ತದೆ. ಇದು ದೀರ್ಘಾವಧಿಯಲ್ಲಿ ಬಾಯಿ, ಹೊಟ್ಟೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಪಾನ್ ತಿನ್ನದೇ ಯಾರು ದೂರ ಇರಬೇಕು?
ಈ ಸುದಿಯನ್ನು ಓದಿ : ಅಂಗನವಾಡಿ ಹುದ್ದೆಗಳಿಗೆ ಭರ್ಜರಿ ನೇಮಕಾತಿ; ಮಹಿಳೆಯರಿಗೆ ಸರ್ಕಾರಿ ಕೆಲಸದ ಸುವರ್ಣಾವಕಾಶ.
ಗರ್ಭಿಣಿಯರು ದೂರ ಇರಬೇಕು :
ವೈದ್ಯರ ಪ್ರಕಾರ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ತಾಂಬೂಲ ಸೇವನೆ ತಪ್ಪಿಸುವುದು ಉತ್ತಮ. ತಾಂಬೂಲನಲ್ಲಿರುವ ಕೆಲವು ಅಂಶಗಳು ಗರ್ಭಾಶಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜೊತೆಗೆ ಸುಣ್ಣದ ಅಂಶವು ದೇಹದಲ್ಲಿ ಕಬ್ಬಿಣದ (Iron) ಹೀರಿಕೆಯನ್ನು ಕಡಿಮೆ ಮಾಡಬಹುದು.
ಮಧುಮೇಹಿಗಳಿಗೆ ಅಪಾಯ :
ಮೀಠಾ ತಾಂಬೂಲನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ (Sugar Syrup), ಗುಲ್ಕಂದ್ ಮತ್ತು ಸಿಹಿ ಪದಾರ್ಥಗಳನ್ನು ಬಳಸಲಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar Level) ತಕ್ಷಣ ಏರಿಕೆಯಾಗುವ ಸಾಧ್ಯತೆ ಇದೆ. ಡಯಾಬಿಟಿಸ್ ಇರುವವರು ಆಗಾಗ ತಾಂಬೂಲ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.
ಆಸಿಡಿಟಿ ಮತ್ತು ಅಲ್ಸರ್ ಇರುವವರು ಎಚ್ಚರ :
ಹೊಟ್ಟೆ ಹುಣ್ಣು (Ulcer), ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿ ಸಮಸ್ಯೆ ಇರುವವರು ತಾಂಬೂಲ ಸೇವಿಸಿದರೆ ಉರಿ, ನೋವು ಮತ್ತು ಅಸ್ವಸ್ಥತೆ ಹೆಚ್ಚಾಗಬಹುದು. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ತಾಂಬೂಲ ತಿನ್ನುವುದು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಅಧಿಕ ರಕ್ತದೊತ್ತಡ ಇರುವವರಿಗೆ ಸೂಕ್ತವಲ್ಲ :
Paanನಲ್ಲಿ ಬಳಸುವ ಕೆಲವು ಅಂಶಗಳು ಹೃದಯ ಬಡಿತವನ್ನು ಹೆಚ್ಚಿಸಿ ರಕ್ತದೊತ್ತಡ (Blood Pressure) ಏರಿಕೆಗೆ ಕಾರಣವಾಗಬಹುದು. ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಇದನ್ನು ಓದಿ : ಹೆಚ್ಚುತ್ತಿರುವ ಡಯಾಬಿಟಿಸ್‌ಗೆ ತಪ್ಪಾದ ಆಹಾರವೇ ಕಾರಣ? ಇದರಲ್ಲಿ ತುಪ್ಪದ ಪಾತ್ರವೇನು?
ಬಾಯಿ ಆರೋಗ್ಯದ ಮೇಲೂ ಪರಿಣಾಮ :
ಅತಿಯಾಗಿ Paan ಸೇವಿಸುವುದರಿಂದ ಬಾಯಿ ಹುಣ್ಣು, ವಸಡು ಸಮಸ್ಯೆ ಹಾಗೂ ಬಾಯಿ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ವಿಶೇಷವಾಗಿ ತಂಬಾಕು ಮಿಶ್ರಿತ Paan ಗಳು ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ವೈದ್ಯರ ಸಲಹೆ :
ತಜ್ಞರ ಪ್ರಕಾರ, ಶುದ್ಧ ವೀಳ್ಯದೆಲೆಯನ್ನು ಮಾತ್ರ ಮಿತ ಪ್ರಮಾಣದಲ್ಲಿ ಸೇವಿಸಿದರೆ ದೊಡ್ಡ ಸಮಸ್ಯೆ ಇಲ್ಲ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮಿಶ್ರ Paan ಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಿಯಾಗಬಹುದು. ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯದೇ Paan ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದಾರೆ.
ಪಾನ್ (Paan) :
- ಪ್ರಾಚೀನ ಕಾಲದಲ್ಲಿ ರಾಜಮನೆತನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೀಳ್ಯದೆಲೆ, ಅಡಿಕೆ ಮತ್ತು ಸುಗಂಧ ದ್ರವ್ಯಗಳಿಂದ ತಾಂಬೂಲ ನೀಡುವ ಪದ್ಧತಿ ಇದ್ದಿತು.
- ಆಯುರ್ವೇದದ ಪ್ರಕಾರ, ವೀಳ್ಯದೆಲೆ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ ಎಂಬ ನಂಬಿಕೆ ಇದೆ.
- ಕಾಲಕ್ರಮೇಣ ಸಂಪ್ರದಾಯದ ತಾಂಬೂಲವು ಮಸಾಲೆ, ಮೀಠಾ, ತಂಬಾಕು ಪಾನ್ ರೂಪದಲ್ಲಿ ಬದಲಾಗಿದ್ದು, ಇಂದು ಇದು ಆಹಾರ ಸಂಸ್ಕೃತಿಯ ಜೊತೆಗೆ ವ್ಯಾಪಾರಿಕ ಉದ್ಯಮವಾಗಿಯೂ ಬೆಳೆಯಲಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ಈ ತಾಂಬೂಲ (Paan) ಲೇಖನವು ಸಾರ್ವಜನಿಕ ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಇಲ್ಲಿ ನೀಡಿರುವ ಮಾಹಿತಿ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.





